Voter ID Online: ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಸುಲಭವಾಗಿ ವೋಟರ್ ID ಗೆ ಅರ್ಜಿ ಸಲ್ಲಿಸಿ, 10 ದಿನದಲ್ಲಿ ಮನೆ ಬಾಗಿಲಿಗೆ ಬರಲಿದೆ.
ಆನ್ಲೈನ್ ನ ಮೂಲಕ Voter ID ಗೆ ಅರ್ಜಿ ಸಲ್ಲಿಸುವ ವಿಧಾನ
Voter ID Online Apply Process: Voter ID ದಾಖಲೆಯನ್ನು ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ಹೊಂದಿರಬೇಕು. ಭಾರತೀಯರಿಗೆ Voter ID ಮುಖ್ಯ Identity ದಾಖಲೆಯಾಗಿದೆ. ಭಾರತೀಯರಿಗೆ ಮತದಾನ ಮೂಲಭೂತ ಹಕ್ಕಾಗಿದ್ದು, ತಮ್ಮ ಮತದಾನದ ಹಕ್ಕನ್ನು ಪಡೆಯಲು ಭಾರತದ ಪ್ರತಿ ಪ್ರಜೆ Voter ID ಹೊಂದಿರುವುದು ಕಡ್ಡಾಯ.
ಇನ್ನು Election Commission of India ಈ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮವನ್ನು ರೂಪಿಸಿದೆ. ಯಾವುದೇ ವ್ಯಕ್ತಿ Voter ID ಮಾಡಿಸಿದರು ಭಾರತೀಯ ಚುನಾವಣಾ ಆಯೋಗದ ನಿಯಮದ ಪ್ರಕಾರವೇ ಮಾಡಿಸಬೇಕಾಗುತ್ತದೆ. ದೇಶದಲ್ಲಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದವರು Voter ID ಇಲ್ಲದೆ ಇದ್ದರೆ ಆ ವ್ಯಕ್ತಿ ಮತ ಹಾಕುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.
18 ವರ್ಷ ಮೇಲ್ಪಟ್ಟವರು Voter ID ಹೊಂದುವುದು ಕಡ್ಡಾಯ
ದೇಶದ ಪ್ರತಿ ರಾಜ್ಯದಲ್ಲಿ ಯಾವುದಾದರು ಚುನಾವಣೆ ನಡೆದೇ ನಡೆಯುತ್ತದೆ. ಯಾವುದೇ ಚುನಾವಣೆಯಲ್ಲಿ ಮತ ಹಾಕಬೇಕಿದ್ದರು ಹೊಂದಬೇಕಾದ ಮುಖ್ಯ ದಾಖಲೆ Voter ID . ಇನ್ನು ಈ Voter ID ದಾಖಲೆಯನ್ನು 18 ವರ್ಷ ಮೇಲ್ಪಟ್ಟವರು ಪಡೆಯಲು ಅರ್ಹರಾಗಿರುತ್ತಾರೆ. ವ್ಯಕ್ತಿಯೇ 18 ವರ್ಷ ಆರಂಭವಾದ ತಕ್ಷಣ Voter ID ಪಡೆಯಲು ಅರ್ಜಿ ಸಲ್ಲಿಸುವುದು ಅಗತ್ಯ.
ಇನ್ನು ಈ Voter ID ಗೆ ಅರ್ಜಿ ಸಲ್ಲಿಸುವ ಬಗ್ಗೆ ನೀವು ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ನೀವು ಸುಲಭವಾಗಿ ಮನೆಯಲ್ಲಿಯೇ ಕುಳಿತು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಕೆಲವು ಹಂತಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಕೆಳಗಿರುವ ವಿಧಾನದ ಮೂಲಕ ನೀವು ನಿಮ್ಮ ಮನೆಯಲ್ಲಿಯೇ ಆನ್ಲೈನ್ ನ ಮೂಲಕ ಸುಲಭವಾಗಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ನ ಮೂಲಕ Voter ID ಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
*ನೀವು ಚುನಾವಣಾ ಆಯೋಗದ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನ ಮೂಲಕ Voter ID ಗೆ ಅರ್ಜಿ ಸಲ್ಲಿಸಬಹುದು.
*ವೆಬ್ ಸೈಟ್ ನಲ್ಲಿ ‘ರಾಷ್ಟ್ರೀಯ ಮತದಾರರ ಸೇವೆಗಳು’ ಪೋರ್ಟಲ್ ಮೇಲೆ ಕ್ಲಿ ಮಾಡಿ.
*ನಂತರ Online Apply ಸೆಕ್ಷನ್ ನಲ್ಲಿ ಹೊಸ ಮತದಾರರ ನೋಂದಣಿ ಮೇಲೆ ಕ್ಲಿಕ್ ಮಾಡಿ.
*ಫಾರ್ಮ್ 6 ಅನ್ನು ಡೌನ್ಲೋಡ್ ಮಾಡಿ ಇದರಲ್ಲಿ ನಿಮ್ಮ ಎಲ್ಲ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಮತ್ತು ಸಬ್ಮಿಟ್ ಮಾಡಿ.
*ಇದಾದ ಬಳಿಕ ನಿಮ್ಮ ಮೈಲ್ ಗೆ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಈ ಲಿಂಕ್ ನ ಮೂಲಕ ನೀವು ಅಪ್ಲಿಕೇಶನ್ ಸ್ಟೇಟಸ್ ಅನ್ನು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು.
*ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ 10 ದಿನಗಳ ಬಳಿಕ ನಿಮ್ಮ ಮತದಾನದ ಗುರುತಿನ ಚೀಟಿ ನಿಮ್ಮ ಮನೆಗೆ ಬಂದು ತಲುಪುತ್ತದೆ.