Virat Kohli: ಕೊನೆಗೂ ಮೋದಿ ಮುಂದೆ ಮಾಡಿದ ತಪ್ಪು ಒಪ್ಪಿಕೊಂಡ ಕೊಹ್ಲಿ, ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು ಗೊತ್ತಾ…?

ಪ್ರಧಾನಿ ಮೋದಿ ಮುಂದೆ ತಪ್ಪೊಪ್ಪಿಕೊಂಡ ವಿರಾಟ್ ಕೊಹ್ಲಿ

Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ ಮಧ್ಯೆ ನಡೆದ T20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಹಲವು ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಕಾರಣ ಇಡೀ ಭಾರತೀಯರು ಸಂಭ್ರಮಿಸಿದ್ದಾರೆ. ಇನ್ನು ಜುಲೈ 4 ರಂದು ಟೀಮ್ ಇಂಡಿಯಾ ಭಾರತಕ್ಕೆ ಮರಳಿದ್ದು, ಅದ್ದೂರಿ ಸ್ವಾಗತ ಮಾಡಲಾಗಿತ್ತು. ವಿಜಯಯಾತ್ರೆ ಜೋರಾಗಿಯೇ ನಡೆದಿತ್ತು.

ಭಾರತ ಮರಳಿದ ಟೀಮ್ ಇಂಡಿಯಾ ಆಟಗಾರರನ್ನು ಮೋದಿ ಅವರು ನಿವಾಸಕ್ಕೆ ಕರೆಸಿ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವಕಪ್ ವಿಜೇತರೊಂದಿಗೆ ಮೋದಿ ಸಾಕಷ್ಟು ಸಮಯದವರೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೊಹ್ಲಿ ಫೈನಲ್ ಪಂದ್ಯದಲ್ಲಿ ತಮಗಾದ ನೋವಿನ ಬಗ್ಗೆ ಮೋದಿ ಬಳಿ ಹಂಚಿಕೊಂಡಿದ್ದಾರೆ.

Virat Kohli talking to PM Narendra Modi
Image Credit: X

ಪ್ರಧಾನಿ ಮೋದಿ ಮುಂದೆ ತಪ್ಪೊಪ್ಪಿಕೊಂಡ ವಿರಾಟ್ ಕೊಹ್ಲಿ
ಅಂತಿಮ ಪಂದ್ಯಕ್ಕೂ ಮುನ್ನ ಕೊಹ್ಲಿ 75 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಸೆಮಿಫೈನಲ್‌ನಲ್ಲಿ ತಮ್ಮ ಕಳಪೆ ಪ್ರದರ್ಶನವನ್ನು ನೆನಪಿಸಿಕೊಂಡ ಕೊಹ್ಲಿ ಹೆಚ್ಚು ಭಾವುಕರಾದರು. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಕೊಹ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಒಂದು ಹಂತದಲ್ಲಿ, ನನ್ನ ಪುಸ್ತಕದಲ್ಲಿ ನಾನು ಪ್ರತಿ ತಂತ್ರವನ್ನು ಪ್ರಯತ್ನಿಸಿದೆ. ಆದರೆ, ನಾನು ರನ್ ಗಳಿಸಲು ವಿಫಲನಾದೆ.

ನಂತರ ನಾನು ಆಕ್ರಮಣಕಾರಿ ಮನೋಭಾವವನ್ನು ಬೆಳೆಸಿಕೊಂಡೆ ಮತ್ತು ನಾನು ಸುಲಭವಾಗಿ ರನ್ ಗಳಿಸುತ್ತೇನೆ ಎಂದು ಭಾವಿಸಿದೆ. ಆದರೆ ಅದೂ ವಿಫಲವಾಯಿತು. ಒಂದು ಹಂತದಲ್ಲಿ, ನಾವು ಅಹಂಕಾರ ಮತ್ತು ಗರ್ವವನ್ನು ಬಿಡಬೇಕಾಗುತ್ತದೆ. ನನ್ನ ಬ್ಯಾಟಿಂಗ್ ನನ್ನ ಅಹಂ ಅನ್ನು ನಾಶಪಡಿಸಿತು. ಇದಾದ ನಂತರ ತಂಡದ ಬಗ್ಗೆ ಹೆಚ್ಚು ಯೋಚಿಸತೊಡಗಿದೆ. ಈ ಒಂದು ಕ್ಷಣ ನನಗೆ ದೊಡ್ಡ ಪಾಠವಾಗಿತ್ತು ಎಂದು ಕೊಹ್ಲಿ ಪ್ರಧಾನಿ ಮೋದಿ ಬಳಿ ತಪ್ಪಿಪ್ಪಿಕೊಂಡಿದ್ದಾರೆ.

Virat Kohli And Narendra Modi Conversation
Image Credit: Hindustantimes

ವಿರಾಟ್ ಕೊಹ್ಲಿ ಮೋದಿ ಮುಂದೆ ಹೇಳಿದ್ದೇನು….?
ಫೈನಲ್‌ ನಲ್ಲಿ ನನಗೆ ಆತ್ಮವಿಶ್ವಾಸವಿರಲಿಲ್ಲ. ಈ ಸಂದರ್ಭದಲ್ಲಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ನನಗೆ ಸಹಾಯ ಮಾಡಿದರು. ಉತ್ತಮ ಪ್ರದರ್ಶನ ನೀಡಲು ಅವರು ನನಗೆ ಬೆಂಬಲ ನೀಡಿದರು. ಅಗತ್ಯವಿದ್ದಾಗ ರನ್ ಗಳಿಸಲು ಕಷ್ಟಪಡುತ್ತಿದ್ದೆ ಎಂದು ಕೋಚ್ ಬಳಿ ಒಪ್ಪಿಕೊಂಡೆ. ಅವರ ಬೆಂಬಲದಿಂದಾಗಿ ನಾನು ವೈಫಲ್ಯದಿಂದ ಹೊರಬಂದಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

Join Nadunudi News WhatsApp Group

ಫೈನಲ್‌ ನಲ್ಲಿ ಏನನ್ನು ಅನುಭವಿಸಿದ್ದೇವೆ ಎಂಬುದನ್ನು ವಿವರಿಸಲು ಅಸಾಧ್ಯ. ಸಾವಿನ ಹಾಸಿಗೆಯಿಂದ ನಮ್ಮನ್ನು ಬದುಕಿಸಲು ಹಾರ್ದಿಕ್ ನಿರ್ಣಾಯಕ ವಿಕೆಟ್ ಪಡೆದರು. ಕಠಿಣ ಸಮಯದ ನಂತರ ಇಷ್ಟು ದೊಡ್ಡ ಆಟದಲ್ಲಿ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿದ್ದಕ್ಕೆ ನನಗೆ ಸಂತೋಷವಾಗಿದೆ. ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

Virat Kohli And Narendra Modi
Image Credit: Hindustantimes

Join Nadunudi News WhatsApp Group