Water Bottle: ವಾಟರ್ ಬಾಟಲ್ ಬಳಸುವವರಿಗೆ ಮತ್ತು ಮಾರುವವರಿಗೆ ಅಕ್ಟೋಬರ್ 1 ರಿಂದ ಹೊಸ ನಿಯಮ, ಕೇಂದ್ರದ ಘೋಷಣೆ.
ಇಂತಹ ವಾಟರ್ ಬಾಟಲ್ ಗಳನ್ನ ಬ್ಯಾನ್ ಮಾಡಲು ಈಗ ಕೇಂದ್ರ ಸರ್ಕಾರ ತೀರ್ಮಾನವನ್ನ ಮಾಡಿದೆ.
Water Bottle Ban In India: ಇತ್ತೀಚಿಗೆ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಕೇಂದ್ರ ಸರ್ಕಾರದಿಂದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಹೊಸ ನಿಯಮಗಳು ಜಾರಿ ಆಗುತ್ತಿದೆ. ಜನರು ಸರ್ಕಾರದ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ.
ಇದೀಗ ಸರ್ಕಾರ ವಾಟರ್ ಬಾಟಲ್ ಗಳ ಬಳಕೆಯಲ್ಲಿ ಹೊಸ ನಿಯಮವನ್ನು ತಂದಿದೆ.
ಹೆಚ್ಚು ಪ್ಲಾಸ್ಟಿಕ್ ಬಳಕೆಯಿಂದಾಗಿ ತೊಂದರೆ ಆಗುವುದು ಸಹಜವಾಗಿದೆ. ಪ್ಲಾಸ್ಟಿಕ್ ಬಳಕೆಯಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ.
ನೀರಿನ ಬಾಟಲ್ ಗಳ ಬಳಕೆಯನ್ನು ನಿಷೇಧಿಸಿದ ಅಸ್ಸಾಂ ಸರ್ಕಾರ
ಇದೀಗ ಸರ್ಕಾರ 1 ಲೀಟರ್ ಗಿಂತ ಕಡಿಮೆ ಪ್ರಮಾಣ ಪ್ಯಾಕ್ ಮಾಡಿದ ನೀರಿನ ಬಾಟಲ್ ಗಳ ಬಳಕೆಯನ್ನು ಇದೆ ವರ್ಷದ ಅಕ್ಟೋಬರ್ 2 ರಿಂದ ನಿಷೇಧಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ತಾ ಶರ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ಲಾಸ್ಟಿಕ್ ತಾಜ್ಯವನ್ನು ಕಡಿಮೆ ಮಾಡುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧ
ಪ್ಲಾಸ್ಟಿಕ್ ಗಳ ಹೆಚ್ಚು ಬಳಕೆಯಿಂದಾಗಿ ಜನರ ಆರೋಗ್ಯ ಅಷ್ಟೇಯಲ್ಲ ವಾತಾವರಣದ ಪರಿಸ್ಥಿತಿ ಸಹ ಹದಗೆಡುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಜನರು ಕಡಿಮೆ ಮಾಡುವ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
2024 ರ ಅಕ್ಟೊಬರ್ ನಿಂದ 2 ಲೀಟರ್ ಗಿಂತ ಕಡಿಮೆ ಪ್ರಮಾಣದ ಪ್ಯಾಕ್ ಮಾಡಿದ ನೀರಿನ ಬಾಟಲ್ ಗಳ ಮಾರಾಟವನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕಾಯ್ದೆ 2021 ರ ಅನ್ವಯ ಈ ನಿಯಮ ಜಾರಿಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.