Ads By Google

Ramya Troll: ಕನ್ನಡಿಗರ ಬೇಸರಕ್ಕೆ ಕಾರಣದ ನಟಿ ರಮ್ಯಾ, ಸಾಮಾಜಿಕ ಜಾಲತಾಣದಲ್ಲಿ ಟ್ರೊಲ್ ಮಾಡಿದ ಜನರು.

ramya trolls
Ads By Google

Kannada Actress Ramya Troll: ಮೋಹಕತಾರೆ ರಮ್ಯಾ (Ramya) ಅವರ ವೀಕೆಂಡ್ ವಿಥ್ ರಮೇಶ್ (Weekend with Ramesh) ಶೋ ನ ಎಪಿಸೋಡ್ ಗಳು ಇದೀಗ ಬಾರಿ ವೈರಲ್ ಆಗುತ್ತಿದೆ.

ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ಮೋಹಕ ತಾರೆ ರಮ್ಯಾ ನಿನ್ನೆಯ ಸಂಚಿಕೆಯ ವೀಕೆಂಡ್ ವಿಥ್ ರಮೇಶ್ ಸೀಸನ್ 5 ನಲ್ಲಿ ಮೊದಲ ಸಾಧಕಿಯಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.ನಟಿ ರಮ್ಯಾ ತಮ್ಮ ಸಿನಿ ಪಯಣ ಹಾಗು ಅನೇಕ ವಿಷಯಗಳ ಬಗ್ಗೆ ವೀಕೆಂಡ್ ವಿಥ್ ರಮೇಶ್ ಸಂಚಿಕೆಯಲ್ಲಿ ಹಂಚಿಕೊಂಡಿದ್ದರು.

Image Credit: etvbharat

ಆದರೆ ರಮ್ಯಾ ಅವರು ಮಾತನಾಡುವಾಗ ಹೆಚ್ಚಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದ ಕಾರಣ ಕನ್ನಡಿಗರು ರಮ್ಯಾ ವಿರುದ್ಧ ಕಿಡಿ ಕಾರಿದ್ದರು. ಆದರೆ ಇದೀಗ ರಮ್ಯಾ ಪರ ಅಪ್ಪು ಅಭಿಮಾನಿಗಳು ನಿಂತಿದ್ದಾರೆ. ರಮ್ಯಾ ಬಗ್ಗೆ ಟ್ರೋಲ್ ಮಾಡಿದವರಿಗೆ ಅಪ್ಪು ಅಭಿಮಾನಿಗಳು ಟಾಂಗ್ ನೀಡಿದ್ದಾರೆ.

ಕನ್ನಡಿಗರ ಬೇಸರಕ್ಕೆ ಕಾರಣರಾದ ನಟಿ ರಮ್ಯಾ
ಮೋಹಕತಾರೆ ರಮ್ಯಾ ಶೋನಲ್ಲಿ ಮಾತನಾಡುವಾಗ ಹೆಚ್ಚಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದ್ದರು. ಈ ಕಾರಣದಿಂದಾಗಿ ಕನ್ನಡಿಗರು ರಮ್ಯಾ ವಿರುದ್ಧ ಕಿಡಿಕಾರುತ್ತಿದ್ದಾರೆ.

Image Credit: publictv

ರಮ್ಯಾಗೆ ಕನ್ನಡ ಬರಲ್ವಾ? ರಮ್ಯಾ ಮಾತನಾಡೋದನ್ನ ಅರ್ಥ ಮಾಡಲು ನಮಗೆ ಒಬ್ಬರು ಟ್ರಾನ್ಸ್ ಲೇಟರ್ ಬೇಕಾಗಬಹುದು ಎಂದು ಟಾಂಗ್ ನೀಡುತ್ತಿದ್ದಾರೆ. ಕನ್ನಡ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಬೇಕು ಎಂದು ಕಾರ್ಯಕ್ರಮಕ್ಕೆ ಬರುವಾಗ ಅತಿಥಿಗಳಿಗೆ ಸೂಚಿಸಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.

ರಮ್ಯಾ ಪರ ನಿಂತ ಅಪ್ಪು ಅಭಿಮಾನಿಗಳು
ಅಪ್ಪು ಡೈನಾಸ್ಟಿ ಟ್ವಿಟರ್ ಪೇಜ್ ನಲ್ಲಿ ಕನ್ನಡ ಚಿತ್ರರಂಗಕ್ಕೆ ರಮ್ಯಾ ಅವರ ಕೊಡುಗೆ ಏನು, ಸಾಧನೆ ಏನು ಸ್ಯಾಂಡಲ್ ವುಡ್ ಕ್ವೀನ್ ಆಗಿ ಬೆಳೆದಿದ್ದು ಹೇಗೆ ಅನ್ನೋದರ ಬಾಗ್ಗೆ ಯಾರು ಮಾತಾಡಿಲ್ಲ. ನಮ್ಮ ಅಜ್ಜಿಗೆ ಅರ್ಥ ಆಗಿಲ್ಲ, ನಮ್ಮ ಅಮ್ಮಗೆ ಅರ್ಥ ಆಗಿಲ್ಲ ಎಂದು ಡೈಲಾಗ್ ಹೊಡುಯುತ್ತೀರಾ. ಇಂಗ್ಲಿಷ್ ಸ್ವಲ್ಪ ಜಾಸ್ತಿ ಬಳಸಿದ್ದಾರೆ. ಅದು ಒಂದರಿಂದಲೇ ಎಲ್ಲವನ್ನು ಅಳಿಯೋಕೆ ಆಗಲ್ಲ ಎಂದು ಅಪ್ಪು ಅಭಿಮಾನಿಗಳು ರಮ್ಯಾ ಪರ ನಿಂತಿದ್ದಾರೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in