Water Bottle: ನೀವು 20 ರೂ ಕೊಟ್ಟು ಖರೀದಿಸುವ ನೀರಿನ ಬಾಟಲಿಯ ನಿಜವಾದ ಬೆಲೆ ಎಷ್ಟು, 99% ಜನರಿಗೆ ತಿಳಿದಿಲ್ಲ.
ಒಂದು ಲೀಟರ್ ವಾಟರ್ ಬಾಟಲ್ ನ ನಿಜವಾದ ಬೆಲೆ ಎಷ್ಟು ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.
Water Bottle Price: ಸಾಮಾನ್ಯವಾಗಿ ಜನರು ಮನೆಯಿಂದ ಹೊರಗಡೆ ಹೋದಾಗ ದೂರದ ಪ್ರಯಾಣದ ಸಂದರ್ಭದಲ್ಲಿ ಅಂಗಡಿಗಳಿಂದ ನೀರಿನ ಬಾಟಲಿಯನ್ನು (Water Bottle) ಖರೀದಿಸುತ್ತಾರೆ. ನೀರನ್ನು ಫಿಲ್ಟರ್ ಮಾಡಿ ಅತ್ಯಂತ ಶುದ್ಧವಾಗಿ ತಯಾರಿಸಲಾಗುವ ಈ ಪ್ಯಾಕೆಜ್ಡ್ ವಾಟರ್ ಬಾಟಲ್ ಸ್ವಲ್ಪ ದುಬಾರಿಯಾಗಿರುತ್ತದೆ.
ಇನ್ನು ಒಂದು ಲೀಟರ್ ವಾಟರ್ ಬಾಟಲ್ ಗೆ 20 ರೂ.ಪಾವತಿಸಬೇಕಾಗುತ್ತದೆ. ಆದರೆ ಈ ವಾಟರ್ ಬಾಟಲ್ ನ ನಿಜವಾದ ಬೆಲೆ ಎಷ್ಟು ಎನ್ನುವ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ.
ನೀವು 20 ರೂ ಕೊಟ್ಟು ಖರೀದಿಸುವ ನೀರಿನ ಬಾಟಲಿಯ ನಿಜವಾದ ಬೆಲೆ ಎಷ್ಟು
ಅರ್ಥಶಾಸ್ತ್ರಜ್ಞ ಡೆರೆಕ್ ಥಾಂಪ್ಸನ್ ಅವರು ಕುಡಿಯುವ ನೀರಿನ ವೆಚ್ಚದ ವ್ಯವಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಥಾಂಪ್ಸನ್ ನೀಡಿದ ಮಾಹಿತಿಯ ಪ್ರಕಾರ, ಕಂಪನಿಗಳು ಒಂದು ಲೀಟರ್ ಪ್ಲಾಸ್ಟಿಕ್ ಬಾಟಲಿಗೆ 80 ಪೈಸೆ ಪಾವತಿಸುತ್ತದೆ. ಒಂದು ಲೀಟರ್ ನೀರಿನ ಬೆಲೆ 1 ರೂ. 20 ಪೈಸೆ ಆಗುತ್ತದೆ.
ನಂತರ ನೀರನ್ನು ಶುದ್ದೀಕರಿಸಲು 3 ರೂ. 40 ಪೈಸೆ ವೆಚ್ಚ ತಗಲುತ್ತದೆ. ಹೆಚ್ಚುವರಿ ವೆಚ್ಚವಾಗಿ ಕಂಪನಿಯು 1 ರೂ. ಖರ್ಚನ್ನು ಮಾಡುತ್ತದೆ. ಈ ಎಲ್ಲಾ ವೆಚ್ಚವನ್ನು ಸೇರಿಸಿ ಕಂಪನಿಯು 6 ರೂ. 40 ಪೈಸೆ ವೆಚ್ಚದ ನೀರಿನ ಬಾಟಲಿಯನ್ನು ತಯಾರಿಸಲಾಗುತ್ತದೆ. ನಂತರ ಈ ಪ್ಯಾಕೆಜ್ಡ್ ನೀರಿನ ಬಾಟಲಿಯನ್ನು 20 ರೂ. ಗೆ ಮಾರಾಟ ಮಾಡುವ ಮೂಲಕ ಕಂಪನಿಯು 3 ಪಟ್ಟು ಹೆಚ್ಚುವರಿ ಲಾಭವನ್ನು ಪಡೆಯುತ್ತದೆ.
ಪ್ಯಾಕೇಜ್ಡ್ ವಾಟರ್ ಬಾಟಲ್ ನಿಯಮದಲ್ಲಿ ಬದಲಾವಣೆ
ಗುಣಮಟ್ಟವಿಲ್ಲದ ವಸ್ತುಗಳ ಆಮದನ್ನು ತಡೆಯಲು ಸರ್ಕಾರ ಗುಣಮಟ್ಟದ ಮಾನದಂಡವನ್ನು ಜಾರಿಗೆ ತಂದಿದೆ. ಉತ್ತಮ ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಉತ್ತೇಜನಕ್ಕಾಗಿ ಕುಡಿಯುವ ನೀರಿನ ಬಾಟಲಿಗಳು ಮತ್ತು ಜ್ವಾಲೆ ಉತ್ಪಾದಿಸುವ ಲೈಟರ್ ಗಳಿಗೆ ಅಗತ್ಯ ಗುಣಮಟ್ಟದ ಮಾನದಂಡವನ್ನು ನೀಡಲಾಗಿದೆ.
ಇನ್ನು BIS ಮಾರ್ಕ್ ಹೊಂದಿರದ ಎರಡು ವಸ್ತುಗಳ ಉತ್ಪಾದನೆ, ಮಾರಾಟ,ವ್ಯಾಪಾರ, ಆಮದು ಅಥವಾ ಸಂಗ್ರಹಣೆ ಮಾಡಲು ಸಾಧ್ಯವಿಲ್ಲ. BIS ಕಾಯ್ದೆ 2016 ರ ಪ್ರಕಾರ BIS ಪ್ರಮಾಣೀಕರಿಸದ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇದಿಸಲಾಗಿದೆ. BIS ಕಾಯ್ದೆಯ ನಿಯಮವನ್ನು ಉಲ್ಲಂಘಿಸಿದರೆ ಮೊದಲ ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಅಥವಾ 2 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗುತ್ತದೆ.