Virat And Anushka: ಪ್ರೀತಿಸಿ ಮದುವೆಯಾದ ವಿರಾಟ್ ಮತ್ತು ಅನುಷ್ಕಾ ನಡುವಿನ ವಯಸ್ಸಿನ ಅಂತರ ಎಷ್ಟು..? ಪ್ರೀತಿಗೆ ವಯಸ್ಸಿಲ್ಲ.

ವೈರಲ್ ಆಯ್ತು ವಿರಾಟ್ -ಅನುಷ್ಕಾ ನಡುವಿನ ವಯಸ್ಸಿನ ಅಂತರ.

Virat Kohli And Anushka Sharma Age Deference: ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮಾ (Anushka Sharma) ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿ ಇರುತ್ತಾರೆ.

ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಸಾಮಾನ್ಯವಾಗಿ ತಮ್ಮ ನಡುವಿನ ಪ್ರೀತಿಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇಬ್ಬರ ನಡುವೆ ಇರುವ ಪ್ರೀತಿ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Virat Kohli And Anushka Sharma Age Deference
Image Credit: Timesofindia

ವಿರಾಟ್ -ಅನುಷ್ಕಾ ಜೋಡಿ
ಇತರ ಜೋಡಿಗಳಿಗೆ ವಿರಾಟ್ ಅನುಷ್ಕಾ ಮಾದರಿಯಾಗಿದ್ದಾರೆ. ಇನ್ನು ವಿರಾಟ್ ಅನುಷ್ಕಾ ಜೋಡಿ ‘ವಿರುಷ್ಕಾ’ ಹೆಸರಿನ ಮೂಲಕವೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಹೆಚ್ಚಾಗಿ ವಿರಾಟ್ ಅನುಷ್ಕಾ ಜೊತೆಯಾಗಿ ಕಾಣಿಸಿಕೊಂಡಾಗ ವಿರುಷ್ಕಾ ಹೆಸರಿಂದಲೇ ಕರೆಯಲ್ಪಡುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಾರೆ. ಇದೀಗ ವಿರುಷ್ಕಾ ಜೋಡಿಯ ನಡುವಿನ ವಯಸ್ಸಿನ ಅಂತರದ ಬಗ್ಗೆ ಮಾಹಿತಿ ಲಭಿಸಿದೆ.

ವಿರುಷ್ಕಾ ನಡುವಿನ ವಯಸ್ಸಿನ ಅಂತರ
ಟೀಮ್ ಇಂಡಿಯಾದ ಮಾಜಿ ನಾಯಕ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರನ್ನು ಡಿಸೇಂಬರ್ 17, 2017 ರಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ವಿರಾಟ್ ಕೊಹ್ಲಿಗಿಂತ ಅನುಷ್ಕಾ ಶರ್ಮಾ ಆರು ತಿಂಗಳು ದೊಡ್ಡವರಾಗಿದ್ದಾರೆ.

ವಿರಾಟ್ ಗೆ ಇದೀಗ 34 ವರ್ಷವಾಗಿದೆ ಹಾಗು ಅನುಷ್ಕಾ ಶರ್ಮಾ ಅವರಿಗೆ 34 ವರ್ಷ ಆರು ತಿಂಗಳು ಆಗಿದೆ. ಇದೀಗ ವಿರಾಟ್ ಅನುಷ್ಕಾ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರ ವಯಸ್ಸಿನ ಅಂತರದ ಬಗ್ಗೆ ಕೂಡ ಮಾಹಿತಿ ತಿಳಿಯೋಣ.

Join Nadunudi News WhatsApp Group

Hardik Pandya and Natasha Age Deference
Image Credit: Cricnerds

*ಹಾರ್ಧಿಕ್ ಪಾಂಡ್ಯ ಹಾಗೂ ನತಾಶಾ ವಯಸ್ಸಿನ ಅಂತರ
ಹಾರ್ಧಿಕ್ ಪಾಂಡ್ಯ ಅವರು ನತಾಶಾ ಅವರನ್ನು ಮದುವೆಯಾಗಿದ್ದಾರೆ. ಸರ್ಬಿಯಾದ ರೂಪದರ್ಶಿ ನತಾಶಾ ಹಾರ್ಧಿಕ್ ಪಾಂಡ್ಯ ಅವರಿಗಿಂತ ಒಂದು ವರ್ಷ ಏಳು ತಿಂಗಳು ಚಿಕ್ಕವರಾಗಿದ್ದಾರೆ.

Sachin Tendulkar and Anjali Age Difference
Image Credit: Timesnowhindi

*ಸಚಿನ್ ತೆಂಡೂಲ್ಕರ್ ಹಾಗೂ ಅಂಜಲಿ ವಯಸ್ಸಿನ ಅಂತರ
ಇನ್ನು ಸಚಿನ್ ತೆಂಡೂಲ್ಕರ್ ಅವರು ಅಂಜಲಿ ಅವರನ್ನು ಮೇ 24, 1995 ರಲ್ಲಿ ವಿವಾಹವಾಗಿದ್ದರು. ಇನ್ನು ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ಅವರು ಸಚಿನ್ ಅವರಿಗಿಂತ ಆರು ವರ್ಷ ದೊಡ್ಡವರಾಗಿದ್ದಾರೆ. ಈ ಜೋಡಿಯ ನಡುವೆ 6 ವರ್ಷ ವಯಸ್ಸಿನ ಅಂತರವಿದೆ.

Jasprit Bumrah and Sanjana Ganesan Age Difference
Image Credit: Hindustantimes

*ಜಸ್ಪ್ರೀತ್ ಬುಮ್ರಾ ಹಾಗೂ ಸಂಜನಾ ಗಣೇಶ್ ವಯಸ್ಸಿನ ಅಂತರ
ಜಸ್ಪ್ರೀತ್ ಬುಮ್ರಾ ಅವರು ಕೂಡ ತಮಗಿಂತ ಎರಡು ವರ್ಷ ಏಳು ತಿಂಗಳು ದೊಡ್ಡವರಾದ ಸಂಜನಾ ಗಣೇಶ್ ಅವರನ್ನು ವಿವಾಹವಾಗಿದ್ದಾರೆ.

Join Nadunudi News WhatsApp Group