kohli Video Call: ಮೈದಾನದಿಂದಲೇ ಅನುಷ್ಕಾಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ, ವಿಡಿಯೋ ವೈರಲ್.
ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮ ಅವರಿಗೆ ವಿಡಿಯೋ ಕಾಲ್ ಮಾಡಿದ್ದಾರೆ.
Virat Kohli Video Call To Anushka Sharma: ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇದೀಗ ಸುದ್ದಿಯಲ್ಲಿದ್ದಾರೆ. ಇನ್ನು ವಿರಾಟ್ ಹಾಗೂ ಅನುಷ್ಕಾ (Anushka Sharma) ಜೋಡಿ ಇತ್ತೀಚಿಗೆ ಬಾರಿ ವೈರಲ್ ಆಗುತ್ತಿದೆ.
ಈ ಹಿಂದೆ ಸಾಕಷ್ಟು ಬಾರಿ ವಿರಾಟ್ ಹಾಗೂ ಅನುಷ್ಕಾ ತಮ್ಮ ಪ್ರೀತಿಯ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದರು. ಇದೀಗ ಮತ್ತೆ ಅನುಷ್ಕಾ ಹಾಗೂ ವಿರಾಟ್ ನೋಡುಗರ ಗಮನ ಸೆಳೆದಿದ್ದಾರೆ. ಅನುಷ್ಕಾ ಹಾಗೂ ವಿರಾಟ್ ಪ್ರೀತಿಗೆ ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಮೈದಾನದಿಂದಲೇ ಅನುಷ್ಕಾಗೆ ವಿಡಿಯೋ ಕಾಲ್ ಮಾಡಿದ ವಿರಾಟ್ ಕೊಹ್ಲಿ
ಗುರುವಾರದಂದು ಸನ್ ರೈಸರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡ ಗೆಲುವನ್ನು ಪಡೆದಿದೆ. ಈ ವೇಳೆ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಗೆಲುವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ವಿರಾಟ್ ಮೈದಾನದಲ್ಲಿಯೇ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ವಿಡಿಯೋ ಕಾಲ್ (Vedio Call) ಮಾಡಿದ್ದಾರೆ.
ವಿರುಷ್ಕಾ ಜೋಡಿಯ ವಿಡಿಯೋ ಕಾಲ್ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆರ್ ಬಿಸಿ ತಂಡದ ನಾಯಕ ಕೊಹ್ಲಿ
ಪ್ರಸ್ತುತ ಐಪಿಎಲ್ ನ ಹದಿನಾರನೇ ಆವೃತ್ತಿ ನಡೆಯುತ್ತಿದೆ. ಕ್ರಿಕೆಟ್ ಪ್ರಿಯರು ಐಪಿಎಲ್ ನೋಡಲು ಬಹಳ ಕುತೂಹಲರಾಗಿದ್ದಾರೆ. ಮೈದಾನದಲ್ಲಿ ಪ್ರಮುಖ ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಇನ್ನು ಮೊನ್ನೆಯಷ್ಟೇ ಕನ್ನಡಿಗರ ನೆಚ್ಚಿನ ತಂಡವಾದ ಆರ್ ಸಿಬಿ (RCB) ಎದುರಾಳಿ ತಂಡದ ವಿರುದ್ಧ ಗೆದ್ದಿದೆ.
ಕ್ರಿಕೆಟ್ ಪ್ರಿಯರು ಆರ್ ಸಿಬಿ ಗೆಲುವನ್ನು ಆನಂದಿಸುತ್ತಿದ್ದಾರೆ. ಇನ್ನು ಈ ಬಾರಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಅದ್ಭುತ ಪ್ರದರ್ಶವನ್ನು ನೀಡುತ್ತಿದ್ದಾರೆ. ಕೊಹ್ಲಿ ಅವರ ಆಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.