Volvo C40: ಒಮ್ಮೆ ಚಾರ್ಜ್ ಮಾಡಿದರೆ 530 Km ರೇಂಜ್, ಮಾರುಕಟ್ಟೆಯಲ್ಲಿ ಸಂಚಲ ಮೂಡಿಸಲು ಬರುತ್ತಿದೆ ಇನ್ನೊಂದು EV.
ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 530 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಹೊಸ ಎಲೆಕ್ಟ್ರಿಕ್ ಕಾರ್.
Volvo C40 Electric Car: ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಆಕರ್ಷಕ ಲುಕ್ ನ ಸಾಕಷ್ಟು ಕಾರ್ ಗಳಿವೆ. ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯಲ್ಲಿ ನೂತನ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ.
ಇದೀಗ ಜನಪ್ರಿಯ ಕಾರ್ ತಯಾರಕ ಕಂಪನಿಯಾಗಿರುವ ವೋಲ್ವೋ (Volvo) ನೂತನ ಸುಧಾರಿತ ವಿನ್ಯಾಸದ ಹೊಸ ಕಾರ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಕಂಪನಿಯ ನೂತನ ಕಾರ್ ನ ಬುಕ್ಕಿಂಗ್ ಸದ್ಯದಲ್ಲೇ ಆರಂಭಗೊಳ್ಳಲಿದೆ.
ವೋಲ್ವೋ C40 ರಿಚಾರ್ಜ್ ಕಾರ್ (Volvo C40 Electric Car)
ನೂತನ ವೋಲ್ವೋ C40 ರಿಚಾರ್ಜ್ ಕಾರ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಕಾರ್ ಶೀಘ್ರದಲ್ಲೇ ವೊಲ್ವೊದ ಎಲೆಕ್ಟ್ರಿಕ್ ಉತ್ಪನ್ನ ಪೋರ್ಟ್ಪೋಲಿಯೋಗೆ ಸೇರಲಿದೆ. ಮುಂಬರುವ ವೋಲ್ವೋ C40 ರಿಚಾರ್ಜ್ ಮಾದರಿಯನ್ನು ವೋಲ್ವೋ CC40 ರಿಚಾರ್ಜ್ ಎಸ್ ಯೂವಿಯೊಂದಿಗೆ ಮಾರಾಟ ಮಾಡಲಾಗುತ್ತದೆ. ಹೊಸ ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ಸೆಪ್ಟೆಂಬರ್ 4 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ವೋಲ್ವೋ C40 ರಿಚಾರ್ಜ್ ಕಾರು CMA ಪ್ಲಾಟ್ ಫಾರಂ ಅನ್ನು ಆಧರಿಸಿದೆ.
ವೋಲ್ವೋ C40 ರಿಚಾರ್ಜ್ ಕಾರ್ ಬ್ಯಾಟರಿ
ಈ ನೂತನ ವೋಲ್ವೋ C40 ರಿಚಾರ್ಜ್ ಕಾರ್ ಡ್ಯುಯಲ್ ಮೋಟಾರ್ ಆಲ್ ವೀಲ್ ಡ್ರೈವ್ ಸೆಟಪ್ ನಲ್ಲಿ ಬರಲಿದೆ. ಈ C40 ರಿಚಾರ್ಜ್ ಕಾರ್ 78kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಡ್ಯುಯಲ್-ಎಲೆಕ್ಟ್ರಿಕ್ ಮೋಟಾರ್ ಸೆಟಪ್ ನೊಂದಿಗೆ 405 bhp ಮತ್ತು 660 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ವೋಲ್ವೋ C40 ರಿಚಾರ್ಜ್ ಕಾರ್ ಬೆಲೆ
ಅನೇಕ ಏರ್‌ಬ್ಯಾಗ್‌ಗಳು, ಮುಂಭಾಗದ ಸೀಟುಗಳಿಗೆ ವಿಪ್ಲ್ಯಾಶ್ ರಕ್ಷಣೆ, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್‌ನಂತಹ ADAS ಫೀಚರ್ಸ್ ಗಳನ್ನೂ ಸುರಕ್ಷತೆಗಾಗಿ ಅಳವಡಿಸಲಾಗಿದೆ. ಇನ್ನು ಈ ನೂತನ ವೋಲ್ವೋ C40 ರಿಚಾರ್ಜ್ ಕಾರ್ ಗೆ 59 ರಿಂದ 60 ಲಕ್ಷ ಬೆಲೆಯನ್ನುಕಂಪನಿಯು ನಿಗದಿಪಡಿಸಿದೆ.
ಒಂದೇ ಚಾರ್ಜ್ ನಲ್ಲಿ 530 ಕಿಲೋಮೀಟರ್
ಈ ಕಾರ್ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 530 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕೇವಲ 30 ರಿಂದ 40 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಕಾರ್ 4 .7 ಸೆಕೆಂಡುಗಳಲ್ಲಿ 0 -100 ಕಿಲೋಮೀಟರ್ ವೇಗವನ್ನು ಪಡೆಯಲಿದ್ದು, ಈ ಕಾರಿನ ಟಾಪ್ ಸ್ಪೀಡ್ 180 ಕಿಲೋಮೀಟರ್ ಆಗಿದೆ. C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ 19 ಇಂಚಿನ ಅಲಾಯ್ ವೀಲ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ ಆರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.