Accidental Feature: ವಾಟ್ಸಾಪ್ ಬಳಸುವವರಿಗೆ ಹೊಸ ಯೋಜನೆ, ತಪ್ಪಾಗಿ ಮೆಸೇಜ್ ಮಾಡಿದರೆ ಭಯಪಡುವ ಅಗತ್ಯ ಇಲ್ಲ.
ವಾಟ್ಸಾಪ್ ನಲ್ಲಿ ತಪ್ಪಾಗಿ ಸಂದೇಶ ಕಳುಹಿಸಿದರೆ ಈಗ ಆಕ್ಸಿಡೆಂಟಲ್ ಫೀಚರ್ ಮೂಲಕ ಸರಿಪಡಿಸಿಕೊಳ್ಳಬಹುದು.
WhatsApp Accidental Feature Update: ದೇಶದೆಲ್ಲೆಡೆ ವಾಟ್ಸಾಪ್ (WhatsApp) ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇದೀಗ ಹೊಸ ಹೊಸ ಫೀಚರ್ ಗಳ ಮೂಲಕ ಬಳಕೆದಾರರನ್ನು ಸೆಳೆಯುತ್ತಲೇ ಇದೆ.
ವಾಟ್ಸಾಪ್ ತನ್ನ ಬಳಕೆದಾರಿಗಾಗಿ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸಿದೆ. ಇದೀಗ ವಾಟ್ಸಾಪ್ ಹೊಸ ಫೀಚರ್ ಬಿಡುಗಡೆ ಮಾಡಿದೆ. ವಾಟ್ಸಾಪ್ ನ ಈ ಹೊಸ ಫೀಚರ್ ಬಗ್ಗೆ ಮಾಹಿತಿ ತಿಳಿಯೋಣ.
ವಾಟ್ಸಾಪ್ ಬಳಕೆದಾರರಿಗೆ ಸಿಹಿ ಸುದ್ದಿ
ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ ಗಳನ್ನೂ ಪರಿಚಯಿಸಿದೆ. ಇನ್ನು ವಾಟ್ಸಪ್ ತನ್ನ ಚಾಟಿಂಗ್ ಸಿಸ್ಟಮ್ ಅಲ್ಲಿ ಕೂಡ ಬದಲಾವಣೆಯನ್ನು ತಂದಿದೆ. ವಾಟ್ಸಾಪ್ ಸ್ಟೇಟಸ್ ನಲ್ಲಿ ಕೂಡ ಹೊಸ ಹೊಸ ಫೀಚರ್ ಗಳು ಬಂದಿವೆ.
ಇದೀಗ ವಾಟ್ಸಾಪ್ ಅಕೌಂಟ್ ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಗಳಿಗೆ ಹೊಸ ಫೀಚರ್ ಅನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ವಾಟ್ಸಾಪ್ ಡಿಲೀಟೆಡ್ ಮೆಸೇಜ್ ನಲ್ಲಿ ಬರಲಿರುವ ಹೊಸ ಫೀಚರ್ ಬಗ್ಗೆ ತಿಳಿಯೋಣ.
ವಾಟ್ಸಾಪ್ ನಲ್ಲಿ ಆಕ್ಸಿಡೆಂಟಲ್ ಡಿಲೀಟ್ ಫೀಚರ್
ವಾಟ್ಸಾಪ್ ಬಳಕೆದಾರರು ಕೆಲವೊಮ್ಮೆ ತಪ್ಪಾಗಿ ಮೆಸೇಜ್ ಗಳನ್ನೂ ಬೇರೆಯವರಿಗೆ ಕಳುಹಿಸುವುದು ಸಾಮಾನ್ಯವಾದ ವಿಷಯ. ತಪ್ಪಾಗಿ ಮೆಸೇಜ್ ಕಳುಹಿಸಿದ್ದೇವೆ ಎಂದು ತಿಳಿದ ತಕ್ಷಣ ವಾಟ್ಸಾಪ್ ನಲ್ಲಿರುವ ಡಿಲೀಟ್ ಫಾರ್ ಎವ್ರಿವನ್ ಆಯ್ಕೆಯನ್ನು ಆರಿಸಬೇಕು. ಡಿಲೀಟ್ ಫಾರ್ ಎವ್ರಿವನ್ ಆಯ್ಕೆಯ ಬದಲಾಗಿ ಡಿಲೀಟ್ ಫಾರ್ ಮೀ ಆಯ್ಕೆಯನ್ನು ಬಳಸಿದರೆ ನೀವು ತಪ್ಪಾಗಿ ಮೆಸೇಜ್ ಮಾಡಿದವರ ವಾಟ್ಸಾಪ್ ನಲ್ಲಿ ಆ ಮೆಸೇಜ್ ಹಾಗೆ ಇರುತ್ತದೆ.
ಈ ಕಾರಣದಿಂದಾಗಿ ಇದೀಗ ವಾಟ್ಸಾಪ್ ನಲ್ಲಿ ಆಕ್ಸಿಡೆಂಟಲ್ ಫೀಚರ್ ಅನ್ನು ಪರಿಚಯಿಸಲಾಗಿದೆ. ಈ ಆಕ್ಸಿಡೆಂಟಲ್ ಫೀಚರ್ ನಿಂದ ಒಂದು ವೇಳೆ ನೀವು ಡಿಲೀಟ್ ಫಾರ್ ಮೀ ಆಯ್ಕೆ ಮಾಡಿದರು ಕೂಡ ಐದು ಸೇಸೆಂಡ್ ಗಳ ಕಾಲ ಅನ್ ಡು (Undo) ಆಯ್ಕೆಯನ್ನು ನೀಡುತ್ತದೆ. ಅಂಡು ಆಯ್ಕೆಯನ್ನು ಬಳಸಿಕೊಳ್ಳುದರಿಂದ ಮತ್ತೆ ಡಿಲೀಟ್ ಫಾರ್ ಎವ್ರಿವನ್ ಆಯ್ಕೆಯನ್ನು ಕೊಡಬಹುದು.