ಇದು ತಂತ್ರಜ್ಞಾನದ ಯುಗ, ಹಿಂದಿನ ಕಾಲದಲ್ಲಿ ಜನರು ಪತ್ರಗಳ ಮೂಲಕ ವ್ಯವಹಾರವನ್ನ ಮಾಡುತ್ತಿದ್ದರು, ಆದರೆ ಈಗ ಜನರು ಹೆಚ್ಚಿನ ವ್ಯವಹಾರವನ್ನ ತಮ್ಮ ಮೊಬೈಲ್ ಮೂಲಕ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್ ಬಳಕೆ ಮಾಡೇ ಮಾಡುತ್ತಾರೆ ಎಂದು ಹೇಳಬಹುದು. ವಾಟ್ಸಾಪ್ ಒಂದು ಮುಖ್ಯವಾದ ಮೆಸೇಜ್ ಅಪ್ಲಿಕೇಶನ್ ಆಗಿದ್ದು ಬಹುತೇಕ ಎಲ್ಲಾ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ಇನ್ನು ತಂತ್ರಜ್ಞಾನ ಮುಂದುವರೆದಂತೆ ಅದಕ್ಕೆ ನಾವು ಹೊಂದಿಕೊಳಬೇಕು ಎಂದು ಹೇಳಬಹುದು. ಪ್ರಸ್ತುತ ದಿನಗಳಲ್ಲಿ ಹಲವು ವಿಧವಾದ ಮೊಬೈಲ್ ಫೋನ್ ಗಳು ಲಭ್ಯವಿದ್ದು ಜನರು ತಮಗೆ ಇಷ್ಟವಾದ ಮೊಬೈಲ್ ಫೋನ್ ಗಳನ್ನ ಬಳಕೆ ಮಾಡುತ್ತಾರೆ.
ಇನ್ನು ಈಗ ವಾಟ್ಸಾಪ್ ಹಲವು ಮೊಬೈಲ್ ಗಳಲ್ಲಿ ಬಂದ್ ಆಗಲಿದ್ದು ಈಗ ಜನರು ಆದಷ್ಟು ಬೇಗ ತಮ್ಮ ವಾಟ್ಸಾಪ್ ಖಾತೆಯನ್ನ ಕಾಪಾಡಿಕೊಳ್ಳಬೇಕು ಎಂದು ಕಂಪನಿ ಹೇಳಿದೆ. ಮುಂದಿನ ತಿಂಗಳಿಂದ ಈ ಎಲ್ಲಾ ಮೊಬೈಲ್ ಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ತನ್ನ ಕೆಲಸ ಮಾಡುವುದನ್ನ ನಿಲ್ಲಿಸಲಿದೆ. ಹಾಗಾದರೆ ಯಾವ ಯಾವ ಮೊಬೈಲ್ ಗಳಲ್ಲಿ ಇನ್ನುಮುಂದೆ ವಾಟ್ಸಾಪ್ ಬಳಕೆ ಆಗುವುದಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ವಾಟ್ಸಾಪ್ ಬಳಕೆ ಮಾಡುವ ಎಲ್ಲರಿಗೂ ತಲುಪಿಸಿ.
ಹೌದು ಫೇಸ್ ಬುಕ್ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಇನ್ಮುಂದೆ ನವೆಂಬರ್ 1 ರಿಂದ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹಾಗಾಗಿ ನಿಮ್ಮ ಸ್ಮಾರ್ಟ್ ಫೋನ್ʼನಲ್ಲಿ ವಾಟ್ಸಾಪ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನ ಪರಿಶೀಲಿಸುವುದು ಮುಖ್ಯ. ವಾಟ್ಸಾಪ್ ವಿಶ್ವದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾಗಿದ್ದು ಇದು ಜನರಿಗೆ ಸಂವಹನ ನಡೆಸಲು ಸಾಕಷ್ಟು ಪ್ರಮುಖ ವಿಷಯವಾಗಿದೆ. ಹೆಚ್ಚಿನ ಬಳಕೆದಾರರು ಶೀಘ್ರದಲ್ಲೇ ವಾಟ್ಸಾಪ್ ಖಾತೆಗಳಿಗೆ ತಮ್ಮ ಪ್ರವೇಶವನ್ನ ನವೆಂಬರ್ 1ರ ಮುಂದಿನ 10 ದಿನಗಳಲ್ಲಿ ಕಳೆದುಕೊಳ್ಳಲಿದ್ದಾರೆ, ಇದರರ್ಥ ಈ ಸ್ಮಾರ್ಟ್ ಪೋನ್ ಬಳಕೆದಾರರು ಖಾತೆಗಳನ್ನು ಕಳೆದುಕೊಳ್ಳದಂತೆ ಪರ್ಯಾಯವನ್ನ ಕಂಡುಕೊಳ್ಳಬೇಕು. ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ವಾಟ್ಸಪ್ ಸುಮಾರು 40 ಸ್ಮಾರ್ಟ್ ಫೋನ್ʼಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ.
ಆಂಡ್ರಾಯ್ಡ್ 4.0.4 ಮತ್ತು ಹಳೆಯ ವೇರಿಯಂಟ್ʼಗಳನ್ನು ಚಾಲನೆ ಮಾಡುವ ಸ್ಮಾರ್ಟ್ ಫೋನ್ʼಗಳು ವಾಟ್ಸಪ್ ಬೆಂಬಲವನ್ನು ಮುಂದಿನ 10 ದಿನಗಳಲ್ಲಿ ಪಡೆಯುವುದನ್ನು ನಿಲ್ಲಿಸುತ್ತವೆ. ಆಪಲ್ ವಿಷಯಕ್ಕೆ ಬರುವುದಾದರೆ ಐಒಎಸ್ 9 ಚಾಲನೆಯಲ್ಲಿರುವ ಐಫೋನ್ ಗಳನ್ನು ಬೂಟ್ ಔಟ್ ಮಾಡಲಾಗುತ್ತದೆ. ಇನ್ನು ಯಾವಯಾವ ಮೊಬೈಲ್ ಗಳಲ್ಲಿ ಇನ್ನುಮುಂದೆ ವಾಟ್ಸಾಪ್ ಕೆಲಸ ಮಾಡುವುದಿಲ್ಲ ಅಂದರೆ, Samsung Galaxy S3 Mini, Trend II, Trend Lite, Core, Ace 2, LG Optimus F7, F5, L3 II Dual, F7 II, F5 II ,Sony Xperia, Huawei Ascend Mate and Ascend D2, Apple iPhone SE, 6S, and 6S Plus. ಸ್ನೇಹಿತರೆ ನೀವು ಈ ಕೂಡ ಮೊಬೈಲ್ ಗಳನ್ನ ಬಳಕೆ ಮಾಡುತಿದ್ದರೆ ನೀವು ಆದಷ್ಟು ಬೇಗ ಮೊಬೈಲ್ ಬದಲಾಯಿಸಿಕೊಳ್ಳುವುದು ಉತ್ತಮ.