Vivo X300 And X300 Pro Launch In India: ಮೊಬೈಲ್ ಖರೀದಿ ಮಾಡುವವರಿಗೆ ಇದೊಂದು ಸಿಹಿಸುದ್ದಿ. ಭಾರತದಲ್ಲಿ ಡಿಸೆಂಬರ್ 2ನೇ ತಾರೀಕಿಗೆ Vivo X300 ಮತ್ತು X300 Pro ಮೊಬೈಲ್ ಬಿಡುಗಡೆ ಆಗುತ್ತಿದ್ದು ಗ್ರಾಹಕರು ಆನ್ಲೈನ್ ಮತ್ತು ಅಧಿಕೃತ ಶಾಪ್ ಗಳಲ್ಲಿ ಖರೀದಿ ಮಾಡಬಹುದು. Vivo X300 ಮತ್ತು X300 Pro ಹಳೆಯ ಮಾದರಿಗಳಿಗೆ ಹೋಲಿಕೆ ಮಾಡಿದರೆ ಹೊಸ ತಂತ್ರಜ್ಞಾನ ಮತ್ತು ಹೊಸ ವಿಶೇಷತೆ ಒಳಗೊಂಡಿರುವ ಸ್ಮಾರ್ಟ್ಫೋನ್ ಆಗಿರುತ್ತದೆ. ಹಾಗಾದರೆ Vivo X300 ಮತ್ತು X300 Pro ನ ಬೆಲೆ ಮತ್ತು ವಿಶೇಷತೆ ತಿಳಿಯೋಣ.
ಭಾರತದಲ್ಲಿ ಲಾಂಚ್ ಆಗಲಿದೆ Vivo X300 ಮತ್ತು X300 Pro
ವಿವೋ X300 ಮತ್ತು X300 Pro ಈಗ ಚೀನಾದಲ್ಲಿ ಲಭ್ಯವಿದ್ದು, ಭಾರತದಲ್ಲಿ ಡಿಸೆಂಬರ್ 2ಕ್ಕೆ ಬರುತ್ತವೆ. ಇದು iQOO 15 ಲಾಂಚ್‌ನೊಂದಿಗೆ ಸ್ಪರ್ಧೆಯನ್ನು ಹೆಚ್ಚಿಸುತ್ತದೆ. ವಿವೋ X300 ಮತ್ತು X300 Pro ಭಾರತದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಅನ್ನುವುದು ಸಾಕಷ್ಟು ಜನರ ಅಭಿಪ್ರಾಯವಾಗಿದೆ.
Vivo X300 ಮತ್ತು X300 Pro ಬೆಲೆ ಮತ್ತು ವಿಶೇಷತೆ
X300 (12GB RAM + 256GB) ₹75,999 ರಿಂದ ಆರಂಭವಾಗಿ, 16GB + 512GB ₹85,999. X300 Pro (16GB + 512GB) ₹1,09,999. ಇದು ಫ್ಲ್ಯಾಗ್‌ಶಿಪ್ ಸೆಗ್‌ಮೆಂಟ್‌ನಲ್ಲಿ ಒಪ್ಪೋ ಫೈಂಡ್ X9 ಸರಣಿಯೊಂದಿಗೆ ಸ್ಪರ್ಧಿಸುತ್ತದೆ. ಈ ಬೆಲೆ ಅಧಿಕೃತ ಬೆಲೆ ಆಗಿರುವುದಿಲ್ಲ ಎಂದು ಕೆಲವು ಮಾಹಿತಿಗಳು ಸ್ಪಷ್ಟಪಡಿಸಿದೆ.
X300ನಲ್ಲಿ 200MP ಮುಖ್ಯ ಕ್ಯಾಮೆರಾ (Samsung HPB, f/1.68), 50MP Ultrawide, 50MP ಟೆಲಿಫೋಟೋ Zeiss ಲೆನ್ಸ್‌ನೊಂದಿಗೆ. X300 Proನಲ್ಲಿ 50MP Sony LYT-828 ಮುಖ್ಯ, 200MP HPB ಟೆಲಿಫೋಟೋ, 50MP JN1 Ultrawide ನಾವು ಕಾಣಬಹುದು. ಸಿನೆಮ್ಯಾಟಿಕ್ ಫೋಟೋ ಮತ್ತು ವೀಡಿಯೋಗೆ ಉತ್ತಮ, ವೈಬ್ 2.35x ಟೆಲಿಫೋಟೋ ಎಕ್ಸ್‌ಟೆಂಡರ್ ಕಿಟ್‌ನೊಂದಿಗೆ ಮೊಬೈಲ್ ಲಾಂಚ್ ಆಗಲಿದೆ ಇನ್ನೂ, OriginOS 6 (Android 16) 5 ವರ್ಷದ OS ಅಪ್‌ಡೇಟ್‌ಗಳೊಂದಿಗೆ ಬರುತ್ತದೆ. IP68/IP69 ರೇಟಿಂಗ್ ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ನೀಡುತ್ತದೆ. ಡಿಸೆಂಬರ್ ತಿಂಗಳಲ್ಲಿ ದೇಶಾದ್ಯಂತ ಈ ಮೊಬೈಲ್ ಲಾಂಚ್ ಆಗಲಿದೆ ಮತ್ತು ಆನ್ಲೈನ್ ರಿಯಾಯಿತಿ ಆಫರ್ ಲಭ್ಯವಿರುವ ಸಾಧ್ಯತೆ ಇದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

