RCB Eliminate: ಪಂದ್ಯದ ಬಳಿಕ ಗಳಗಳನೆ ಕಣ್ಣೀರು ಹಾಕಿದ ವಿರಾಟ್ ಕೊಹ್ಲಿ ಮತ್ತು ಸಿರಾಜ್, ಭಾವುಕದ ಕ್ಷಣ.

ಕಪ್ ಗೆಲ್ಲುವ ಅವಕಾಶ ಕಳೆದುಕೊಂಡ ಆರ್ ಸಿ ಬಿ, ಭಾವುಕರಾದ ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್

Virat Kohli And Mohammed Siraj: ಈ ಬಾರಿಯ ಐಪಿಎಲ್ ನಲ್ಲಿ ಕನ್ನಡಿಗರು ಬಾರಿ ನಿರೀಕ್ಷೆಯಲ್ಲಿದ್ದರು. ಈ ಬಾರಿ ಆರ್ ಸಿಬಿ ತಂಡ ಕಪ್ ಗೆಲ್ಲುತ್ತದೆ ಎಂದು ಆರ್ ಸಿಬಿ ಅಭಿಮಾನಿಗಳು ಕುತೂಹಲದಲ್ಲಿದ್ದರು. ಆದರೆ ಈ ಬಾರಿ ಕೂಡ ಆರ್ ಸಿಬಿ ತಂಡ ಸೋಲು ಕಂಡಿದೆ.

ಕನ್ನಡಿಗರ ನೆಚ್ಚಿನ ಆರ್ ಸಿಬಿ ಈ ಬಾರಿ ಕೂಡ ಕಪ್ ಗೆಲ್ಲುವ ಆಸೆಯನ್ನು ಕೈಬಿಟ್ಟಿದೆ. ಇನ್ನು ಆರ್ ಸಿಬಿ ತಂಡದ ಆಟಗಾರರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಮೊಹಮ್ಮದ್ ಸಿರಾಜ್ (Mohammed Siraj) ತಂಡದ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

RCB lost the chance to win the cup
Image Credit: ndtv

ಕಪ್ ಗೆಲ್ಲುವ ಅವಕಾಶ ಕಳೆದುಕೊಂಡ ಆರ್ ಸಿಬಿ
ಆರ್ ಸಿಬಿ ತಂಡದ ಕಪ್ ಗೆಲ್ಲುವ ಆಸೆ ಕನಸಾಗಿಯೇ ಉಳಿದಿದೆ. 16 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕೂಡ ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿದೆ. ಭಾನುವಾರ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ ಸಿಬಿ ತಂಡ ಕಣಕ್ಕಿಳಿದಿದೆ.

ಪಂದ್ಯದಲ್ಲಿ ಆರ್ ಸಿಬಿ ತಂಡ ಬೌಲಿಂಗ್ ನಲ್ಲಿ ಕಳಪೆ ಪ್ರದರ್ಶನ ತೋರಿ 2023 ಐಪಿಎಲ್ ನಿಂದ ಹೊರನಡೆದಿದೆ. ಆರ್ ಬಿಸಿ ಅಭಿಮಾನಿಗಳ ಜೊತೆಗೆ ಆರ್ ಸಿಬಿ ಆಟಗಾರರು ಕೂಡ ಮೈದಾನದಲ್ಲಿ ಭಾವುಕರಾಗಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ವಿರಾಟ್ ಅವರ ವಿಡಿಯೋ ವೈರಲ್ ಆಗುತ್ತಿದೆ.

In the match, RCB team showed poor performance in bowling and walked out of 2023 IPL.
Image Credit: zoomnews

ಮೊಹಮ್ಮದ್ ಸಿರಾಜ್ ಹಾಗೂ ವಿರಾಟ್ ವಿಡಿಯೋ ವೈರಲ್
ಅರ ಸಿಬಿ ತಂಡ ಈ ಬಾರಿ ಐಪಿಎಲ್ ನಲ್ಲಿಯೂ ಸೋಲುಕಂಡಿದೆ. 20 ನೇ ಓವರ್ ನ ಮೊದಲ ಎಸೆತದಲ್ಲಿ ಶುಭ್ ಮ್ಯಾನ್ ಗಿಲ್ ಸಿಕ್ಸ್ ಹೊಡೆಯುತ್ತಿದಂತೆ ಆರ್ ಸಿಬಿ ತಂಡ ಸೋಲು ಕಂಡಿದೆ.

Join Nadunudi News WhatsApp Group

ಈ ಸಂದರ್ಭದಲ್ಲಿ ಕೋಪಗೊಂಡು ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಿದ್ದ ನೀರಿನ ಬಾಟಲ್ ಅನ್ನು ಮೈದಾನಕ್ಕೆ ಎಸೆದಿದ್ದಾರೆ. ಇನ್ನು ಮೊಹಮ್ಮದ ಸಿರಾಜ್ ಮೈದಾನದಲ್ಲಿ ಬೇಸರದಿಂದ ಮಲಗಿದ್ದಾರೆ. ನಂತರ ಭಾವುಕರಾಗಿರುವ ವಿಡಿಯೋದಲ್ಲಿ ಕಂಡುಬಂದಿದೆ. ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಭಾವುಕತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group