Voter ID Update: ಮದುವೆಯ ನಂತರ ವೋಟರ್ ID ಹೆಸರು ಬದಲಿಸುವುದು ಹೇಗೆ…? Online ಮೂಲಕ ಈ ರೀತಿ ಬದಲಾಯಿಸಿ

ಮದುವೆಯ ನಂತರ ಆನ್ಲೈನ್ ನಲ್ಲಿ ವೋಟರ್ ಐಡಿಯನ್ನು ಹೀಗೆ ಬದಲಾವಣೆ ಮಾಡಿ

Voter ID Address Change Online Process: ಚುನಾವಣಾ ಸಮಯದಲ್ಲಿ ಮತವನ್ನು ಹಾಕಲು Voter ID ಮುಖ್ಯವಾಗಿರುತ್ತದೆ. ವೋಟರ್ ಐಡಿಯಲ್ಲಿ ವ್ಯಕ್ತಿಯ ಎಲ್ಲ ವೈಯಕ್ತಿಕ ಮಾಹಿತಿಯನ್ನು ಕೂಡ ನಮೂದಿಸಲಾಗುತ್ತದೆ. ಇನ್ನು ಭಾರತದಲ್ಲಿ 18 ವರ್ಷ ಮೇಲ್ಪಟ್ಟವರು ಮತ ಚಲಾಯಿಸುವ ಹಕ್ಕನ್ನು ಹೊಂದುತ್ತಾರೆ.

ಹಾಗೆಯೆ 18 ವರ್ಷ ಮೇಲ್ಪಟ್ಟವರು Voter ID ಅನ್ನು ಹೊಂದಬಹುದಾಗಿದೆ. ಇನ್ನು ದೇಶದಲ್ಲಿ ಸದ್ಯದಲ್ಲೇ ಲೋಕಸಭಾ ಚುನಾವಣೆ ಬರಲಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ ಚುನಾವಣಾ ಆಯೋಗವು ವೋಟರ್ ಐಡಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಅವಕಾಶವನ್ನು ನೀಡಿದೆ. ಇನ್ನು ವೋಟರ್ ಐಡಿಯಲ್ಲಿ ವಿಳಾಸ ಸರಿಯಾಗಿರುವುದು ಮುಖ್ಯವಾಗಿದೆ.

Voter ID Address Change Online Process
Image Credit: India Today

ಮದುವೆಯ ನಂತರ ವೋಟರ್ ಐಡಿಯಲ್ಲಿನ ವಿಳಾಸ ಬದಲಾವಣೆ ಅಗತ್ಯ
ಮಹಿಳೆಯರು ಮದುವೆಯ ಬಳಿಕ ಗಂಡನ ಮನೆಯಲ್ಲಿ ವಾಸವಿರುತ್ತಾರೆ. ಈ ಸಂದರ್ಭದಲ್ಲಿ Voter ID ಯಲ್ಲಿರುವ ವಿಳಾಸವನ್ನು ಬದಲಾಯಿಸಬೇಕಾಗುತ್ತದೆ. ಈ ರೀತಿ ವಿಳಾಸ ಬದಲಾವಣೆಗೆ ನೀವು ಹೆಚ್ಚು ಕಷ್ಟಪಡಬೇಕಿಲ್ಲ. Online ನಲ್ಲಿ ಸುಲಭ ಮಾರ್ಗದಲ್ಲಿ Voter ID ವಿಳಾಸವನ್ನು ವರ್ಗಾವಣೆ ಮಾಡಿಕೊಳ್ಳಬಹುದು. ನಾವೀಗ ಈ ಲೇಖನದಲ್ಲಿ Online ನಲ್ಲಿ Voter ID ಯನ್ನು ಹೇಗೆ ವರ್ಗಾವಣೆ ಮಾಡುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಹೇಳಲಿದ್ದೇವೆ.

