CBG Car: ಪೆಟ್ರೋಲ್ ಬೇಡ, ಡೀಸೆಲ್ ಬೇಡ ಹಸುವಿನ ಗೊಬ್ಬರದಿಂದ ಚಲಿಸುತ್ತೆ ಈ ಕಾರ್, ಕಡಿಮೆ ಬೆಲೆ ಭರ್ಜರಿ ಮೈಲೇಜ್.
ಹಸುವಿನ ಗೊಬ್ಬರದ ಮೂಲಕ ಚಲಿಸುವ ಈ ಕಾರಿಗೆ ದೇಶದಲ್ಲಿ ಹೆಚ್ಚಾಗಿದೆ ಬೇಡಿಕೆ.
Wagon R CBG: ಸದ್ಯ ದೇಶದಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ವಿವಿಧ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಭಾರತಿಯಾ ಆಟೋ ವಲಯದಲ್ಲಿ ಇಂಧನ ಚಾಲಿತ ವಾಹನಗಳ ಬದಲಾಗಿ Electric ವಾಹನ ಹಾಗೂ CNG ಚಾಲಿತ ಅವಾಹನಗಳು ಮಾರುಕಟ್ಟೆಗೆ ಬಂದಿವೆ. ಇನ್ನು ದೇಶದಲ್ಲಿ ಸಂಪೂರ್ಣವಾಗಿ ವಾಯುಮಾಲಿನ್ಯವನ್ನು ನಿರ್ಮೂಲನೆ ಮಾಡಲು ಈಗಾಗಲೇ Ethanal ಚಾಲಿತ ಕಾರ್ ಗಳನ್ನೂ ತಯಾರಿಸಲು ಕಂಪನಿಗಳು ಸಜ್ಜಾಗಿದೆ.
ದೇಶದ ಜನಪ್ರಿಯ ಬ್ರಾಂಡ್ ಆಗಿರುವ TOYOTA ತನ್ನ Ethanal ಚಾಲಿತ ಕಾರ್ ಅನ್ನು ಸಿದ್ಧಪಡಿಸುತ್ತಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಜಪಾನಿನ ವಾಹನ ದೈತ್ಯ ಸುಜುಕಿ ಜಪಾನ್ ಆಟೋ ಶೋನಲ್ಲಿ ಪರ್ಯಾಯ ಇಂಧನ ಚಾಲಿತ ಹೊಸ Wagon R ಅನ್ನು ಪ್ರದರ್ಶಿಸಿದೆ. ಈ ಮೂಲಕ ಎಲ್ಲ ಇಂಧನ ಚಾಲಿತ ವಾಹನ ತಯಾರಕ ಕಂಪನಿಗಳಿಗೆ ಅಚ್ಚರಿ ಮೂಡಿಸಿದೆ.
ಪೆಟ್ರೋಲ್ ಬೇಡ, ಡೀಸೆಲ್ ಬೇಡ ಹಸುವಿನ ಗೊಬ್ಬರದಿಂದ ಚಲಿಸುತ್ತೆ ಈ ಕಾರ್
ಸದ್ಯ ಮಾರುಕಟ್ಟೆಯಲ್ಲಿ CBG ಇಂಧನದಿಂದ (ಜೈವಿಕ ಅನಿಲ) ಚಲಿಸುವ ಕಾರ ಬಿಡುಗಡೆಯಾಗಲಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. Wagon R CBG, ಎಲೆಕ್ಟ್ರಿಕ್ ಹೊರತುಪಡಿಸಿ ಪರ್ಯಾಯ ಶಕ್ತಿಯು ಪೆಟ್ರೋಲಿಯಂ ಅಥವಾ ಡೀಸೆಲ್ ಅನ್ನು ತೆಗೆದುಹಾಕುವ ಮೂಲಕ ಕಾರ್ಬನ್ ನ್ಯೂಟ್ರಾಲಿಟಿಯನ್ನು ಸಾಧಿಸುವ ಮೂಲಕ ವಾಹನಗಳಿಗೆ ಶಕ್ತಿ ನೀಡುತ್ತದೆ. ಸುಜುಕಿ ಮೋಟಾರ್ ಕಾರ್ಪೊರೇಶನ್ ನ CEO ತೋಶಿಹಿರೊ ಸುಜುಕಿ, ಜೈವಿಕ ಅನಿಲವನ್ನು ಪರ್ಯಾಯ ಇಂಧನವಾಗಿ ಉತ್ಪಾದಿಸಲು ಹಸುವಿನ ಸಗಣಿ ಉಪಯುಕ್ತತೆಯನ್ನು ವಿವರಿಸಿದ್ದಾರೆ.
10 ಹಸುಗಳ ಸಗಣಿಯಿಂದ ಕಾರ್ ಅನ್ನು ಸುಲಭವಾಗಿ ಓಡಿಸಬಹುದು
CBG ಅನ್ನು ಕೃಷಿ ವಸ್ತುಗಳು, ಹಸುವಿನ ಸಗಣಿ ಮತ್ತು ಕೊಳೆತ ಸಾವಯವ ತ್ಯಾಜ್ಯದಿಂದ ತಯಾರಿಸಲಾಗುತ್ತದೆ. ಕೊಳೆತ ತ್ಯಾಜ್ಯವನ್ನು ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಲು ಮತ್ತು ಇಂಧನದ ಮೀಥೇನ್ ಅಂಶವನ್ನು ಹೆಚ್ಚಿಸಲು ಪ್ರಕ್ರಿಯೆಯ ಮೂಲಕ ಸಂಸ್ಕರಿಸಲಾಗುತ್ತದೆ. ಹತ್ತು ಹಸುಗಳ ಸಗಣಿಯಿಂದ ಕಾರಿಗೆ ಒಂದು ದಿನಕ್ಕೆ ಶಕ್ತಿಯನ್ನು ತುಂಬುವ ಇಂಧನವನ್ನು ತಯಾರಿಸಬಹುದಾಗಿದೆ. ಸದ್ಯ ಸುಜುಕಿ ತನ್ನ ವಾಹನಗಳಿಗೆ ಪರ್ಯಾಯ ಇಂಧನವಾಗಿ CBG ಯನ್ನು ಬಳಸುವುದು ಬಹಳ ವಿಶೇಷವಾಗಿದೆ.