Vishwakarma Yojana: ದಿನಕ್ಕೆ 500 ಮತ್ತು 2 ಲಕ್ಷ ರೂ ಸಾಲ, ದೇಶದ ಜನರಿಗೆ ನರೇಂದ್ರ ಮೋದಿಯಿಂದ ಭರ್ಜರಿ ಬರ್ತ್ ಡೇ ಗಿಫ್ಟ್.
ದೇಶದ ಜನರಿಗಾಗಿ ಕೇಂದ್ರದಿಂದ ಹೊಸ ಯೋಜನೆ.
Vishwakarma Yojana Benefit: ದೇಶದಲ್ಲಿ ಬಡತನ ನಿರ್ಮೂಲನೆಗಾಗಿ ಮೋದಿ ಸರ್ಕಾರ (Narendra Modi Government) ಹೊಸ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕೇಂದ್ರದ ಮೋದಿ ಸರ್ಕಾರ ದೇಶದ ಬಡ ನಾಗರೀಕರನನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದು ಕೇಂದ್ರದ ಉದ್ದೇಶವಾಗಿದೆ. ಜನರಿಗಾಗಿ ವಿವಿಧ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ. ದೇಶದ ಜನರು ಸರ್ಕಾರ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ.
ಈಗಾಗಲೇ ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ವಿವಿಧ ಸೌಲಭ್ಯವನ್ನು ನೀಡಿದೆ. ಇದೀಗ ಕೇಂದ್ರ ಸರ್ಕಾರ ಕಾರ್ಮಿಕರಾಗಿ ಹೊಸ ಯೋಜನೆಯನ್ನು ರೂಪಿಸಲು ನಿರ್ಧರಿಸಿದೆ. ಕಾರ್ಮಿಕರಿಗಾಗಿ ವಿಶೇಷ ಸಾಲ ಸೌಲಭ್ಯ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಈ ಮೂಲಕ ದೇಶದ ಬಡ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಮೋದಿ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಲು ಮುಂದಾಗಿದೆ.
ದೇಶದ ಜನರಿಗಾಗಿ ಕೇಂದ್ರದಿಂದ ಹೊಸ ಯೋಜನೆ
ದೇಶದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ ವಿಶ್ವಕರ್ಮ ಯೋಜನೆಯನ್ನು (Vishwakarma Yojana) ರೂಪಿಸಲಿದ್ದಾರೆ. ಇನ್ನು 13,000 ಕೋಟಿ ಮೀಸಲಿಟ್ಟಿರುವ Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು 2 ಲಕ್ಷದವರೆಗೆ ಸಾಲವನ್ನು ಪಡೆಯಬಹುದು.
ದಿನಕ್ಕೆ 500 ಮತ್ತು 2 ಲಕ್ಷ ರೂ ಸಾಲ
Vishwakarma Yojana ಅಡಿಯಲ್ಲಿ ಕುಶಲಕರ್ಮಿಗಳು ಸಬ್ಸಿಡಿ ಬಡ್ಡಿದರದಲ್ಲಿ 10000 ರೂ. ಗಳನ್ನೂ ಪಾವತಿಸಬೇಕಾಗುತ್ತದೆ. ಪ್ರಧಾನಿ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ಮೊದಲನೇ ಕಂತಿನಲ್ಲಿ 5 % ಬಡ್ಡಿಯಲ್ಲಿ ರೂ. 1 ಲಕ್ಷ ಸಾಲ, ಎರಡನೇ ಕಂತಿನಲ್ಲಿ 2 ಲಕ್ಷ ರೂ. ಸಾಲವನ್ನು ನೀಡಿ 5 % ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ.
ಈ ಯೋಜನೆಯಡಿ ಕೌಶಲ್ಯ ತರಭೇತಿಗೆ 500 ರೂ. ಸ್ಟೈಫಂಡ್ ಮತ್ತು ಆಧುನಿಕ ಉಪಕರಣಗಳನ್ನು ಖರೀದಿಸಲು 1500 ರೂ. ನೀಡಲಾಗುತ್ತದೆ. ಸಾಲದ ಬಡ್ಡಿದರವು ತುಂಬಾ ಕಡಿಮೆ ಇದ್ದು, Subsidy ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಸಬ್ಸಿಡಿ ಬಡ್ಡಿದರವು ಶೇ. 5 ರಷ್ಟಿರುತ್ತದೆ. ಇನ್ನು Septembar 17 ರಂದು Vishwakarma Jayanti ಹಾಗೂ Modi Birthday ಆಗಿರುವ ಕಾರಣ ಈ ಯೋಜನೆಗೆ ಅಂದೇ ಚಾಲನೆ ನೀಡಲಾಗುತ್ತದೆ.