Vivo X300 Pro Price And Specifications: ವಿವೋ ತನ್ನ ಇತೀಚಿಗೆ Vivo X300 Pro ಭಾರತದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚಿನ ತಂತ್ರಜ್ಞಾನ ಮತ್ತು ಅತ್ಯುನ್ನತ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಹುಡುಕುತಿರುವವರಿಗೆ ಈ ಫೋನ್ ಉತ್ತಮವಾಗಿದೆ. ಈ ಮೊಬೈಲ್ ಐಫೋನ್, Samsung, ಒನ್ ಪ್ಲಸ್, ಒಪ್ಪೋ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ತಯಾಕರ ಕಂಪನಿಗಳಿಗೆ ಪೈಪೋಟಿ ನೀಡುತ್ತದೆ ಎಂದರೆ ತಪ್ಪಾಗಲ್ಲ. ಫೋಟೋಗ್ರಫಿ ಪ್ರಿಯರಿಗೆ ಹೇಳಿ ಮಾಡಿಸಿದ ಫೋನ್ ಆಗಿದೆ. ಹಾಗಾದರೆ ಈ Vivo X300 Pro ಫೋನ್ ನ ಕ್ಯಾಮರಾ ಪಿಚರ್, ಡಿಸ್ಪ್ಲೇ, ಬೆಲೆ ಎಲ್ಲದರ ಬಗ್ಗೆ ಒಂದೊಂದಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
Vivo X300 Pro Display
Vivo X300 Pro ನಲ್ಲಿ 6.78 ಇಂಚಿನ LTPO AMOLED ಡಿಸ್ಪ್ಲೇ ಅನ್ನು ಅಳವಡಿಸಲಾಗಿದೆ. 120 Hz ರಿಫ್ರೆಶ್ ರೇಟ್, 4500 ನಿಟ್ಸ್ ಬ್ರೈಟ್ ನೆಸ್ ಮತ್ತು Dolby Vision ಸಪೋರ್ಟ್ ಕೂಡ ಪಡೆದುಕೊಂಡಿದೆ. ಸೂರ್ಯನ ಬೆಳಕಿನಲ್ಲಿ ಕೂಡ ಫೋನ್ ಸ್ಪಷ್ಟವಾಗಿ ಕಾಣಿಸುತ್ತದೆ. ಇನ್ನು ಈ ಮೊಬೈಲ್ OriginOS 6 (Android 16) 5 ವರ್ಷದ OS ಅಪ್‌ಡೇಟ್‌ಗಳೊಂದಿಗೆ ಬರುತ್ತದೆ. IP68/IP69 ರೇಟಿಂಗ್ ಡಸ್ಟ್ ಮತ್ತು ವಾಟರ್ ರೆಸಿಸ್ಟೆನ್ಸ್ ನೀಡುತ್ತದೆ. Vivo X300 Pro Smartphone ಸುಮಾರು 226 ಗ್ರಾಂ ತೂಕವಿದೆ.
2025 ರ ಬೆಸ್ಟ್ ಕ್ಯಾಮರಾ ಸ್ಮಾರ್ಟ್ ಫೋನ್
2025 ರಲ್ಲಿಯೇ ಬೆಸ್ಟ್ ಫೋನ್ ಎಂದು ಗುರುತಿಸಿಕೊಂಡ Vivo X300 ನಲ್ಲಿ 200MP ಮುಖ್ಯ ಕ್ಯಾಮೆರಾ (Samsung HPB, f/1.68), 50MP Ultrawide, 50MP ಟೆಲಿಫೋಟೋ Zeiss ಲೆನ್ಸ್ ಅಳವಡಿಸಲಾಗಿದೆ. X300 Pro ನಲ್ಲಿ 50MP Sony LYT-828 ಮುಖ್ಯ, 200MP HPB ಟೆಲಿಫೋಟೋ, 50MP JN1 Ultrawide ನಾವು ಕಾಣಬಹುದು. ಸಿನೆಮ್ಯಾಟಿಕ್ ಫೋಟೋ ಮತ್ತು ವೀಡಿಯೋಗೆ ಉತ್ತಮವಾಗಿದೆ. Portrait, macro, wildlife or night shot ಎಲ್ಲವೂ ಕೂಡ ಅದ್ಭುತವಾಗಿದೆ.
Vivo X300 Pro Battery Capacity
MediaTek Dimensity 9500 ಪ್ರಾಸೆಸರ್ ನೊಂದಿಗೆ ಫೋನ್ ಬಹಳ ವೇಗವಾಗಿ ಕೆಲಸ ಮಾಡುತ್ತದೆ. 16GB RAM ಮತ್ತು 512GB ಸ್ಟೋರೇಜ್ ಪಡೆದುಕೊಂಡಿದೆ. OriginOS 6 ಸಾಫ್ಟ್ ವೇರ್ AI ಫೀಚರ್ ಗಳೊಂದಿಗೆ ಉತ್ತಮ ಕಸ್ಟಮೈಜೇಶನ್ ನೀಡುತ್ತದೆ. ಹಾಗೆ ಬ್ಯಾಟರಿ 6510 mAh ಆಗಿದ್ದು, ಭಾರೀ ಬಳಕೆಯಲ್ಲೂ ಒಂದು ದಿನ ಸುಲಭವಾಗಿ ಬಳಕೆ ಮಾಡಬಹುದಾಗಿದೆ. 90W ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್ ಲೆಸ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ.
Vivo X300 Pro Price
ಭಾರತದಲ್ಲಿ Vivo X300 Pro Smartphone ಬೆಲೆ 12GB/256GB ಮಾದರಿಗೆ 75,999 Rs ಆಗಿದೆ, ಮತ್ತು 16GB/512GB ರೂಪಾಂತರಕ್ಕೆ 85,999 Rs ಆಗಿದೆ. ವಿವೊ ದ ಅಧಿಕೃತ ವೆಬ್ ಸೈಟ್, ಫ್ಲಿಪ್ ಕಾರ್ಟ್, ಅಮೆಜಾನ್ ಮತ್ತು ಅಧಿಕೃತ ಆಫ್ ಲೈನ್ ಅಂಗಡಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಬ್ಯಾಂಕ್ ಕ್ಯಾಶ್ ಬ್ಯಾಕ್, ಶೂನ್ಯ EMI, ವಿನಿಮಯ ಬೋನಸ್ ಮತ್ತು ವಾರಂಟಿ ಗಳೊಂದಿಗೆ ಖರೀದಿ ಮಾಡಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

