Best Ev ಒಮ್ಮೆ ಚಾರ್ಜ್ ಮಾಡಿದರೆ 592 Km ರೇಂಜ್, ಈ ಎಲೆಕ್ಟ್ರಿಕ್ ಕಾರ್ ಮುಂದೆ ಟೆಸ್ಲಾ ಕೂಡ ಮಂಕಾಗಿದೆ

ಸಿಂಗಲ್ ಚಾರ್ಜ್ ನಲ್ಲಿ 592 Km ಮೈಲೇಜ್ ಕೊಡುವ ಈ ಕಾರಿಗೆ ಸಕತ್ ಡಿಮ್ಯಾಂಡ್

Volvo XC40 Recharge Electric: ಭಾರತೀಯ ಆಟೋ ವಲಯದಲ್ಲಿ ವಿವಿಧ ಕಂಪನಿಗಳು ಹತ್ತು ಹಲವು ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಇನ್ನು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಸದ್ಯ ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಮಾದರಿಯ ಕಾರ್ ಗಳು ಲಾಂಚ್ ಆಗುತ್ತಿವೆ.

ಇದೀಗ ದೇಶದ ಜನಪ್ರಿಯ ಕಾರ್ ತಯಾರಾಕ ಕಂಪನಿಯಾದ Volvo Cars In India ಇದೀಗ ಮಾರುಕಟ್ಟೆಯಲ್ಲಿ ತನ್ನ XC40 Recharge Electric ಮಾದರಿಯನ್ನು 2023 ರಲ್ಲಿ ಪರಿಚಯಿಸಿದೆ. ಇದೀಗ ವೋಲ್ವೋ ಎಲೆಕ್ಟ್ರಿಕ್ ಕಾರ್ ಆಗಿರುವ XC40 ಕಾರಿನ ಹೊಸ ವೇರಿಯೆಂಟ್ ಅನ್ನು ಕಂಪನಿಯು ಬಿಡುಗಡೆ ಮಾಡಿದೆ. ಈ ನೂತನ ಮಾದರಿಯು ಹಳೆಯ ಮಾಡರ್ಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡಲಿದೆ.

Volvo XC40 Recharge Electric Car
Image Credit: Bloomberg

ಮಾರುಕಟ್ಟೆಯಲ್ಲಿ ವೋಲ್ವೋ ಮಾದರಿಯ ನೂತನ ಕಾರ್ ಬಿಡುಗಡೆ
ವೋಲ್ವೋ XC40 ರೀಚಾರ್ಜ್ ವೋಲ್ವೋ ಕಾರನ್ನು ಬೆಂಗಳೂರಿನ ಹೊಸಕೋಟೆಯಲ್ಲಿರುವ ಅತ್ಯಾಧುನಿಕ ಸ್ಥಳೀಯ ಉತ್ಪಾದನಾ ಘಟಕದಲ್ಲಿ ಜೋಡಿಸಲಾಗುತ್ತದೆ. ಸರಿಸುಮಾರು 54.95 ಲಕ್ಷದ ಆರಂಭಿಕ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. XC40 ರೀಚಾರ್ಜ್ 8-ವರ್ಷದ ಬ್ಯಾಟರಿ ವಾರಂಟಿ, 3-ವರ್ಷದ ಸಮಗ್ರ ಕಾರು ವಾರಂಟಿ, 3-ವರ್ಷದ ವೋಲ್ವೋ ಸೇವಾ ಪ್ಯಾಕೇಜ್, 3-ವರ್ಷದ ರೋಡ್ ಸೆಡ್ ಅಸಿಸ್ಟಂಸ್, ಡಿಜಿಟಲ್ ಸೇವೆಗಳಿಗೆ 3-ವರ್ಷದ ಚಂದಾದಾರಿಕೆಯೊಂದಿಗೆ ಬರುತ್ತದೆ.

ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 592km ಮೈಲೇಜ್
LTP ಮಾನದಂಡಗಳ ಪ್ರಕಾರ 475 ಕಿಮೀ ಮತ್ತು ICAT ಪರೀಕ್ಷೆಯ ಪ್ರಕಾರ 592 ಕಿಮೀ ಮೈಲೇಜ್ ಅನ್ನು ಒಂದೇ ಚಾರ್ಜ್ ನಲ್ಲಿ ನೀಡಲಿದೆ. ಕೇವಲ 7.3 ಸೆಕೆಂಡುಗಳಲ್ಲಿ 0 ರಿಂದ 100 kmph ವೇಗವನ್ನು ಹೆಚ್ಚಿಸುತ್ತದೆ ಮತ್ತು ಸಮರ್ಥನೀಯತೆಯ ಮೇಲೆ ಕೇಂದ್ರೀಕರಿಸುವ ಮೂಲಕ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 238 hp ಪವರ್ ಮತ್ತು 420 NM ಟಾರ್ಕ್ ಸಾಮರ್ಥ್ಯವನ್ನು ಹೊಂದಿದೆ.

Volvo XC40 Recharge Electric Car Price
Image Credit: Original Source

2022 ರಲ್ಲಿ ಬಿಡುಗಡೆಯಾದ XC40 ರೀಚಾರ್ಜ್‌ನ ದೊಡ್ಡ ಯಶಸ್ಸಿನ ನಂತರ, ನಾವು XC40 ರೀಚಾರ್ಜ್ ಸಿಂಗಲ್ ಮೋಟರ್ ರೂಪಾಂತರವನ್ನು ಪ್ರಾರಂಭಿಸಿದ್ದೇವೆ. ಈ ವಾಹನವು ನಮ್ಮ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ವೋಲ್ವೋ ಕಾರ್ಸ್ ಇಂಡಿಯಾದ ನಿರ್ದೇಶಕ ಜ್ಯೋತಿ ಮಲ್ಹೋತ್ರಾ ಹೇಳಿದ್ದಾರೆ. ಶೀಘ್ರದಲ್ಲೇ ಮಾರುಕಟ್ಟೆಗೆ XC40 ರೀಚಾರ್ಜ್ ಸಿಂಗಲ್ ಮೋಟರ್ ರೂಪಾಂತರ ಎಂಟ್ರಿ ಕೊಡಲಿದೆ. ಹೊಸ ಎಲೆಕ್ಟ್ರಿಕ್ ಕಾರ್ ಖರೀದಿಸುವ ಗ್ರಾಹಕರಿಗೆ ಇನ್ನುಮುಂದೆ ಹೊಸ ಆಯ್ಕೆ ಸಿಗಲಿದೆ.

Join Nadunudi News WhatsApp Group

Join Nadunudi News WhatsApp Group