Visa-Free Entry: ಇನ್ನುಮುಂದೆ ಈ ದೇಶಕ್ಕೆ ಹೋಗಲು ಯಾವುದೇ ವೀಸಾ ಅಗತ್ಯವಿಲ್ಲ, ಭಾರತೀಯರಗಾಗಿ ಹೊಸ ನಿಯಮ.
ಇನ್ನುಮುಂದೆ ಭಾರತೀಯರು ವೀಸಾ ಇಲ್ಲದೆ ಈ ದೇಶಕ್ಕೆ ಪ್ರಯಾಣಿಸಬಹುದಾಗಿದೆ.
Visa-Free Entry For Indians: ಪಾಸ್‌ಪೋರ್ಟ್ (Passport) ನಿಮ್ಮ ದೇಶದಿಂದ ನೀಡಲಾದ ಗುರುತಿನ ಪುರಾವೆಯಾಗಿದೆ ಹಾಗೆ ವೀಸಾ ವಿದೇಶಿ ಸರ್ಕಾರದಿಂದ ನೀಡಲಾದ ದಾಖಲೆ ಆಗಿದೆ. ಇದು ಅವರ ಪ್ರದೇಶಕ್ಕೆ ಪ್ರಯಾಣಿಸಲು ಮತ್ತು ಪ್ರವೇಶಿಸಲು ಅನುಮತಿ ನೀಡುತ್ತದೆ.
ಜನರಿಗೆ ವಿದೇಶಕ್ಕೆ ಹೋಗಲು ಮುಖ್ಯವಾಗಿ ಪಾಸ್ ಪೋರ್ಟ್ ಮತ್ತು ವೀಸಾ (Visa) ಬೇಕೇ ಬೇಕು. ಆದರೆ ಈಗ ವೀಸಾ ಇಲ್ಲದೆ ಬೇರೆ ದೇಶಕ್ಕೆ ಪ್ರಯಾಣಿಸಬಹುದಾಗಿದೆ. ಹಾಗಾದರೆ ಈ ದೇಶ ಯಾವುದು ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
ಭಾರತೀಯರಿಗೆ ಶ್ರೀಲಂಕಾ ಗೆ ವೀಸಾ ಮುಕ್ತ ಪ್ರವೇಶ
ಸಾಮಾನ್ಯವಾಗಿ ಜನರು ಮೊದಲ ಬಾರಿಗೆ ವಿದೇಶಕ್ಕೆ ಹೋದರೆ, ಆ ದೇಶವು ಭಾರತಕ್ಕೆ ಹತ್ತಿರವಾಗಬೇಕು ಮತ್ತು ಭಾರತೀಯ ಕರೆನ್ಸಿಯೂ ಸಹ ಬಲವಾಗಿರಬೇಕು, ಆಗ ಕಡಿಮೆ ಹಣದಲ್ಲಿ ಹೆಚ್ಚು ಮೋಜು ಮಾಡಬಹುದು ಎಂದು ಭಾವಿಸುತ್ತಾರೆ. ಇದೀಗ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸುವ ಸಲುವಾಗಿ ಭಾರತ ಮತ್ತು ಇತರ ದೇಶಗಳಿಗೆ ಉಚಿತ ವೀಸಾ ನೀಡುವ ನಿರ್ಧಾರಕ್ಕೆ ಶ್ರೀಲಂಕಾ ಕ್ಯಾಬಿನೆಟ್ ಮಂಗಳವಾರ ಅನುಮೋದನೆ ನೀಡಿದೆ.
ವೀಸಾ ಇಲ್ಲದೆ ಪ್ರವೇಶ ಮಾಡಬಹುದಾದ ದೇಶಗಳೆಂದರೆ ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್. ಉಚಿತ ವೀಸಾ ನೀಡುವ ಮೂಲಕ ಪ್ರವಾಸಿಗರ ಸಂಖ್ಯೆ ಮುಂಬರುವ ವರ್ಷಗಳಲ್ಲಿ 50 ಲಕ್ಷಕ್ಕೆ ಏರುವ ನಿರೀಕ್ಷೆಯಿದೆ ಎಂದು ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿ ಹೇಳಿಕೆ ನೀಡಿದ್ದಾರೆ. ಈ ಕ್ರಮ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
Cabinet approves issuing of free visas to India, China, Russia, Malaysia, Japan, Indonesia & Thailand with immediate effect as a pilot project till 31 March –
— M U M Ali Sabry (@alisabrypc) October 24, 2023
ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ X
“ಮಾರ್ಚ್ 31 ರವರೆಗೆ ಪ್ರಾಯೋಗಿಕ ಯೋಜನೆಯಾಗಿ ತಕ್ಷಣವೇ ಜಾರಿಗೆ ಬರುವಂತೆ ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ಗಳಿಗೆ ಉಚಿತ ವೀಸಾಗಳನ್ನು ನೀಡಲು ಕ್ಯಾಬಿನೆಟ್ ಅನುಮೋದಿಸಿದೆ” ಎಂದು ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶ್ರೀಲಂಕಾ ಹಾಗೂ ಭಾರತೀಯ ರೂಪಾಯಿಯ ಮೌಲ್ಯ
ಭಾರತೀಯ ರೂಪಾಯಿ ಶ್ರೀಲಂಕಾದ ಕರೆನ್ಸಿಗಿಂತ ಹೆಚ್ಚು ಪ್ರಬಲವಾಗಿದೆ. ಭಾರತದಲ್ಲಿನ 1 ರೂಪಾಯಿ ಮೌಲ್ಯ ಶ್ರೀಲಂಕಾದಲ್ಲಿ 3.93 ಆಗಿದೆ. ಇಂಡಿಯಾದ 1000 ರೂಪಾಯಿಯನ್ನು ಶ್ರೀಲಂಕಾದ 3,903 ರೂ. ಗೆ ಪರಿವರ್ತಿಸಲಾಗುತ್ತದೆ. 10 ಸಾವಿರ ರೂಪಾಯಿಗಳಲ್ಲಿ 39 ಸಾವಿರ ರೂಪಾಯಿಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಒಂದು ಲಕ್ಷ ರೂಪಾಯಿಗಳಿಂದ ಸುಮಾರು ನಾಲ್ಕು ಲಕ್ಷ ಶ್ರೀಲಂಕಾದ ರೂಪಾಯಿಗಳವರೆಗೆ ಸುತ್ತಲು ಸಾಧ್ಯವಾಗುತ್ತದೆ.