WhatsApp Block: ನಿಮ್ಮನು ಯಾರಾದರೂ ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದ್ದಾರಾ…? ಈ ರೀತಿಯಾಗಿ ನೀವೇ ಅನ್ ಬ್ಲಾಕ್ ಮಾಡಿಕೊಳ್ಳಿ.
ಈಗ ಸುಲಭವಾಗಿ ನಾವೇ ವಾಟ್ಸಪ್ ಅನ್ ಬ್ಲಾಕ್ ಮಾಡಬಹುದು.
WhatsApp Block Recover: ಈಗ ಜನರು ಹೆಚ್ಚಾಗಿ ಮೊಬೈಲ್ ನಲ್ಲಿ ಬಳಸುವ ಅಪ್ಲಿಕೇಶನ್ ಯಾವುದು ಅಂದರೆ ಅದೂ ವಾಟ್ಸಪ್ (WhatsApp) ಎಂದು ಹೇಳಬಹುದು.ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ವಾಟ್ಸಪ್ ಬಳಸುತ್ತಾರೆ. ಸಂದೇಶ ಕಳುಹಿಸಲು, ಚಾಟ್ ಮಾಡಲು, ಇತರೆ ಡಾಕ್ಯುಮೆಂಟ್ ಕಳುಹಿಸಲು ಮತ್ತು ಕೆಲವು ಕೆಲಸಗಳಿಗೆ ಜನರು ಹೆಚ್ಚು ಹೆಚ್ಚು ವಾಟ್ಸಪ್ ಬಳಕೆ ಮಾಡುತ್ತಾರೆ ಎಂದು ಹೇಳಬಹುದು.
ಇದರ ನಡುವೆ ವಾಟ್ಸಪ್ ಗ್ರಾಹಕರಿಗೆ ಅನೇಕ ಹೊಸ ಫೀಚರ್ ಗಳನ್ನ ಪರಿಚಯಿಸಿದ್ದು ಸದ್ಯ ಇನ್ನೊಂದು ಹೊಸ ಅಪ್ಡೇಟ್ ಜಾರಿಗೆ ತಂದಿದೆ. ಹೌದು ಇನ್ನುಮುಂದೆ ಯಾರಾದರೂ ನಿಮ್ಮನ್ನು ವಾಟ್ಸಪ್ ನಿಂದ ಬ್ಲಾಕ್ ಮಾಡಿದರೆ ಸುಲಭವಾಗಿ ಬ್ಲಾಕ್ ತಗೇಯಬಹುದಾಗಿದೆ.
ಈಗ ವಾಟ್ಸಪ್ ನಲ್ಲಿ ಬ್ಲಾಕ್ ಸುಲಭವಾಗಿ ತಗೆಯಬಹುದು
ಹೌದು ವಾಟ್ಸಪ್ ಬಳಸುವಾಗ ಕೆಲವರು ಯಾವುದಾದರೂ ಒಂದು ಅನಿವಾರ್ಯ ಕಾರಣಗಳ ಕಾರಣ ನಮ್ಮನ್ನು ಬ್ಲಾಕ್ ಮಾಡುತ್ತಾರೆ.ನಾವು ಎಷ್ಟೇ ವಿನಂತಿ ಮಾಡಿಕೊಂಡರೂ ಕೂಡ ಅವರು ನಮ್ಮನ್ನು ಬ್ಲಾಕ್ ಲಿಸ್ಟ್ ನಿಂದ ತಗೆಯದೇ ಇದ್ದರೆ ನೀವು ಈ ವಿಧಾನವನ್ನ ಅನುಸರಿಸಿಕೊಂಡು ಸುಲಭವಾಗಿ ಬ್ಲಾಕ್ ತಗೆಯಬಹುದಾಗಿದೆ.
ಈ ವಿಧಾನದ ಮೂಲಕ ಬ್ಲಾಕ್ ತಗೆಯಬಹುದು
ನೀವು ಮೊದಲು ಬ್ಲಾಕ್ ಮಾಡಿದವರ ಮನವೊಲಿಸಲು ನೀವು ಮೊದಲು ನಿಮ್ಮ ವಾಟ್ಸಪ್ ಖಾತೆಯನ್ನ ಅಳಿಸಬೇಕು ಮತ್ತು ನಂತರ ಇನ್ಸ್ಟಾಲ್ ಮಾಡಿ ಸೈನ್ಅಪ್ ಮಾಡಬೇಕು. ಈ ವಿಧಾನವನ್ನ ಅನುಸರಿಸಿದರೆ ನೀವು ಸ್ವಯಂಚಾಲಿತವಾಗಿ ಬ್ಲಾಕ್ ನಿಂದ ಹೊರಗೆ ಬರಬಹುದು. ಇನ್ನು ಈ ವಿಧಾನವನ್ನ ಎಲ್ಲಾ ಸಮಯದಲ್ಲಿ ಅನುಸರಿಸಬಾರದು, ನೀವು ಈ ರೀತಿ ಮಾಡುವುದರಿಂದ ನಿಮ್ಮ ವಾಟ್ಸಪ್ ನ ಎಲ್ಲಾ ಡೇಟಾ ಡಿಲೀಟ್ ಆಗುತ್ತದೆ ಮತ್ತು ಅಗತ್ಯವಿದ್ದರೆ ಮಾತ್ರ ಈ ವಿಧಾನವನ್ನ ಅನುಸರಿಸಿವುದು ಉತ್ತಮ.
ಇಲ್ಲಿದೆ ನೋಡಿ ಖಾತೆ ಅಳಿಸುವ ವಾಟ್ಸಪ್ ವಿಧಾನ
ನೀವು ವಾಟ್ಸಪ್ ಖಾತೆಯನ್ನ ಅಳಿಸಬೇಕು ಅಂದರೆ ನೀವು ಮೊದಲು ವಾಟ್ಸಪ್ ನಲ್ಲಿ ಸ್ಟಿಂಗ್ ಓಪನ್ ಮಾಡಬೇಕು. ಇನ್ನು ಸೆಟ್ಟಿಂಗ್ ನಲ್ಲಿ ನಮಗೆ ಡಿಲೀಟ್ ಮೈ ಅಕೌಂಟ್ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು. ಇನ್ನು ನಿಮ್ಮ ಖಾತೆ ಡಿಲೀಟ್ ಆದ ನಂತರ ಮತ್ತೆ ಖಾತೆಯನ್ನ ತೆರೆಯಬೇಕಾಗುತ್ತದೆ. ಈ ರೀತಿಯ ಡಿಲೀಟ್ ಮಾಡಿ ಮತ್ತೆ ಖಾತೆಯನ್ನ ತೆರೆದರೆ ನಿಮ್ಮ ವಾಟ್ಸಾಪ್ ಎಲ್ಲಾ ಡೇಟಾ ಡಿಲೀಟ್ ಆಗುತ್ತದೆ. ಈ ರೀತಿಯ ಖಾತೆ ಡಿಲೀಟ್ ಮಾಡುವ ಮೊದಲು ನಿಮ್ಮ ಡೇಟಾ ಬ್ಯಾಕ್ ಅಪ್ ತಗೆದುಕೊಳ್ಳುವುದು ಉತ್ತಮ.