VI One Plan: ಸಿಂಗಲ್ ರಿಚಾರ್ಜ್ ನಲ್ಲಿ 3 ಧಮಾಕಾ ಕೊಟ್ಟ ವೊಡಾಫೋನ್! ಈ ಆಫರ್ ಗೆ ಪೋರ್ಟ್ ಮಾಡಿಸಿಕೊಳ್ಳಲು ಮುಂದಾದ ಅನೇಕರು
ಒಂದೇ ಯೋಜನೆಯಲ್ಲಿ ವಿವಿಧ ಸೇವೆಯನ್ನು ಬಿಡುಗಡೆ ಮಾಡಲು ಸಜ್ಜಾದ ವಡಾಪೋನ್ ಐಡಿಯಾ.
Vodafone Idea: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇದೆ. ವಿವಿದ ಟೆಲಿಕಾಂ ಕಂಪನಿಗಳು ಹೊಸ ಹೊಸ ರೀತಿಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸುತ್ತಿದೆ. ಇತ್ತೀಚಿಗೆ ಏರ್ ಟೆಲ್, ಜಿಯೋ ಹಾಗು ಬಿಎಸ್ಏನ್ಎಲ್ ಕಂಪನಿಗಳು ವಿವಿಧ ರೀತಿಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಿದ್ದವು. ಇದೀಗ ವಡಾಪೋನ್ ಐಡಿಯಾ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನು ಬಿಡುಗಡೆ ಮಾಡುತ್ತಿದೆ.
ವಡಾಪೋನ್ ಐಡಿಯಾ ಹೊಸ ರಿಚಾರ್ಜ್ ಪ್ಲ್ಯಾನ್
ಇದೀಗ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ವಡಾಪೋನ್ ಐಡಿಯಾ (Vodafone Idea) ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ವಡಾಪೋನ್ ಐಡಿಯಾ ಬಿಡುಗಡೆಗೊಳಿಸಿರುವ ಈ ಹೊಸ ರಿಚಾರ್ಜ್ ಪ್ಲ್ಯಾನ್ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ವಡಾಪೋನ್ ಐಡಿಯಾ ಬಳಕೆದಾರರು ಇನ್ನುಮುಂದೆ ವಿ ಒನ್ ಸೌಲಭ್ಯವನ್ನು ಪಡೆಯಬಹುದಾಗಿದೆ.
ವಡಾಪೋನ್ ಐಡಿಯಾದಲ್ಲಿ VI One ಸೇವೆ ಲಭ್ಯ
ವಡಾಪೋನ್ ಇದೀಗ ಒಂದೇ ಯೋಜನೆಯಲ್ಲಿ ವಿವಿಧ ಸೇವೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸೌಲಭ್ಯದ ಮೂಲಕ ಬಳಕೆದಾರರು ಫೈಬರ್ ಬ್ಯಾಂಡ್, ಮೊಬೈಲ್ ಟೆಲಿಕಾಂ ಮತ್ತು ಓಟಿಟಿ ಮೂರು ಸೇವೆಯನ್ನು ಪಡೆಯಬಹುದು. ಇದೆ ಮೊದಲ ಬಾರಿ ವಡಾಪೋನ್ ಐಡಿಯಾ ತನ್ನ ಗ್ರಾಹಕರಿಗೆ ಈ ಸೇವೆಯನ್ನು ನೀಡುತ್ತಿದೆ.
ವಿ ಟೆಲಿಕಾಂ ನ 2,912 ರೂ. ರಿಚಾರ್ಜ್ ಪ್ಲಾನ್
ವಡಾಪೋನ್ ಐಡಿಯಾದ VI One ಸೌಲಭ್ಯದಲ್ಲಿ 2912 , 3109 , 8390 , 12155 ರೂ. ಪ್ಲ್ಯಾನ್ ಗಳ ಆಯ್ಕೆ ನೀಡಲಾಗುತ್ತದೆ. ಈ ಎಲ್ಲ ಆಯ್ಕೆಗಳಲ್ಲಿ 2912 ಪ್ರಮುಖ ಬೇಸಿಕ್ ಪ್ಲ್ಯಾನ್ ಆಗಿದೆ. ವಿ ಗ್ರಾಹಕರು 2912 ರೂ. ರಿಚಾರ್ಜ್ ಪ್ಲ್ಯಾನ್ ನಲ್ಲಿ ಅನಿಯಮಿತ ಕರೆ, 2GB ಡೇಟಾ ಮತ್ತು ಪ್ರತಿನಿತ್ಯ 100 SMS ನ ಪ್ರಯೋಜನವನ್ನು ಪಡೆಯಬಹುದು.
ಈ ಪ್ಲ್ಯಾನ್ ನಲ್ಲಿ 90 ದಿನಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್, 90 ದಿನಗಳ ಸೋನಿಲೈವ್ ಮೊಬೈಲ್, ವಿ ಚಲನಚಿತ್ರಗಳು ಮತ್ತು ಟಿವಿ VIP ಮತ್ತು 90 ದಿನಗಳ ಸೀ 5 ಚಂದಾದಾರಿಕೆಯನ್ನು ಪಡೆಯಬಹುದು. ವಿ ಗ್ರಾಹಕರು 2912 ರೂ. ರಿಚಾರ್ಜ್ ಪ್ಲ್ಯಾನ್ ನಲ್ಲಿ 90 ದಿನಗಳ ಮಾನ್ಯತೆಯನ್ನು ಪಡೆಯಬಹುದಾಗಿದೆ.