Volvo EV: ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 530km ರೇಂಜ್, ಈ ಎಲೆಕ್ಟ್ರಿಕ್ ಕಾರಿನ ಮುಂದೆ ಮಂಕಾದ ಟಾಟಾ ಮತ್ತು ಕ್ರೇಟಾ.

ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 530 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಕಾರ್.

Volvo C40 Recharge Car: ಮಾರುಕಟ್ಟೆಯಲ್ಲಿ ವಿವಿಧ ವೈಶಿಷ್ಟ್ಯಗಳಿರುವ ನೂತನ ರೂಪಾಂತರದ ಸಾಕಷ್ಟು ಮಾದರಿಯ ಕಾರ್ ಗಳಿವೆ. ಎಲೆಕ್ಟ್ರಿಕ್ ರೂಪಾಂತರದ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇತ್ತೀಚೆಗಂತೂ ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯಲ್ಲಿ ನೂತನ ಎಲೆಕ್ಟ್ರಿಕ್ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ.

ಇದೀಗ ಜನಪ್ರಿಯ ಕಾರ್ ತಯಾರಕ ಕಂಪನಿಯಾಗಿರುವ ವೋಲ್ವೋ (Volvo) ನೂತನ ಸುಧಾರಿತ ವಿನ್ಯಾಸದ ಹೊಸ ಕಾರ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಕಂಪನಿಯ ನೂತನ ಕಾರ್ ನ ಬುಕ್ಕಿಂಗ್ ಸದ್ಯದಲ್ಲೇ ಆರಂಭಗೊಂಡು ಇನ್ನಿತರ ಮಾದರಿಯ ಕಾರ್ ಗಳಿಗೆ ಬಾರಿ ಸ್ಪರ್ಧೆ ನೀಡಲಿದೆ.

Volvo C40 Recharge Car price
Image Credit: Cardekho

ವೋಲ್ವೋ C40 ರಿಚಾರ್ಜ್ ಕಾರ್ (Volvo C40 Recharge Car) 
ನೂತನ ವೋಲ್ವೋ C40 ರಿಚಾರ್ಜ್ ಕಾರ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಕಾರ್ ಶೀಘ್ರದಲ್ಲೇ ವೊಲ್ವೊದ ಎಲೆಕ್ಟ್ರಿಕ್ ಉತ್ಪನ್ನ ಪೋರ್ಟ್ಪೋಲಿಯೋಗೆ ಸೇರಲಿದೆ. ಮುಂಬರುವ Volvo C40 Electric ರಿಚಾರ್ಜ್ ಮಾದರಿಯನ್ನು ವೋಲ್ವೋ CC40 ರಿಚಾರ್ಜ್ ಎಸ್ ಯೂವಿಯೊಂದಿಗೆ ಮಾರಾಟ ಮಾಡಲಾಗುತ್ತದೆ. ಹೊಸ ವೋಲ್ವೋ C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ ಸೆಪ್ಟೆಂಬರ್ 4 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ವೋಲ್ವೋ C40 ರಿಚಾರ್ಜ್ ಕಾರ್ ಬ್ಯಾಟರಿ
ಈ ನೂತನ ವೋಲ್ವೋ C40 ರಿಚಾರ್ಜ್ ಕಾರ್ ಡ್ಯುಯಲ್ ಮೋಟಾರ್ ಆಲ್ ವೀಲ್ ಡ್ರೈವ್ ಸೆಟಪ್ ನಲ್ಲಿ ಬರಲಿದೆ. ಈ C40 ರಿಚಾರ್ಜ್ ಕಾರ್ 78kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. Dual-electric motor setup ನೊಂದಿಗೆ 405 bhp ಮತ್ತು 660 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Volvo C40 Recharge Car Battery Capacity
Image Credit: Cardekho

ವೋಲ್ವೋ C40 ರಿಚಾರ್ಜ್ ಕಾರ್ ಬೆಲೆ
Volvo C40 Electric Car ನಲ್ಲಿ Air bags, whiplash protection for the front seats, hill start assist, hill descent control, 360-degree camera, adaptive cruise control and lane keeping assist and blind spot detection ಸೇರಿದಂತೆ ಇನ್ನಿತರ ADAS ಫೀಚರ್ಸ್ ಗಳನ್ನೂ ಸುರಕ್ಷತೆಗಾಗಿ ಅಳವಡಿಸಲಾಗಿದೆ. ಇನ್ನು ಈ ನೂತನ ವೋಲ್ವೋ C40 ರಿಚಾರ್ಜ್ ಕಾರ್ ಗೆ 59 ರಿಂದ 60 ಲಕ್ಷ ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ.

Join Nadunudi News WhatsApp Group

ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 530km ರೇಂಜ್
ಈ ಕಾರ್ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 530 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕೇವಲ 30 ರಿಂದ 40 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಕಾರ್ 4 .7 ಸೆಕೆಂಡುಗಳಲ್ಲಿ 0 -100 ಕಿಲೋಮೀಟರ್ ವೇಗವನ್ನು ಪಡೆಯಲಿದ್ದು, ಈ ಕಾರಿನ ಟಾಪ್ ಸ್ಪೀಡ್ 180 ಕಿಲೋಮೀಟರ್ ಆಗಿದೆ. C40 ರಿಚಾರ್ಜ್ ಎಲೆಕ್ಟ್ರಿಕ್ ಕಾರ್ 19 ಇಂಚಿನ ಅಲಾಯ್ ವೀಲ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ ಆರು ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ.

Join Nadunudi News WhatsApp Group