Hello UPI: ಇನ್ನುಮುಂದೆ ಬಾಯಿ ಮಾತಿನ ಮೂಲಕ UPI ಪೇಮೆಂಟ್ ಮಾಡಬಹುದು, UPI ಗ್ರಾಹಕರಿಗೆ ಹೊಸ ಸೇವೆ.

UPI ಗ್ರಾಹಕರು ಧ್ವನಿ ಮೂಲಕ UPI ಪೇಮೆಂಟ್ ಮಾಡಬಹುದು.

Voice-Enabled UPI Payments: Google Pay, PhonePe, Paytm ಸೇರಿದಂತೆ ಇನ್ನಿತರ ಆನ್ಲೈನ್ ಡಿಜಿಟಲ್ ಪಾವತಿ ಅಪ್ಲಿಕೇಶನ್ ಗಳು ಜನರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡುತ್ತಿದೆ. ಈ Online ಪಾವತಿಯ ಬಳಕೆಯ ಕಾರಣ ಗ್ರಾಹಕರು ಸಣ್ಣ ಪುಟ್ಟ ವಿಚಾರಗಳಿಗೆ ಬ್ಯಾಂಕ್ ಗಳಿಗೆ ಭೇಟಿ ನೀಡುವುದು ಕಡಿಮೆಯಾಗಿದೆ. ನಗದು ರಹಿತ ವಹಿವಾಟುಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿದೆ ಆನ್ಲೈನ್ ಮೂಲಕ ಪಾವತಿ ಹೆಚ್ಚಾಗಿದೆ. Online Payment ಬಂದಾಗಿನಿಂದ ಜನರು ಹೆಚ್ಚಾಗಿ ಕೈಯಲ್ಲಿ ಹಣವನ್ನು ಇಟ್ಟುಕೊಳ್ಳುತ್ತಿಲ್ಲ.

ಎಲ್ಲ ರೀತಿಯ ಹಣಕಾಸಿನ ವಹಿವಾಟನ್ನು ಯುಪಿಐ (UPI) ಮೂಲಕವೇ ಪಾವತಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುಪಿಐ ನಲ್ಲಿ ಯುಪಿಐ ಲೈಟ್ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದರ ಮೂಲಕ ಪಾವತಿ ಇನ್ನು ಸುಲಭವಾಗಲಿದೆ. UPI Lite ಪಾವತಿಯ ಸೇವೆಯನ್ನು ನೀಡುತ್ತಿರುವುದರ ಬೆನ್ನಲ್ಲೇ ಇದೀಗ UPI ಬಳಕೆದಾರರಿಗೆ ಹೊಸ ಸೌಲಭ್ಯ ಸಿಗಲಿದೆ. ಈ ಹೊಸ ಸೌಲಭ್ಯವೂ ಬಳಕೆದಾರರಿಗೆ ಇನ್ನು ಹೆಚ್ಚಿನ ಅನುಕೂಲವನ್ನು ನೀಡಲಿದೆ.

Voice-Enabled UPI Payments
Image Credit: Mashable

UPI ಪಾವತಿದಾರರಿಗೆ ಹೊಸ ಸೌಲಭ್ಯ
ದೇಶದಲ್ಲಿ UPI ಆರಂಭಗೊಂಡಾಗಿನಿಂದ ಚಿಲ್ಲರೆ ಪಡೆಯಲು ಜಗಳ ಮಾಡುವ ಕೆಲಸ ತಪ್ಪಿ ಹೋಗಿದೆ. ಯುಪಿಐ ಚಿಲ್ಲೆರೆಯ ಸಲುವಾಗಿ ಉಂಟಾಗುವ ಜಗಳವನ್ನು ತಪ್ಪಿಸಿದೆ. ಇದೀಗ UPI ಗ್ರಾಹಕರಿಗಾಗಿ ಮತ್ತೊಂದು ಉಪಯುಕ್ತ ಸೌಲಭ್ಯವನ್ನು ನೀಡಲು ಮುಂದಾಗಿದೆ. ಇದೀಗ ಯುಪಿಐ ಬಳಕೆದಾರರಿಗಾಗಿ ಇನ್ನೊಂದು ಹೊಸ ಸೇವೆ ಲಭ್ಯವಾಗಲಿದೆ. ನೀವು ಯುಪಿಐ ಬಳಕೆದಾರರಾಗಿದ್ದರೆ ಈ ಸೇವೆಯ ಉಪಯೋಗ ಪಡೆಯಬಹುದು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ (NPCI ) ಸಂಸ್ಥೆ ಯುಪಿಐನಲ್ಲಿ ಹೊಸ ಸೌಲಭ್ಯ ನೀಡಲು ಮುಂದಾಗಿದೆ.

ನಿಮ್ಮ ಧ್ವನಿ ಮೂಲಕ ಯುಪಿಐ ಪಾವತಿ ಸಾಧ್ಯ
Reserve Bank Of India ಇದೀಗ ಧ್ವನಿಯ ಮೂಲಕ ಹಣ ಪಾವತಿಸುವ ವಿಧಾನವನ್ನು UPI ನಲ್ಲಿ ನೀಡಲು ನಿರ್ಧರಿಸಿದೆ. ಸುರಕ್ಷಿತ ಮತ್ತು ಸುಭದ್ರಾ ರೀತಿಯಲ್ಲಿ ಹಣಕಾಸು ವಹಿವಾಟುಗಳನ್ನು ಪ್ರಾರಂಭಿಸಲು ಮತ್ತು ಪೂರ್ಣಗೊಳಿಸಲು ಬಳಕೆದಾರರಿಗೆ ಸಹಾಯ ಮಾಡಿಕೊಡಲು ‘ಸಂಭಾಷಣಾ ಪಾವತಿ’ (Conversational Payment) ಯೋಜನೆಯನ್ನು ನೀಡುವ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ.

NPCI launches voice-enabled UPI payments
Image Credit: Gizbot

ಇನ್ನುಮುಂದೆ ನಿಮ್ಮ ಧ್ವನಿ ಅಥವಾ ಸಂಭಾಷಣೆಯ ಮೂಲಕ ಯುಪಿಐ ಪಾವತಿಯನ್ನು ಪೂರ್ಣಗೊಳಿಸಿಕೊಳ್ಳಬಹುದು. ಸಂಭಾಷಣೆ ಪಾವತಿ ಸೌಲಭ್ಯವು ಕೃತಕ ಬುದ್ದಿಮತ್ತೆ ಚಾಲಿತವಾಗಿದೆ. ಹೊಸ ತಂತ್ರಜ್ಞಾನದ ಮೂಲಕ UPI ಗ್ರಾಹಕರಿಗೆ ಲಭ್ಯವಾಗಲಿದೆ. ‘Hello UPI Payment’ ಸೌಲಭ್ಯ ಯುಪಿಐ ಬಳಕೆದಾರರ ಸಮಯವನ್ನು ಇನ್ನಷ್ಟು ಉಳಿಸಲಿದೆ. ಇನ್ನುಮುಂದೆ ನೀವು Voice-Enabled UPI Payments ನ ಮೂಲಕ ಹಣದ ಪಾವತಿಯ ಮೊತ್ತವನ್ನು ನಿಮ್ಮ ದ್ವನಿಯ ಮೂಲಕ ಹೇಳಿ ಹಣವನ್ನು ಪಾವತಿಸಬಹುದು.

Join Nadunudi News WhatsApp Group

Join Nadunudi News WhatsApp Group