Ads By Google

Virat Kohli: ಹಲವು ದಿನಗಳ ಬಳಿಕ ಬೆಳಕಿಗೆ ಬಂತು ಫೈನಲ್ ಸೋತ ನಂತರ ಮೈಧಾನದಲ್ಲಿ ವಿರಾಟ್ ಕೊಹ್ಲಿ ವರ್ತನೆ, ವಿಡಿಯೋ ವೈರಲ್

Virat Kohli World Cup 2023

Image Source: India Today

Ads By Google

Virat Kohli World Cup 2023 : 2023 ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ (ICC ODI World Cup Final) ಪಂದ್ಯವನ್ನು ಮರೆಯಲು ಅಭಿಮಾನಿಗಳಿಂದ ಇನ್ನು ಸಾಧ್ಯವಾಗಿಲ್ಲ ಎನ್ನಬಹುದು. ಬಹುನಿರೀಕ್ಷಿತ ಪಂದ್ಯ ಇದಾಗಿದ್ದು, ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ಸೋಲು ಸತತ 10 ಪಂದ್ಯದ ಗೆಲುವನ್ನು ಮರೆಮಾಚಿಸಿತು.

ಭಾರತದ ಆಟಗಾರರು ಹಾಗು ಅಭಿಮಾನಿಗಳು ಸೋಲಿನ ನಂತರ ದುಃಖಿತರಾಗಿದ್ದರು. ಇದೀಗ ಫೈನಲ್ ಮುಗಿದ ಒಂದುವರೆ ತಿಂಗಳ ನಂತರ, ಪಂದ್ಯದ ಮುಗಿದ ಸಂದರ್ಭ ವಿರಾಟ್ ಕೊಹ್ಲಿ (Virat Kohli) ಪ್ರತಿಕ್ರಿಯೆಯ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Image Credit: India Today

ಐಸಿಸಿ ಏಕದಿನ ವಿಶ್ವಕಪ್‌ನ ಫೈನಲ್‌ ನಲ್ಲಿ ಸೋತ ಭಾರತ

ಏಕದಿನ ವಿಶ್ವಕಪ್‌ನ ನಲ್ಲಿ ಭಾರತ ತಂಡ ಸತತ 10 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಾಬಲ್ಯವನ್ನು ಪ್ರದರ್ಶಿಸಿತು. ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಿಂದ ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯದಲ್ಲಿ ಭಾರತ 240 ರನ್ ಗಳಿಸುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಲಗೈ ಬ್ಯಾಟ್ಸ್‌ಮನ್ 63 ಎಸೆತಗಳಲ್ಲಿ 54 ರನ್ ಗಳಿಸಿದ್ದರು.

ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಕಲೆಹಾಕಿದ್ದರು. ಆದರೆ, ಟ್ರಾವಿಸ್ ಹೆಡ್ ಅವರ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯಾ, 241 ರನ್ ಗುರಿಯನ್ನು ಆರು ವಿಕೆಟ್‌ಗಳು ಮತ್ತು ಏಳು ಓವರ್‌ಗಳು ಬಾಕಿ ಇರುವಂತೆಯೇ ಯಶಸ್ವಿಯಾಗಿ ಬೆನ್ನಟ್ಟಿತು. ಹೆಡ್ ಪಂದ್ಯಶ್ರೇಷ್ಠ 137 ರನ್ ಗಳಿಸಿದರೆ, ಲ್ಯಾಬುಸ್ಚಾಗ್ನೆ 110 ಎಸೆತಗಳಲ್ಲಿ 58 ರನ್ ಗಳಿಸಿ ಅಜೇಯರಾಗಿ ಉಳಿದರು.

ಕ್ಯಾಪ್ ತೆಗೆದು ಬೇಲ್ ಗಳನ್ನು ಕಳಚಿದ ವಿರಾಟ್ ಕೊಹ್ಲಿ

ಏಕದಿನ ವಿಶ್ವಕಪ್‌ ಫೈನಲ್ ಪಂದ್ಯವನ್ನು ಭಾರತ ತಂಡ ಸೋತ ನಂತರ ಭಾರತದ ಆಟಗಾರರು ನಿರಾಸೆಯಿಂದ ಕಣ್ಣೀರಾಕಿದ್ದನ್ನು ನೋಡಬಹುದು. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಸ್ಟಂಪ್‌ಗಳ ಕಡೆಗೆ ನಡೆದುಕೊಂಡು ಹೋಗುವುದನ್ನು ನೋಡಬಹುದು. ಆಗ ಸಾಂಪ್ರದಾಯಿಕ ಹ್ಯಾಂಡ್‌ ಶೇಕ್‌ಗಾಗಿ ಸಹ ಆಟಗಾರರ ಬಳಿಗೆ ಹೋಗುವ ಮೊದಲು ಬೇಸರದಲ್ಲಿ ಕೊಹ್ಲಿ ತಮ್ಮ ಕ್ಯಾಪ್ ತೆಗೆದು ಬೇಲ್ ಗಳನ್ನು ಕಳಚಿದ್ದಾರೆ. ಅಭಿಮಾನಿಯೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ಈ ದೃಶ್ಯವನ್ನು ಕಾಣಬಹುದಾಗಿದೆ.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in