WhatsApp Update: ವಾಟ್ಸಾಪ್ ಬಳಸುವವರಿಗೆ ಬಿಗ್ ಅಪ್ಡೇಟ್ಮ್, 3 ಆಕರ್ಷಕ ಫೀಚರ್ ಲಾಂಚ್ ಮಾಡಿದ ವಾಟ್ಸಾಪ್.

3 ಆಕರ್ಷಕ ಫೀಚರ್ ಲಾಂಚ್ ಮಾಡಿದ ವಾಟ್ಸಾಪ್, 2024 ರ ಬಿಗ್ ಅಪ್ಡೇಟ್

WhatsApp 3 Best Feature: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಅನ್ನು ವಿಶ್ವದೆಲ್ಲೆಡೆ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಇನ್ನು ವಾಟ್ಸಾಪ್ ತನ್ನ ಬಳಕೆದಾರರಿಗೆ ಹೆಚ್ಚಿನ ಅನುಭವವನ್ನು ನೀಡಲು ಹೆಚ್ಚಿನ ಫೀಚರ್ ಅನ್ನು ನೀಡುತ್ತಿದೆ. ಬಳಕೆದಾರರು ಈಗಾಗಲೇ ಸಾಕಷ್ಟು ಫೀಚರ್ ಗಳನ್ನೂ ಬಳಸಿಕೊಳ್ಳುತ್ತಿದ್ದಾರೆ.

ಸದ್ಯ ವಾಟ್ಸಾಪ್ ತನ್ನ ಬಳಕೆದಾರರಿಗೆ ಮೂರು ವಿಶೇಷ ಫೀಚರ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಅಪ್ಡೇಟ್ ಗಳು ಪರಿಚಯವಾಗಿದ್ದು, ಇದೀಗ ಮೂರು ವಿಶೇಷ ಫೀಚರ್ ಗಳು ಸೇರಿಕೊಳ್ಳಲಿವೆ. ಮೆಟಾ ಪರಿಚಯಿಸಲಿರುವ ಮೂರು ಫೀಚರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

WhatsApp 3 Best Feature
Image Credit: Business Today

ವಾಟ್ಸಾಪ್ ಸ್ಟೇಟಸ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಬಹುದು
ಮೆಟಾ ಫೇಸ್‌ ಬುಕ್‌ ಗಾಗಿ ತನ್ನ ಅಪ್ಲಿಕೇಶನ್‌ ಗಳ ನಡುವೆ ಕ್ರಾಸ್-ಪ್ಲಾಟ್‌ ಫಾರ್ಮ್ ಪೋಸ್ಟಿಂಗ್ ಮತ್ತು ಹಂಚಿಕೆ ವೈಶಿಷ್ಟ್ಯಗಳನ್ನು ಪರಿಚಯಿಸಿತು. ಉದಾಹರಣೆಗೆ, ನೀವು ಒಂದೇ ರೀಲ್ ಅನ್ನು Instagram ಮತ್ತು Facebook ನಲ್ಲಿ ಏಕಕಾಲದಲ್ಲಿ ಪೋಸ್ಟ್ ಮಾಡಬಹುದು ಅಥವಾ ಒಂದೇ ಟ್ಯಾಪ್‌ ನಲ್ಲಿ ನಿಮ್ಮ Instagram ಖಾತೆಯಲ್ಲಿ ಥ್ರೆಡ್ ಪೋಸ್ಟ್ ಅನ್ನು ಹಂಚಿಕೊಳ್ಳಬಹುದು ಅಥವಾ Instagram ನಿಂದ Facebook ಗೆ ಸಂದೇಶವನ್ನು ಕಳುಹಿಸಬಹುದು. ಇನ್ನು ಕ್ರಾಸ್-ಪ್ಲಾಟ್‌ ಫಾರ್ಮ್ ಪೋಸ್ಟಿಂಗ್ ಮತ್ತು ಹಂಚಿಕೆ ವೈಶಿಷ್ಟ್ಯಗಳು ಶೀಘ್ರದಲ್ಲೇ ಬದಲಾಗಲಿವೆ ಮತ್ತು ನೀವು ವಾಟ್ಸಾಪ್ ಸ್ಟೇಟಸ್ ಅನ್ನು ನೇರವಾಗಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಬಹುದು.

ವಿಡಿಯೋ ಕಾಲ್ ನಲ್ಲಿ ಸಂಗೀತವನ್ನು ಹಂಚಿಕೊಳ್ಳಬಹುದು
ಇತೀಚೆಗಷ್ಟೇ ವಾಟ್ಸಾಪ್ ಸ್ಕ್ರೀನ್ ಶೇರಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೊಂದು ವಿಶೇಷ ಫೀಚರ್ ಅನ್ನು ಪರಿಚಯಿಸಿದೆ. ವಾಟ್ಸಾಪ್ ಶೀಘ್ರದಲ್ಲೇ ಸಂಗೀತ ಹಂಚಿಕೆ ಆಯ್ಕೆಯನ್ನು ಸಹ ತರಬಹುದು. ಇದು ನಿಮ್ಮ ಪರದೆಯನ್ನು ಹಂಚಿಕೊಳ್ಳಲು ಮಾತ್ರವಲ್ಲದೆ ಆಡಿಯೊವನ್ನೂ ಸಹ ಅನುಮತಿಸುತ್ತದೆ. ಬಳಕೆದಾರರ ಅನುಭವವನ್ನು ಸುಧಾರಿಸಲು ಕಂಪನಿಯು ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ.

WhatsApp Username Feature
Image Credit: Jagranjosh

ವಾಟ್ಸಾಪ್ ಯೂಸರ್ ನೇಮ್ ಫೀಚರ್
ಇನ್ನು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಸೇರಿದಂತೆ ಇನ್ನಿತರ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಗಳು ಯೂಸರ್ ನೇಮ್ ಅನ್ನು ಹೊಂದಿದೆ. ಆದರೆ ವಾಟ್ಸಾಪ್ ನಲ್ಲಿ ಇಲ್ಲಿಯವರೆಗೆ ಈ ರೀತಿಯ ಫೀಚರ್ ಲಭ್ಯವಿರಲಿಲ್ಲ. ಯೂಸರ್ ನೇಮ್ ಹಂಚಿಕೊಳ್ಳುವ ಮೂಲಕ ಖಾತೆಯನ್ನು ಸುಲಭವಾಗಿ ಹುಡುಕಬಹುದಿತ್ತು. ಸದ್ಯ ಈ Username ಫೀಚರ್ ವಾಟ್ಸಾಪ್ ನಲ್ಲಿ ಪರಿಚಯಿಸಲಿದೆ. WhatsApp Username Feature ಪರಿಚಯವಾದರೆ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯ ಇರುವುದಿಲ್ಲ.

Join Nadunudi News WhatsApp Group

Join Nadunudi News WhatsApp Group