Virat Kohli: ಭಾರತ ಬಿಟ್ಟು ಹೋಗುವ ನಿರ್ಧಾರ ಮಾಡಿದ ಕೊಹ್ಲಿ ಮತ್ತು ಅನುಷ್ಕಾ, ಬೇಸರದಲ್ಲಿ ಫ್ಯಾನ್ಸ್.

ಭಾರತ ಬಿಟ್ಟು ಹೋಗುವ ನಿರ್ಧಾರ ಮಾಡಿದ ಕೊಹ್ಲಿ ಮತ್ತು ಅನುಷ್ಕಾ

Virat Kohli And Anushka Sharma: ಭಾರತ ತಂಡ T20 2024 ರ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಗಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಗೆಲುವು ಸಾಧಿಸಲು ತಂಡದ ಪ್ರತಿಯೊಬ್ಬರ ಪಾತ್ರ ಕೂಡ ಸಾಕಷ್ಟಿದೆ. ಇನ್ನು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪಂದ್ಯದ ಆರಂಭದಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನ ನೀಡದಿದ್ದರೂ ಫೈನಲ್ ಪಂದ್ಯದಲ್ಲಿ ಗೆಲುವಿಗೆ ಮುಖ್ಯ ಕಾರಣರಾಗಿದ್ದಾರೆ.

ಫೈನಲ್ ನಲ್ಲಿ ವಿರಾಟ್ ಆಡಿದ ಆಟಕ್ಕೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ ಎನ್ನಬಹುದು. ಇನ್ನು T20 ವಿಶ್ವಕಪ್ ಮುಗಿದ ಬಳಿಕ ವಿರಾಟ್ T20 ಪಂದ್ಯಕ್ಕೆ ತಮ್ಮ ವಿದಾಯವನ್ನು ಕೂಡ ಹೇಳಿದರು. ಸದ್ಯ ವಿರಾಟ್ ಅಭಿಮಾನಿಗಳು ಈ ಬೇಸರದಲ್ಲಿ ಇದ್ದಾರೆ. ಇದರ ಬೆನ್ನೆಲ್ಲೇ ವಿರಾಟ್ ದೇಶಬಿಟ್ಟು ಹೋಗಲಿದ್ದಾರೆ  ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.

Virat Kohli And Anushka Sharma
Image Credit: India Today

ಭಾರತ ಬಿಟ್ಟು ಹೋಗುವ ನಿರ್ಧಾರ ಮಾಡಿದ ಕೊಹ್ಲಿ ಮತ್ತು ಅನುಷ್ಕಾ
ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ತಮ್ಮ ಎರಡನೇ ಮಗು ಅಕಾಯ್ ಪೋಷಕರಾದಾಗಿನಿಂದ, ವಿರಾಟ್ ದಂಪತಿಗಳು ಲಂಡನ್‌ ಗೆ ಶಿಫ್ಟ್ ಆಗಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿಕೊಂಡಿವೆ. ವಿರಾಟ್-ಅನುಷ್ಕಾ ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರೊಂದಿಗೆ ಇಂಗ್ಲೆಂಡ್‌ ಗೆ ಹೋಗುವುದು ಖಚಿತ ಎಂದು ಹೇಳಲಾಗುತ್ತಿದೆ. ಕೊಹ್ಲಿಯ ಟಿ20 ನಿವೃತ್ತಿ ಈ ವಿಚಾರವನ್ನು ಖಚಿತಪಡಿಸಿದೆ. ನೆಟಿಜನ್‌ ಗಳ ಪ್ರಕಾರ, ವಿರಾಟ್ ದಂಪತಿಗಳು ಲಂಡನ್‌ ಕೆಲ ಕಾರಣಗಳಿವೆ.

ಬೇಸರ ಹೊರಹಾಕಿದ ವಿರಾಟ್ ಅಭಿಮಾನಿಗಳು
ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್ ಗೆಲ್ಲುವ ಸಂದರ್ಭದಲ್ಲಿ ಅಂತರಾಷ್ಟ್ರೀಯ ಟಿ20 ಗೆ ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಕೈ ಬೀಸಿ ಧನ್ಯವಾದ ಹೇಳಿದ್ದಾರೆ. ಕೊಹ್ಲಿ ನಿವೃತ್ತಿಗೂ ಲಂಡನ್‌ ಗೆ ಹೋಗುವುದಕ್ಕೂ ಸಂಬಂಧವಿದೆ ಎಂದು ನೆಟಿಜನ್‌ ಗಳು ಭಾವಿಸಿದ್ದಾರೆ.

ಮದುವೆಗೂ ಮುನ್ನ ಲಂಡನ್ ನಲ್ಲಿ ಸಾಕಷ್ಟು ಸಮಯ ಕಳೆದಿದ್ದ ವಿರಾಟ್ ಜೋಡಿ ಇಲ್ಲಿಯೇ ಎರಡನೇ ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದರು. ಅಕಾಯ್ ಹುಟ್ಟಿದ ನಂತರ ಎರಡು ತಿಂಗಳ ಕಾಲ ಲಂಡನ್‌ ನಲ್ಲಿದ್ದ ವಿರಾಟ್ ಮತ್ತು ಅನುಷ್ಕಾ ವಿಶ್ವಕಪ್ ಮತ್ತು ಐಪಿಎಲ್‌ಗಾಗಿ ಭಾರತಕ್ಕೆ ಮರಳಿದರು. ಸದ್ಯ ವಿಶ್ವಕಪ್ ನಿವೃತ್ತಿ ಘೋಷಿಸಿದ ವಿರಾಟ್ ಮತ್ತೆ ಲಂಡನ್ ಗೆ ತೆರಳಿದ್ದಾರೆ ಎನ್ನುವುದು ಅಭಿಮಾನಿಗಳ ಯೋಚನೆಯಾಗಿದೆ. ಈ ಕಾರಣಕ್ಕೆ ವಿರಾಟ್ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದರೆ.

Join Nadunudi News WhatsApp Group

Virat Kohli And Anushka Sharma Latest News
Image Credit: News 18

Join Nadunudi News WhatsApp Group