Virat Kohli Love Story: ಅನುಷ್ಕಾ ಶರ್ಮಾ ಜೊತೆಗಿನ ಮೊದಲ ಭೇಟಿಯ ಬಗ್ಗೆ ತಿಳಿಸಿದ ವಿರಾಟ್ ಕೊಹ್ಲಿ.
Virat Kohli And Anushka Sharma First Meet: ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಇದೀಗ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಬಗ್ಗೆ ಮಾತನಾಡಿದ್ದಾರೆ. ತಮ್ಮ ಜೀವನದಲ್ಲಿನ ಕೆಲವು ಸಿಹಿ ನೆನಪುಗಳನ್ನು ವಿರಾಟ್ ಕೊಹ್ಲಿ ನೆನಪಿಸಿಕೊಂಡಿದ್ದಾರೆ.
ಇನ್ನು ಅನುಷ್ಕಾ ಶರ್ಮಾ ಅವರನ್ನು ಭೇಟಿ ಆದ ಸಂದರ್ಭಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಡ್ ಕಾಸ್ಟ್ ಬಿಡುಗಡೆ ಮಾಡಿರುವ ಹೊಸ ಎಪಿಸೋಡ್ ನಲ್ಲಿ ವಿರಾಟ್ ಕೊಹ್ಲಿ ತಮ್ಮ ಜೀವನದಲ್ಲಿ ನಡೆದ ಕೆಲವು ಮಹತ್ವದ ಘಟನೆಗಳನ್ನು ಮೆಲುಕು ಹಾಕಿದ್ದಾರೆ.
ತಮ್ಮ ತಂದೆಯ ನಿಧನದ ನಂತರ ತಮ್ಮ ಕ್ರಿಕೆಟ್ ಬದುಕು ಏನಾಯ್ತು ಹಾಗೂ ನಂತರದ ಘಟನೆಗಳ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.
ತಮ್ಮ ತಂದೆಯ ನಿಧನದ ನಂತರದ ದಿನಗಳ ಬಗ್ಗೆ ಹೇಳಿಕೊಂಡ ಕೊಹ್ಲಿ
ನನ್ನ ತಂದೆಯ ನಿಧನದ ನಂತರ ಒಂದು ರೀತಿ ನಾನು ಹೊರಜಗತ್ತನ್ನು ನೋಡುವ ರೀತಿ ಬದಲಾಯಿತು. ಆದರೆ ನನ್ನೊಳಗಿನ ಬದುಕಿನಲ್ಲಿ ಹೆಚ್ಚಿನ ಬದಲಾವಣೆಗಳು ಆಗಿಲ್ಲ. ಹಿಂದಿನ ರೀತಿಯಲ್ಲಿ ಜೀವನ ನಡೆಯುತ್ತಿತ್ತು. ಈ ಘಟನೆಯ ಬಳಿಕ ನನ್ನಲ್ಲಿ ಪುಟಿದೇಳುವ ಸ್ವಭಾವ ಮತ್ತಷ್ಟು ಗಟ್ಟಿಯಾಯಿತು.
ಇದರ ಜೊತೆಗೆ ನನ್ನ ಬದುಕ್ನಲ್ಲಿ ನಾನೇನು ಸಾಧಿಸಬೇಕು ಎನ್ನುವ ಕಡೆ ನನ್ನ ಗಮನ ಕೇಂದ್ರೀಕೃತವಾಯಿತು. ನನ್ನ ಕನಸು ಈಡೇರಿಸಿಕೊಳ್ಳಲು ಮತ್ತಷ್ಟು ಪ್ರೇರಣೆ ಪಡೆದುಕೊಂಡೆ. ಆದರೆ ಹೀಗಿದ್ದೂ ನನ್ನ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ.
ಆ ಬಳಿಕವೂ ಕ್ರಿಕೆಟ್ ಆಡುವುದನ್ನು ಮುಂದುವರೆಸಿಕೊಂಡು ಹೋದೆ. ನಾನೇನು ಮಾಡಬೇಕೆಂದು ಇದ್ದೆನೋ ಅದನ್ನೇ ಮಾಡುತ್ತಿದ್ದೆ. ನನ್ನಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ ಎಂದು ಹೇಳಿದ್ದಾರೆ.
ತಮ್ಮ ಬದುಕು ಬದಲಿಸಿದ ಕ್ಷಣದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ
“ನಾನು ಅನುಷ್ಕಾ ಶರ್ಮಾ ಅವರನ್ನು ಭೇಟಿಯಾದಾಗ ನನ್ನ ಬದುಕಿನಲ್ಲಿ ಬದಲಾವಣೆಯನ್ನು ಕಂಡೆ. ಏಕೆಂದರೆ ಜೀವನದ ಮತ್ತೊಂದು ಭಾಗ ನನ್ನ ಅರಿವಿಗೆ ಬಂದಿತು. ಇದು ಈ ಹಿಂದೆ ಇದ್ದಂತ ಜೀವನವಾಗಿರಲಿಲ್ಲ ಮತ್ತು ಇದು ಬೇರೆಯದ್ದೇ ದ್ರಷ್ಟಿಕೋನವನ್ನು ನೀಡಿತು. ಈ ಕಾರಕ್ಕಾಗಿಯೇ ಅನುಷ್ಕಾ ಶರ್ಮಾ ಸಿಕ್ಕಿದ್ದು ನನ್ನ ಪಾಲಿನ ಲೈಫ್ ಚೇಂಜಿಂಗ್ ಕ್ಷಣವೆಂದು” ವಿರಾಟ್ ಕೊಹ್ಲಿ ಹೇಳಿದ್ದಾರೆ.