Virat Kohli: ಕೊಹ್ಲಿ ಅಭಿಮಾನಿಗಳಿಗೆ ಬೇಸರದ ಸುದ್ದಿ, ಕೊಹ್ಲಿ ಮುಂದಿನ ಜೀವನದ ಬಗ್ಗೆ ದೊಡ್ಡ ಭವಿಷ್ಯ ಹೇಳಿದ ಸೆಹವಾಗ್.
ಕೊಹ್ಲಿ ಮುಂದಿನ ಜೀವನದ ಬಗ್ಗೆ ದೊಡ್ಡ ಭವಿಷ್ಯ ಹೇಳಿದ ಸೆಹವಾಗ್.
Virat Kohli Retirement: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kholi) ಇದೀಗ ಸುದ್ದಿಯಲ್ಲಿದ್ದಾರೆ. ಈ ಬಾರಿ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ವಿರಾಟ್ ಕೊಹ್ಲಿ ತಯಾರಿ ನಡೆಸುತ್ತಿದ್ದಾರೆ. 2019 ರ ಆವೃತ್ತಿಯಲ್ಲಿ ಭಾರತವು ಸೆಮಿ ಫೈನಲ್ ಗೆ ಪ್ರವೇಶಿಸಿದಾಗ ಅವರು ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ 2011 ರಲ್ಲಿ ಮೊದಲ ODI ವಿಶ್ವಕಪ್ ನಲ್ಲಿ ಆಡಿದರು ಮತ್ತು ಮುಂಬೈ ವಾಂಖೆಡೆ ಸ್ಟೇಡಿಯಂ ನಲ್ಲಿ ತಮ್ಮ ಆಗಿನ ಹಿರಿಯ ಭಾರತ ತಂಡದ ಸಹ ಆಟಗಾರರೊಂದಿಗೆ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿದ್ದರು. 2008 ರಲ್ಲಿ ಭಾರತ U -19 ತಂಡವನ್ನು ಪ್ರಶಸ್ತಿ ಕಡೆಗೆ ಮುನ್ನಡೆಸಿದ್ದ ಕೊಹ್ಲಿಗೆ ಇದು ವೃತ್ತಿಜೀವನದ ಎರಡನೇ ವಿಶ್ವಕಪ್ ಗೆಲುವಾಗಿತ್ತು.
ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಸುಳಿವು ಕೊಟ್ಟ ವೀರೇಂದ್ರ ಸೆಹ್ವಾಗ್
ವಿರಾಟ್ ಕೊಹ್ಲಿ ಎಲ್ಲಾ ಪ್ರಮುಖ ಐಸಿಸಿ ಇವೆಂಟ್ ಗಳ ಭಾಗವಾಗಿದ್ದಾರೆ. ತಂಡದ ಪ್ರಮುಖ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಏಕದಿನ ವಿಶ್ವಕಪ್ ಅವರಿಗೆ ಅತ್ಯಂತ ಮಹತ್ವದ್ದಾಗಿದೆ. ವಿರಾಟ್ ಕೊಹ್ಲಿ ಈ ವರ್ಷದ ಕೊನೆಯಲ್ಲಿ 35 ನೇ ವರ್ಷಕ್ಕೆ ಕಾಲಿಡುತ್ತಾರೆ ಮತ್ತು ಮುಂದಿನ ODI ವಿಶ್ವಕಪ್ ಆಡುವ ವೇಳೆಗೆ ಅವರು 39 ರ ಸಮೀಪಿಸಲಿರುತ್ತಾರೆ. ಹೀಗಾಗಿ 2023ರ ಏಕದಿನ ವಿಶ್ವಕಪ್ ವಿರಾಟ್ ಕೊಹ್ಲಿಯ ವೃತ್ತಿಜೀವನದ ಫೈನಲ್ ಆಗಲಿದೆಯೇ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಈ ಬಗ್ಗೆ ವೀರೇಂದ್ರ ಸೆಹ್ವಾಗ್ ಇತ್ತೀಚಿಗೆ ಸುಳಿವು ನೀಡಿದ್ದು, ವಿರಾಟ್ ಕೊಹ್ಲಿ ಆಡುವ ಮಾತನಾಡುವ ಮತ್ತು ಬೇರೆಯವರನ್ನು ನೋಡಿಕೊಳ್ಳುವ ರೀತಿ ಗಮನಿಸಿದರೆ ಈ ಬಾರಿಯ ವಿಶ್ವಕಪ್ ಗೆಲ್ಲಲು ಅವರು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ಸೆಹ್ವಾಗ ಪರೋಕ್ಷವಾಗಿ ಕೊಹ್ಲಿ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದಾರೆ.