Virat Kohli: ವರ್ಲ್ಡ್ ಕಪ್ ಗೆದ್ದ ಬೆನ್ನಲ್ಲೇ ಶಾಕಿಂಗ್ ಹೇಳಿಕೆ ನೀಡಿದ ಕಿಂಗ್ ಕೊಹ್ಲಿ, ಬೇಸರದಲ್ಲಿ ಫ್ಯಾನ್ಸ್

ಅಂತಾರಾಷ್ಟ್ರೀಯ T20 ಕ್ರಿಕೆಟ್ ಗೆ ವಿದಾಯ ಹೇಳಿದ ವಿರಾಟ್

Virat Kohli Says Final Goodbye For International T20 Cricket: ಜೂನ್‌ 29 ರಂದು ನಡೆದ T20 ವಿಶ್ವಕಪ್‌ 2024 ರ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಎದುರಾಳಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ರೋಚಕ ಜಯ ಸಾದಿಸುವ ಮೂಲಕ T20 ಕಪ್‌ ತನ್ನದಾಗಿಸಿಕೊಂಡಿದೆ.

ಟೀಮ್ ಇಂಡಿಯಾ 7 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವ ಚಾಂಪಿಯನ್ ಆಗಿದೆ. ICC ಪ್ರಶಸ್ತಿಗಾಗಿ 11 ವರ್ಷಗಳ ಸುದೀರ್ಘ ಕಾಯುವಿಕೆ ಈ ಪಂದ್ಯ ಗೆಲ್ಲುವ ಮೂಲಕ ಕೊನೆಗೊಂಡಿದೆ. ಇದೀಗ ಇದರ ಬೆನ್ನಲ್ಲೆ ವಿರಾಟ್‌ ಕೋಹ್ಲಿ ತನ್ನ ಅಭಿಮಾನಿಗಳಿಗೆ ಬಿಗ್ ನೀಡಿದ್ದಾರೆ. ಅದೇನೇದು ನಾವೀಗ ಈ ಆರ್ಟಿಕಲ್ ನಲ್ಲಿ ಮಾಹಿತಿ ತಿಳಿಯೋಣ.

Virat Kohli Says Final Goodbye For International T20 Cricket
Image Credit: Sportscafe

ಅಂತಾರಾಷ್ಟ್ರೀಯ T20 ಕ್ರಿಕೆಟ್ ಗೆ ವಿದಾಯ ಹೇಳಿದ ವಿರಾಟ್
ನಿನ್ನೆ ನೆಡೆದ T20 ವಿಶ್ವಕಪ್ ನಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 76 ರನ್‌ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರಾಟ್ ಕೊಹ್ಲಿ, “ಇದು ನನ್ನ ಕೊನೆಯ T20 ವಿಶ್ವಕಪ್. ಇಲ್ಲಿಯವರೆಗೆ ಇದನ್ನೇ ಸಾಧಿಸಲು ನಾವು ಬಯಸುತ್ತಿದ್ದೆವು ಎಂದು ಹೇಳಿದರು. ಇದು ಭಾರತಕ್ಕಾಗಿ ಆಡುತ್ತಿರುವ ನನ್ನ ಕೊನೆಯ T20 ಪಂದ್ಯ, ಮುಂದೆ ಯುವ ಪೀಳಿಗೆ ಕ್ರಿಕೆಟ್ ತಂಡದ ನೇತೃತ್ವ ವಹಿಸಿಕೊಳ್ಳಬೇಕು ಎಂದು ತಿಳಿಸಿ ಈ ಯಶಸ್ಸಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ”. ಈ ಮೂಲಕ ಕೊಹ್ಲಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಉಂಟಾಗಿದೆ.

Virat Kohli Retirement
Image Credit: Reuters

Join Nadunudi News WhatsApp Group

Join Nadunudi News WhatsApp Group