ಮದುವೆಯ ನಂತರ ಆನ್ಲೈನ್ ನಲ್ಲಿ ವೋಟರ್ ಐಡಿಯನ್ನು ಹೀಗೆ ವರ್ಗಾವಣೆ ಮಾಡಿ
•ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (NVSP) ವೆಬ್‌ ಸೈಟ್‌ ಗೆ ಭೇಟಿ ನೀಡಿ.

•ನಂತರ ನಿಮ್ಮ ರುಜುವಾತುಗಳನ್ನು ಬಳಸಿಕೊಂಡು NVSP ಪೋರ್ಟಲ್‌ ಗೆ ಲಾಗ್ ಇನ್ ಮಾಡಿ.

Join Nadunudi News WhatsApp Group

•ಈ ಸಂದರ್ಭದಲ್ಲಿ ‘ವಾಸಸ್ಥಾನದ ಬದಲಾವಣೆ ಅಥವಾ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿ ನಮೂದುಗಳ ತಿದ್ದುಪಡಿ’ ಟ್ಯಾಬ್‌ ಗೆ ನ್ಯಾವಿಗೇಟ್ ಮಾಡಿ ಮತ್ತು ಫಾರ್ಮ್ 8 ಅನ್ನು ಭರ್ತಿ ಮಾಡಿ.

•ಈ ಎಲ್ಲಾ ನಂತರ Self ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ EPIC ಸಂಖ್ಯೆಯನ್ನು ಪ್ರದರ್ಶಿಸಲು ಸಲ್ಲಿಸು ಬಟನ್ ಅನ್ನು ಟ್ಯಾಪ್ ಮಾಡಿ.

Voter ID Latest Update
Image Credit: Times Of India

•ಇದೆಲ್ಲದರ ನಂತರ ನಿಮ್ಮ ಮತದಾರರ ವಿವರಗಳನ್ನು ಪರಿಶೀಲಿಸಿ ಮತ್ತು ಶಿಫ್ಟಿಂಗ್ ಟು ರೆಸಿಡೆನ್ಸಿ ಎಂಬ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ, ನೀವು ವಿಧಾನಸಭಾ ಕ್ಷೇತ್ರದ ಒಳಗೆ ಅಥವಾ ಹೊರಗೆ ಆಯ್ಕೆಯನ್ನು ಹೊಂದಿರುತ್ತೀರಿ, ನಿಮಗೆ ಅಗತ್ಯವಿರುವುದನ್ನು ಆಯ್ಕೆ ಮಾಡಿ.

•ನಂತರ ರಾಜ್ಯ, ಜಿಲ್ಲೆ, ವಿಧಾನಸಭೆ ಅಥವಾ ಸಂಸದೀಯ ಕ್ಷೇತ್ರ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ಮತ್ತು ಹೊಸ ವಿಳಾಸ ಸೇರಿದಂತೆ ಅಗತ್ಯ ವಿವರಗಳೊಂದಿಗೆ ಫಾರ್ಮ್ 8 ಅನ್ನು ಭರ್ತಿ ಮಾಡಿ.

•ಅಗತ್ಯವಿರುವ ವಿಳಾಸ ಪುರಾವೆ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ, ಮಾಹಿತಿಯನ್ನು ಘೋಷಿಸಿ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸಲ್ಲಿಸಿ.

•ಈ ಎಲ್ಲಾ ಪ್ರಕ್ರಿಯೆಯ ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನಿಮ್ಮ ಅಪ್ಲಿಕೇಶನ್ ಉಲ್ಲೇಖ ಸಂಖ್ಯೆಯೊಂದಿಗೆ ಇಮೇಲ್ ಸಂದೇಶವನ್ನು ಪಡೆಯುತ್ತೀರಿ.

•ಅದರ ನಂತರ ನೀವು ಕೆಲವೇ ದಿನಗಳಲ್ಲಿ ಚುನಾವಣಾ ಕಚೇರಿಯಿಂದ ಹೊಸ ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದು ಅಥವಾ NVSP ಪೋರ್ಟಲ್‌ ನಿಂದ ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ ಲೋಡ್ ಮಾಡಬಹುದು.

Voter ID Address Change
Image Credit: PM Modi Yojana

Join Nadunudi News WhatsApp Group