Virat Kohli: ಮೊಬೈಲ್ ನಲ್ಲಿ ಕೊಹ್ಲಿ ಹೆಸರನ್ನ ಅನುಷ್ಕಾ ಏನೆಂದು ಸೇವ್ ಮಾಡಿದ್ದಾರೆ ಗೊತ್ತಾ, ವೈರಲ್ ಆಗಿದೆ ವಿಡಿಯೋ.

ಗಂಡ ವಿರಾಟ್ ಕೊಹ್ಲಿ ಹೆಸರನ್ನ ತನ್ನ ಮೊಬೈಲ್ ನಲ್ಲಿ ವಿಭಿನ್ನವಾಗಿ ಸೇವ್ ಮಾಡಿದ ಅನುಷ್ಕಾ ಶರ್ಮಾ.

Virat Kohli And Anushka Sharma: ವಿರಾಟ್ ಕೊಹ್ಲಿ (Virat Kohli) ಹಾಗು ನಟಿ ಅನುಷ್ಕಾ ಶರ್ಮಾ (Anushka Sharma) ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಈ ಜೋಡಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಲ್ಲದೆ ಈ ಜೋಡಿಗೆ ಕೋಟ್ಯಾಂತರ ಅಭಿಮಾನಿಗಳು ಸಹ ಇದ್ದಾರೆ. ಅನುಷ್ಕಾ ಶರ್ಮಾ ತನ್ನ ಮೊಬೈಲ್ ಫೋನ್ ನಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಸಂಬಂಧಿಸಿದ ಮತ್ತೊಂದು ವಿಷಯ ಈಗ ಭಾರಿ ಸುದ್ದಿಯಲ್ಲಿದೆ. 16 ನೇ ಆವೃತ್ತಿಯ ಐಪಿಎಲ್ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಭರ್ಜರಿ ಸುತ್ತಾಟ ನಡೆಸಿದ್ದ ಈ ಜೋಡಿ ಸಂದರ್ಶನ ಒಂದರಲ್ಲಿ ನೀಡಿದ್ದ ಹೇಳಿಕೆ ಒಂದು ಸಖತ್ ವೈರಲ್ ಆಗಿದೆ.

Anushka Sharma has saved husband Virat Kohli's name differently in her mobile.
Image Credit: ndtv

ನಟಿ ಅನುಷ್ಕಾ ಶರ್ಮಾ ಹಾಗು ವಿರಾಟ್ ಕೊಹ್ಲಿ
ಬೆಂಗರೂರಿನಲ್ಲಿ ಪೂಮಾ ಇಂಡಿಯಾ ಹಂಬಿಕೊಂಡಿದ್ದ ಲೇಟ ದೇರ್ ಬಿ ಸ್ಪೋರ್ಟ್ ಎಂಬ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ ತನ್ನ ಮೊಬೈಲ್ ನಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೊಹ್ಲಿ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆ ನಟಿ ಅನುಷ್ಕಾ ಶರ್ಮಾ ಅವರಿಗೆ ಎದುರಾಯಿತು. ಇದಕ್ಕೆ ನಟಿ ಅನುಷ್ಕಾ ಶರ್ಮಾ ಮೊದಲು ನಕ್ಕಿದ್ದಾರೆ.

Join Nadunudi News WhatsApp Group

ವಿರಾಟ್ ಕೊಹ್ಲಿ ಹೆಸರನ್ನು ಪತಿ ಪರಮೇಶ್ವರ್ ಎಂದು ಸೇವ್ ಮಾಡಿಕೊಂಡ ನಟಿ ಅನುಷ್ಕಾ ಶರ್ಮಾ
ನಟಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಅವರ ಹೆಸರನ್ನು ಪತಿ ಪರಮೇಶ್ವರ್ ಎಂದು ಸೇವ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ನಂತರ ವಿರಾಟ್ ಕೊಹ್ಲಿಗೂ ಇದೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ವಿರಾಟ್ ಡಾರ್ಲಿಂಗ್ ಎಂದು ಸೇವ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

Join Nadunudi News WhatsApp Group