Virat Kohli Net Worth: ಒಂದೇ ವರ್ಷದಲ್ಲಿ ಹೆಚ್ಚಾಯ್ತು ವಿರಾಟ್ ಕೊಹ್ಲಿ ಒಟ್ಟು ಆಸ್ತಿ, ಶ್ರೀಮಂತ ಕ್ರಿಕೆಟಿಗ.
Virat Kohli Expensive Life: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯತ್ತಮ ನಾಯಕರಲ್ಲಿ ಒಬ್ಬರು. ಅತ್ಯಂತ ಪ್ರಸಿದ್ಧ ಕ್ರೀಡಾಪುವಾಗಿರುವ ವಿರಾಟ್ ಕೊಹ್ಲಿ ಅವರು ಹಲವು ಮೂಲಗಳಿಂದ ಆದಾಯ ಗಳಿಸುತ್ತಿದ್ದಾರೆ.
ಬಿಸಿಸಿಐ ಒಪ್ಪದಂದ ಜೊತೆಗೆ ಜಾಹೀರಾತುಗಳಿಂದ ಹಾಗೂ ಸ್ವಂತ ಬ್ರಾಂಡ್ ಕಂಪನಿಯನ್ನು ಹೊಂದಿರುವ ವಿರಾಟ್ ಪ್ರಸ್ತುತ ದೇಶದಲ್ಲಿ ಹೆಚ್ಚು ಆದಾಯಗಳಿಸುವ ಕ್ರೀಡಾಪಟುವಾಗಿದ್ದಾರೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರ ನಿವ್ವಳ ಆಸ್ತಿಯ ಮೌಲ್ಯ 1050 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ವಿರಾಟ್ ಕೊಹ್ಲಿ ಅವರು ವಿವಿಧ ಮೂಲಗಳಿಂದ್ ಆದಾಯವನ್ನು ಗಳಿಸುತ್ತಾರೆ. ಇವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.
ಕೊಹ್ಲಿ ಅವರ ಇಂದಿನ ನಿವ್ವಳ ಮೌಲ್ಯ ಸುಮಾರು $127 ಮಿಲಿಯನ್ ಏನಂದ್ರೆ ಸುಮಾರು 1040 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕ್ರಿಕೆಟ್ ನಿಂದ ಮಾತ್ರ ಅವರ ವಾರ್ಷಿಕ ಆದಾಯ ಸುಮಾರು $24 ಮಿಲಿಯನ್ ಅಂದರೆ ಸುಮಾರು 196 ಕೋಟಿ ಎಂದು ಅಂದಾಜಿಸಲಾಗಿದೆ.
ಕ್ರಿಕೆಟ್ ಹೊರತಾಗಿ ಕೊಹ್ಲಿ ಹಲವಾರು ಬ್ರಾಂಡ್ ಅನುಮೋದನೆಗಳನ್ನು ಹೊಂದಿದ್ದಾರೆ. ಹಲವು ಬ್ರಾಂಡ್ ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಅವರು ತಮ್ಮದೇ ಆದ ಪ್ಯಾಷನ್ ಲೇಬಲ್, ರಾಗ್ನ್ ಮತ್ತು ಚಿಸೆಲ್ ಎಂಬ ಜಿಮ್ ಗಳು ಮತ್ತು ಫಿಟ್ನೆಸ್ ಕೇಂದ್ರಗಳ ಸರಣಿಯನ್ನು ಹೊಂದಿದ್ದಾರೆ.
ಭಾರತದಲ್ಲಿ ಹಲವಾರು ಐಷಾರಾಮಿ ಮನೆಗಳು ಹಾಗೂ ಅಪಾರ್ಟ್ಮೆಂಟ್ ಗಳನ್ನೂ ಹೊಂದಿದ್ದಾರೆ. ಸುಮಾರು 34 ಕೋಟಿ ಬೆಲೆಬಾಳುವ ಅಪಾರ್ಟ್ಮೆಂಟ್ ಅನ್ನು ಮುಂಬೈ ನ ವರ್ಲಿ ಪ್ರದೇಶದಲ್ಲಿ ಹೊಂದಿದ್ದಾರೆ. ಹಾಗೆಯೆ ವಿರಾಟ್ ಕೊಹ್ಲಿ ಸಾಕಷ್ಟು ಐಷಾರಾಮಿ ಕಾರ್ ಗಳನ್ನೂ ಕೂಡ ಹೊಂದಿದ್ದಾರೆ.
ಆಡಿ R8 V10 ಪ್ಲಸ್ ರೂ. 2 .72 ಕೋಟಿ. ಆಡಿ R8 LMX ರೂ. 2.97 ಕೋಟಿ. ಆಡಿ A8 L ರೂ. 1.58 ಕೋಟಿ. ಆಡಿ Q8 ರೂ.1.33 ಕೋಟಿ. ಆಡಿ Q7 ರೂ.69 .27 ಲಕ್ಷದಿಂದ ರೂ.81 .18 ಲಕ್ಷ. ಆಡಿ RS 5 ರೂ.1.11 ಕೋಟಿ. ರೆನಾಲ್ಟ್ ಡಸ್ಟರ್- ರೂ10.49 ಲಕ್ಷದಿಂದ ರೂ 13.59 ಲಕ್ಷ.
ಟೊಯೋಟಾ ಫಾರ್ಚುನರ್ 3-ರೂ 29.98 ಲಕ್ಷದಿಂದ ರೂ 37.58 ಲಕ್ಷ. ರೇಂಜ್ ರೋವರ್ ವೋಗ್- ರೂ 2.11 ಕೋಟಿ. ಬೆಂಟ್ಲಿ ಕಾಂಟಿನೆಂಟಲ್ ಜಿಟಿ- ರೂ 3.29 ಕೋಟಿಯಿಂದ 4.04 ಕೋಟಿ. ಫ್ಲೈಯಿಂಗ್ ಸ್ಪರ್- ರೂ 1.70 ಕೋಟಿಯಿಂದ ರೂ 3.41 ಕೋಟಿ