Vivo X200T Price And Specification: ಒಂದೊಳ್ಳೆ Smartphone ಖರೀದಿ ಮಾಡಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್. ಇದೀಗ ವಿವೊ ಹೊಸ ವರ್ಷದಲ್ಲಿ ಗ್ರಾಹಕರನ್ನು ಅಕರ್ಷಿಸಲು ಒಂದೊಳ್ಳೆ ಫೋನ್ ಬಿಡುಗಡೆ ಮಾಡಿದೆ. Vivo X200T ಸ್ಮಾರ್ಟ್ ಫೋನ್ ಭಾರತದಲ್ಲಿ 2026 ರ ಜನವರಿಯಲ್ಲಿ ಬಿಡುಗಡೆ ಆಗಲಿದೆ. ವಿವೋ X200T ಈ ಸರಣಿಯ ನಾಲ್ಕನೇ ಫೋನ್ ಆಗಲಿದೆ. ಹಳೆಯ ಮಾದರಿಗಳಿಗೆ ಹೋಲಿಕೆ ಮಾಡಿದರೆ ಹೊಸ ತಂತ್ರಜ್ಞಾನವನ್ನು ಈ ಹೊಸ ಮಾದರಿಯಲ್ಲಿ ಅಳವಡಿಸಲಾಗಿದೆ. ಗೇಮಿಂಗ್, ಫೋಟೋಗ್ರಫಿ, ಹಾಗೆ ದೈನಂದಿನ ಬಳಕೆಗೆ ಉತ್ತಮವಾಗಿದೆ. Vivo X200T ಸ್ಮಾರ್ಟ್ ಫೋನ್ ನ ಬೆಲೆ ಎಷ್ಟು..? Display ಕ್ವಾಲಿಟಿ ಹೇಗಿದೆ..? ಹಾಗೆ ಕ್ಯಾಮರಾ ಕ್ಯಾಲಿಟಿ ಯಾವ ರೀತಿ ಇದೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Vivo X200T Display
Vivo X200T ನಲ್ಲಿ 6.31 ಇಂಚು 1.5 K LTPO AMOLED ಡಿಸ್ಪ್ಲೇ ನೊಂದಿಗೆ 120Hz ರಿಫ್ರೆಶ್ ರೇಟ್ ನೀಡಲಾಗಿದೆ. ಇದರ ತೂಕ 186 g ಮತ್ತು ದಪ್ಪ 7.99 mm ಆಗಿರುತ್ತದೆ, ಒಂದು ಕೈಯಲ್ಲಿ ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಮೆಟಲ್ ಫ್ರೇಮ್, IP68/IP69 ರೇಟಿಂಗ್ ಮತ್ತು ಹಲವು ಬಣ್ಣಗಳ (ನೀಲಿ, ಹಳದಿ, ಕಪ್ಪ) ಆಯ್ಕೆಯಲ್ಲಿ ಗ್ರಾಹಕರ ಕೈಸೇರುತ್ತದೆ. Vivo X200T ಡಿಸ್ಪ್ಲೇ HDR10+ support and 1800 nits brightness ಪಡೆದುಕೊಂಡಿದೆ.
Vivo X200T Software
Vivo X200T ನಲ್ಲಿ MediaTek Dimensity 9400 ಅಥವಾ Dimensity 9300+ ಚಿಪ್ ಸೆಟ್ ನೀಡಲಾಗಿದೆ ಮತ್ತು ಈ ಮೊಬೈಲ್ ಗೇಮಿಂಗ್ ಮತ್ತು ಮಲ್ಟಿಟಾಸ್ಕಿನ್ಗ್ ಗೆ ಉತ್ತಮವಾಗಿದೆ. 12GB/16GB LPDDR5X RAM ಮತ್ತು 256GB/512GB UFS 3.1/4.0 ಸ್ಟೋರೇಜ್ ನೊಂದಿಗೆ ಬರುತ್ತದೆ. Android 15 ಆಧಾರಿತ Funtouch OS 15 ಅಥವಾ OriginOS 6 ಸುಗಮ ಅನುಭವ ನೀಡುತ್ತದೆ. ಡ್ಯುಯಲ್ ಸ್ಟೀರಿಯೋ ಸ್ಪೀಕರ್ ಗಳು, IR ಬ್ಲಾಸ್ಟರ್ ಮತ್ತು WiFi 7 ಸಪೋರ್ಟ್ ಇದ್ದು, ದೀರ್ಘಕಾಲದ ಬಳಕೆಗೆ ಸೂಕ್ತವಾಗಿದೆ.
Vivo X200T Camera
ZEISS ಬ್ರ್ಯಾಂಡಿಂಗ್ ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾವನ್ನು Vivo X200T ಸ್ಮಾರ್ಟ್ಫೋನ್ ನಲ್ಲಿ ಅಳವಡಿಸಲಾಗಿದೆ. Photography ಪ್ರಿಯರಿಗೆ ಉತ್ತಮವಾಗಿದೆ. 50MP ಮುಖ್ಯ ಕ್ಯಾಮೆರಾ (LYT-818 OIS), 50MP ಅಲ್ಟ್ರಾ-ವೈಡ್ ಲೆನ್ಸ್ (JN1), 3x ಆಪ್ಟಿಕಲ್ ಝೂಮ್‌ನೊಂದಿಗೆ 50MP ಟೆಲಿಫೋಟೋ ಕ್ಯಾಮೆರಾ ಒಳಗೊಂಡಿದೆ. 32MP ಅಥವಾ 50MP ಫ್ರಂಟ್ ಕ್ಯಾಮೆರಾ ಸೆಲ್ಫಿ ಮತ್ತು ವೀಡಿಯೊ ಕಾಲ್ ಗೆ ಉತ್ತಮವಾಗಿದೆ. 4K ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ.
Vivo X200T battery
Vivo X200T ಸ್ಮಾರ್ಟ್ ಫೋನ್ ನಲ್ಲಿ 6,500mAh ಬ್ಯಾಟರಿ ಅಳವಡಿಸಲಾಗಿದೆ. 90W ಫಾಸ್ಟ್ ಚಾರ್ಜಿಂಗ್ ನೀಡಲಾಗಿದೆ. 90W ಫಾಸ್ಟ್ ಚಾರ್ಜಿಂಗ್ ಕಾರಣ 30 ನಿಮಿಷದ 100% ಚಾರ್ಜ್ ಆಗುತ್ತದೆ. 30W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಬೆಂಬಲಿಸುತ್ತದೆ. Vivo X200T ಸ್ಮಾರ್ಟ್ ಫೋನ್ ಬ್ಯಾಟರಿ ಲೈಫ್ ಉತ್ತಮವಾಗಿದೆ.
Vivo X200T Price
Vivo X200T ಸ್ಮಾರ್ಟ್ ಫೋನ್ ಭಾರತದಲ್ಲಿ 45,000 ರೂಪಾಯಿಯಿಂದ 60,000 ರೂ ವರಗೆ ಇರಬಹುದು ಎಂದು ಅಂದಾಜಿಸಲಾಗಿದೆ. 2026 ರಲ್ಲಿ Xiaomi 15T, iQOO Neo 11, Realme GT 8 ಮತ್ತು OnePlus 13s ಗೆ ನೇರ ಪೈಪೋಟಿಯನ್ನು ನೀಡುತ್ತದೆ. Photography, Gaming ಮತ್ತು ದೈನಂದಿನ ಬಳಕೆಗೆ ಉತ್ತಮವಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

