Virat Jersey: ವಿರಾಟ್ ಕೊಹ್ಲಿ ಮತ್ತು 18 ನಂಬರ್ ಗೆ ಇದೆ ಅಪಾರ ಸಂಬಂಧ, ಜೀವನವನ್ನೇ ಬದಲಾಯಿಸಿದ 18.
ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18 ರ ಹಿಂದಿಯ ಕಥೆ ಏನು, ಕೊಹ್ಲಿ ಜೀವನವನ್ನ ಬದಲಾಯಿಸಿದ ನಂಬರ್ 18.
Virat Kohli Jersey Number 18: ಪ್ರಸ್ತುತ ಐಪಿಎಲ್ (IPL) ನ ಹದಿನಾರನೇ ಆವೃತ್ತಿ ನಡೆಯುತ್ತಿದೆ. ಕ್ರಿಕೆಟ್ ಪ್ರಿಯರು ಐಪಿಎಲ್ ನೋಡಲು ಬಹಳ ಕುತೂಹಲರಾಗಿದ್ದಾರೆ. ಈ ಬಾರಿಯ ಪಂದ್ಯ ಬಹಳ ರೋಚಕವಾಗಿದೆ. ಪ್ರಮುಖ ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಇನ್ನು ನಿನ್ನೆಯಷ್ಟೇ ಕನ್ನಡಿಗರ ನೆಚ್ಚಿನ ತಂಡವಾದ ಆರ್ ಸಿಬಿ (RCB) ಎದುರಾಳಿ ತಂಡದ ವಿರುದ್ಧ ಗೆದ್ದಿದೆ.
ಕ್ರಿಕೆಟ್ ಪ್ರಿಯರು ಆರ್ ಸಿಬಿ ಗೆಲುವನ್ನು ಆನಂದಿಸುತ್ತಿದ್ದಾರೆ. ಇನ್ನು ಈ ಬಾರಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ಅದ್ಭುತ ಪ್ರದರ್ಶವನ್ನು ನೀಡುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಅವರು ತಮ್ಮ ಜೆರ್ಸಿ ಮೇಲಿನ ಸಂಖ್ಯೆಯ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು 18 ನಂಬರ್ ಗೆ ಇದೆ ಅಪಾರ ಸಂಬಂಧ
ವಿರಾಟ್ ಕೊಹ್ಲಿ ಅವರು ತಮ್ಮ ಅದ್ಬುತ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನು ಆರ್ ಸಿಬಿ ತಂಡ ಈ ಬಾರಿ ಕಪ್ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಅವರು ತಮ್ಮ ಜೆರ್ಸಿ ಮೇಲಿರುವ ’18’ ನಂಬರ್ ಕುರಿತು ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಜೀವನವನ್ನ ಬದಲಾಯಿಸಿದ ನಂಬರ್ 198
ಮಾಡರ್ನ್ ಮಾಸ್ಟರ್ ಅವರು ಅಂಡರ್ -19 ಕ್ರಿಕೆಟ್ ಆಡಿದಾಗಲಿನಿಂದ ಅವರು ವಿರಾಟ್ 18 ನೇ ಸಂಖ್ಯೆಯ ಜರ್ಸಿಯನ್ನು ಧರಿಸಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹಿಂದಿನ ಜೆರ್ಸಿ ಸಂಖ್ಯೆ ನನಗೆ ಹೆಚ್ಚು ಅರ್ಥವಾಗಿರಲಿಲ್ಲ. ಆದರೆ ಅಂಡರ್ -19 ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ನಂತರ ನನಗೆ ಅದರ ಪ್ರಾಮುಖ್ಯತೆ ಸಾಕಷ್ಟು ಹೆಚ್ಚಾಗಿದೆ ಎಂದು ವಿರಾಟ್ ಹೇಳಿದ್ದಾರೆ.
ಇನ್ನು 18 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಪಾದಾರ್ಪಣೆ ಮಾಡಿರುವಾಗಿ ಹೇಳಿದ್ದಾರೆ. ವಿರಾಟ್ ಅವರು 18 ಸಂಖ್ಯೆಯೊಂದಿಗೆ ತಮ್ಮ ತಂದೆಯ ಜೊತೆ ಭಾವನಾತ್ಮಕ ಸಂಭಂದವನ್ನು ಹೊಂದಿದ್ದಾರೆ. ಇನ್ನು ಡಿಸೇಂಬರ್ 18 2006 ರಲ್ಲಿ ವಿರಾಟ್ ಕೊಹ್ಲಿ ಅವರ ತಂದೆ ನಿಧನ ಹೊಂದಿದ್ದರು.
ನನ್ನ ಜೆರ್ಸಿಯ 18 ಸಂಖ್ಯೆ ಎರಡು ಅವಿಸ್ಮರಣೀಯ ದಿನಗಳಿಗೆ ಸಂಬಂಧಿಸಿದೆ ಹಾಗೂ 18 ನಂಬರ್ ಜೆರ್ಸಿ ಧರಿಸುವುದು ನನಗೆ ವಿಶೇಷ ಭಾವನೆಯನ್ನು ನೀಡುತ್ತದೆ ಎಂದು ವಿರಾಟ್ ಕೊಹ್ಲಿ ತಮ್ಮ ಜೆರ್ಸಿ ಸಂಖ್ಯೆಯ ಬಗ್ಗೆ ಮಾತನಾಡಿದ್ದಾರೆ.