Virat Kohli: ವೆಸ್ಟ್ ಇಂಡೀಸ್ ನಲ್ಲಿ ಕೊಹ್ಲಿ ಅನ್ನು ತಬ್ಬಿಕೊಂಡು ಕಣ್ಣೀರು ಹಾಕಿದ ಮಹಿಳೆ ಯಾರು..? ಭಾವುಕರಾದ ಕೊಹ್ಲಿ.
ವೆಸ್ಟ್ ಇಂಡೀಸ್ ಪಂದ್ಯದ ನಡುವೆ ವಿರಾಟ್ ಕೊಹ್ಲಿ ಅನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ ಮಹಿಳೆ ಯಾರು
Virat Kohli And Joshua Da Silva’s Mother: ಪ್ರಸ್ತುತ ಟೀಮ್ ಇಂಡಿಯಾ (Team India) ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಆಡುತ್ತಿದೆ. ಭಾರತೀಯ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ತಮ್ಮ ಅತ್ಯದ್ಭುತ ಆಟದ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.
ಇನ್ನು ಕೊಹ್ಲಿ ಟೆಸ್ಟ್ ಪಂದ್ಯದಲ್ಲಿ ಶತಕ ಭಾರಿಸಲಿ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಈ ಬಗ್ಗೆ ಇನ್ನು ವೆಸ್ಟ್ ಇಂಡೀಸ್ ನ ವಿಕೆಟ್ ಕೀಪರ್ ಕೂಡ ವಿರಾಟ್ ಶತಕ ಭಾರಿಸುವುದನ್ನು ಕಾಯುತ್ತಿದ್ದರು.
ಶತಕ ಪೂರೈಸಿದ ವಿರಾಟ್ ಕೊಹ್ಲಿ
ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ನಡೆಯುತ್ತಿದೆ. ಮೊದಲ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 84 ಓವರ್ ಗಳಲ್ಲಿ 288 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ಇನ್ನು ವಿರಾಟ್ ಕೊಹ್ಲಿ ತಮ್ಮ 500 ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದು ಟೆಸ್ಟ್ ನಲ್ಲಿ ಶತಕ ಪೂರೈಸಿದ್ದಾರೆ.
ಈ ಟೆಸ್ಟ್ ನಲ್ಲಿ ಶತಕ ಭಾರಿಸಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 29 ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 76 ಶತಕಗಳನ್ನು ಪೂರೈಸಿದ್ದಾರೆ. ಕೊಹ್ಲಿ ತಮ್ಮ 500 ನೇ ಪಂದ್ಯದಲ್ಲಿ ಶತಕ ಬಾರಿಸಲಿ ಎಂದು ಕಾಯುತ್ತಿದ್ದ ಅಭಿಮಾನಿಗಳ ಆಸೆ ನೆರವೇರಿದೆ. ಹಾಗೆಯೆ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಜೋಶುವಾ ಡಾ ಸಿಲ್ವಾ (Joshua Da Silva) ಅವರ ತಾಯಿಯನ್ನು ವಿರಾಟ್ ಖುಷಿ ಪಡಿಸಿದ್ದಾರೆ.
ಕೊಹ್ಲಿಯನ್ನು ತಬ್ಬಿಕೊಂಡು ಕಣ್ಣೀರು ಹಾಕಿದ ವಿಂಡೀಸ್ ಆಟಗಾರನ ತಾಯಿ
ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಜೋಶುವಾ ಡಾ ಸಿಲ್ವಾ ಅವರು ವಿರಾಟ್ ಶತಕ ಪೂರೈಸುವ ಬಗ್ಗೆ ಕುತೂಹಲರಾಗಿದ್ದರು ನನ್ನ ತಾಯಿ ಅವರು ವಿರಾಟ್ ಕೊಹ್ಲಿಯನ್ನು ನೋಡುವ ಸಲುವಾಗಿ ಬಂದಿದ್ದಾರೆ. ನನಗೆ ಇದು ನಂಬಲಾಗಲಿಲ್ಲ. ಹೀಗಾಗಿ ವಿರಾಟ್ ಶತಕ ಪೂರೈಸಬೇಕು. ನೀವು ಅದನ್ನು ಪೂರ್ಣಗೊಳಿಸಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಈ ವಿಷಯವನ್ನು ಜೋಶುವಾ ಡಾ ಸಿಲ್ವಾ ಅವರು ಸ್ಟಂಪ್ ಮೈಕ್ ನಲ್ಲಿ ಬಹಿರಂಗಪಡಿಸಿದ್ದರು. ಇದೀಗ ಕೊಹ್ಲಿ ಅವರು ಶತಕ ಭಾರಿಸುವ ಮೂಲಕ ಜೋಶುವಾ ಅವರ ಆಸೆಯನ್ನು ನೆರವೇರಿಸಿದ್ದಾರೆ. ಕೊಹ್ಲಿಯನ್ನು ನೋಡಲು ಇಲ್ಲಿಗೆ ಬಂದಿದ್ದೇನೆ. ಇವರನ್ನು ಭೇಟಿಯಾಗಿರುವುದು ನನ್ನ ಅದ್ರಷ್ಟದ ಸಂಗತಿ ಎಂದು ಹೇಳಿ ಜೋಶುವಾ ಅವರು ವಿರಾಟ್ ಅವರನ್ನು ತಬ್ಬಿಕೊಂಡು ಭಾವುಕರಾಗಿದ್ದಾರೆ.