Switch Off Campaign: ನಾಳೆ ಸ್ವಿಚ್ ಆಫ್ ಆಗಲಿದೆ ಈ ಕಂಪನಿಯ ಮೊಬೈಲ್ ಫೋನ್, ಜನರಲ್ಲಿ ಮನವಿ ಮಾಡಿಕೊಂಡ ಕಂಪನಿ
ಡಿಸೆಂಬರ್ 20 ರಂದು ಸ್ವಿಚ್ ಆಫ್ ಆಗಲಿದೆ ಈ ಕಂಪನಿಯ ಮೊಬೈಲ್
Vivo Mobiles Switch Off Campaign: ಇತೀಚಿನ ದಿನಗಳಲ್ಲಿ ಫೋನ್ ಗಳನ್ನೂ ದೊಡ್ಡ ವ್ಯಕ್ತಿಗಳಿಗಿಂತ, ಚಿಕ್ಕ ಮಕ್ಕಳು ಹೆಚ್ಚು ಹೆಚ್ಚು ಬಳಸುತ್ತಿದ್ದಾರೆ ಎಂಬ ವರದಿ ಹೊರಹೊಮ್ಮಿದೆ ಇದಕ್ಕೆ ಮುಖ್ಯ ಕಾರಣವೇ ಮಕ್ಕಳ ಪೋಷಕರು. ಮಕ್ಕಳು ಹೆಚ್ಚಾಗಿ ಹಠ ಮಾಡಿದರೆ, ಅವರು ಊಟ ಮಾಡಿಲ್ಲ ಅಂತಾದರೆ ಹಾಗು ನಿದ್ರೆ ಮಾಡುತ್ತಿಲ್ಲ ಅಂತಾದರೆ ಎಲ್ಲಾ ಕಾರಣಕ್ಕೂ ಮಕ್ಕಳ ಕೈ ಯಲ್ಲಿ ಫೋನ್ ಕೊಟ್ಟು ಬಿಡುತ್ತಾರೆ.
ಇದು ಮಕ್ಕಳ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತಿದೆ ಈ ಕಾರಣಕ್ಕಾಗಿ ವಿವೋ ಕಂಪನಿ ‘ಸ್ವಿಚ್ ಆಫ್’ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದು, ಡಿಸೆಂಬರ್ 20 ರಂದು ತನ್ನ ಎಲ್ಲಾ ಗ್ರಾಹಕರಿಗೆ ತಮ್ಮ ಸ್ಮಾರ್ಟ್ ಫೋನ್ ಸ್ವಿಚ್ ಆಫ್ ಮಾಡುವಂತೆ ಕೇಳಿದೆ. ಹಾಗಾದರೆ ವಿವೊ ಕಂಪನಿಯ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಲು ಕಾರಣ ಏನೆಂದು ತಿಳಿಯೋಣ ಬನ್ನಿ.
ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಮನವಿ
ಮಕ್ಕಳ ಕೈ ಯಲ್ಲಿ ಮೊಬೈಲ್ ನೀಡುವುದು ಆರಂಭದಲ್ಲಿ ಮೋಜಿನಂತೆ ಪ್ರಾರಂಭವಾಯಿತು. ಕ್ರಮೇಣ, ಇದು ಅವರಿಗೆ ವ್ಯಸನವಾಗುತ್ತಿದೆ. ಇದರೊಂದಿಗೆ ಹಗಲಿನಲ್ಲಿ ಹೆಚ್ಚಿನ ಸಮಯ ಫೋನ್ ನಲ್ಲಿ ಕಳೆಯುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಹಾಗಾಗಿ ಡಿಸೆಂಬರ್ 20 ರಂದು ರಾತ್ರಿ 8 ರಿಂದ 9 ರ ವರೆಗೆ ಜನರು ತಮ್ಮ ಕುಟುಂಬಗಳೊಂದಿಗೆ ಮೋಜು ಮಾಡಲು ಮತ್ತು ಮಕ್ಕಳು ತಮ್ಮ ಪೋಷಕರೊಂದಿಗೆ ಸಂತೋಷವಾಗಿರಲು ಒಂದು ಗಂಟೆ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ವಿವೋ ಕಂಪನಿ ಮನವಿ ಮಾಡಿದೆ.
ಮೊಬೈಲ್ ಗೆ ಅಂಟಿಕೊಂಡಿರುವ ಮಕ್ಕಳು
ಮಕ್ಕಳು ಮೊಬೈಲ್ ಗೆ ಎಷ್ಟು ಅವಲಂಬಿತರಾಗಿದ್ದಾರೆ ಎನ್ನುವ ಕುರಿತು ಕೆಲವು ಸಮೀಕ್ಷೆ ಮಾಡಿದ್ದೂ, ಅದರ ಪ್ರಕಾರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 42 ರಷ್ಟು ಮಕ್ಕಳು ದಿನಕ್ಕೆ ಎರಡರಿಂದ ನಾಲ್ಕು ಗಂಟೆಗಳ ಕಾಲ ತಮ್ಮ ಫೋನ್ ಗೆ ಅಂಟಿಕೊಂಡಿರುತ್ತಾರೆ. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ದಿನಕ್ಕೆ ಶೇಕಡಾ 47 ರಷ್ಟು ಸಮಯ ಫೋನ್ ನೋಡುತ್ತಾರೆ. ಶೇ.69 ರಷ್ಟು ಮಕ್ಕಳು ತಮ್ಮದೇ ಆದ ಫೋನ್ ಮತ್ತು ಟ್ಯಾಬ್ ಹೊಂದಿದ್ದಾರೆ.
ಸಮೀಕ್ಷೆಗಳ ಪ್ರಕಾರ, 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಯಾವುದೇ ಷರತ್ತುಗಳಿಲ್ಲದೆ ಇಂಟರ್ನೆಟ್ ಪ್ರವೇಶವನ್ನು ಹೊಂದಿದ್ದಾರೆ. 74 ರಷ್ಟು ಮಕ್ಕಳು ಯೂಟ್ಯೂಬ್ ವೀಕ್ಷಿಸಲು ಫೋನ್ ಬಳಸಿದರೆ, 12 ವರ್ಷಕ್ಕಿಂತ ಮೇಲ್ಪಟ್ಟವರು ಗೇಮಿಂಗ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎನ್ನಲಾಗಿದೆ. ಈ ಎಲ್ಲಾ ವಿಚಾರವನ್ನು ಗಮನಿಸಿದಾಗ ಮಕ್ಕಳು ಎಷ್ಟರ ಮಟ್ಟಿಗೆ ಮೊಬೈಲ್ ವ್ಯಸನಿ ಆಗಿದ್ದಾರೆ ಎನ್ನುವುದನ್ನು ತಿಳಿಯಬಹುದಾಗಿದೆ.