Caption Edit: ವಾಟ್ಸಪ್ ಬಳಸುವವರಿಗೆ ಬಿಗ್ ಅಪ್ಡೇಟ್ ಬಿಡುಗಡೆ, ಫೋಟೋ ಮತ್ತು ವಿಡಿಯೋ ಈ ರೀತಿಯಾಗಿ ಎಡಿಟ್ ಮಾಡಿ.
ವಾಟ್ಸಪ್ ಬಳಸುವ ಜನರಿಗೆ ಇನ್ನೊಂದು ಅಪ್ಡೇಟ್ ಬಿಡುಗಡೆ ಮಾಡಿದ ಮೆಟಾ.
WhatsApp Photo Caption Edit Feature: ಪ್ರಸ್ತುತ ಡಿಜಿಟಲ್ ಜಗತ್ತಿನಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದೆ. ಸ್ಮಾರ್ಟ್ ಫೋನ್ ಬಳಕೆದಾರರು ಎಲ್ಲರೂ ಕೂಡ ಬಳಸುವ ಸಾಮಾನ್ಯ ಅಪ್ಲಿಕೇಶನ್ ಅಂದರೆ ಅದು ವಾಟ್ಸಾಪ್. ಪ್ರತಿಯೊಬ್ಬರು ಬಳಸುತ್ತಿರುವ ಮೊಬೈಲ್ ನಲ್ಲಿ ಕೂಡ ವಾಟ್ಸಾಪ್ (WhatsApp) ಇದ್ದೆ ಇರುತ್ತದೆ. ಇನ್ನು ಕೆಲವರ ದಿನ ಆರಂಭಗೊಳ್ಳುವುದೇ ವಾಟ್ಸಾಪ್ ನ ಮೂಲಕ ಎಂದರೆ ತಪ್ಪಾಗಲಾರದು. ಈ ಮಟ್ಟಿಗೆ ವಾಟ್ಸಾಪ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ.
ದಿನದಲ್ಲಿ ಒಮ್ಮೆಯಾದರೂ ವಾಟ್ಸಾಪ್ ಓಪನ್ ಮಾಡದೆ ಇದ್ದರೆ ಆ ದಿನ ಪೂರ್ಣಗೊಂಡಿರುವುದೇ ಇಲ್ಲ ಎನ್ನುವ ಭಾವನೆ ಬರುವ ರೀತಿ ವಾಟ್ಸಾಪ್ ಬಳಕೆದಾರರನ್ನು ಆವರಿಸಿಕೊಂಡಿದೆ. ಇನ್ನು ವಾಟ್ಸಾಪ್ ಕೂಡ ತನ್ನ ಬಳಕೆದಾರರ ಗಮನ ಸೆಳೆಯುವ ಕಾರಣ ವಾರಕ್ಕೆ ಒಂದಾದರು ಹೊಚ್ಚ ಹೊಸ ಅಪ್ಡೇಟ್ ಪರಿಚಯಿಸುತ್ತದೆ.
ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್
ಈಗಾಗಲೇ ವಾಟ್ಸಾಪ್ ನಲ್ಲಿ ಸಾಕಷ್ಟು ಫೀಚರ್ ಗಳು ಪರಿಚಯವಾಗಿದ್ದು, ಬಳಕೆದಾರರು ಹೊಸ ಹೊಸ ಫೀಚರ್ ನ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ವಾಟ್ಸಾಪ್ ನಲ್ಲಿ ಮತ್ತೊಂದು ನೂತನ್ ಫೀಚರ್ ಅನಾವರಣಗೊಂಡಿದೆ. ಈಗಾಗಲೇ ಚಾಟಿಂಗ್ ಸಿಸ್ಟಮ್ ನಲ್ಲಿ ಅನೇಕ ಅಪ್ಡೇಟ್ ಗಳು ಪರಿಚಯವಾಗಿದೆ. ಇನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಕೂಡ ಅನೇಕ ರೀತಿಯ ಬದಲಾವಣೆಗಳು ಬಂದಿವೆ.
ವಿಶೇಷವೆಂದರೆ ನಿಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ನೇರವಾಗಿ ಫೇಸ್ ಬುಕ್ ಖಾತೆಗೂ ವರ್ಗಾಯಿಸುವ ಅವಕಾಶವನ್ನು ವಾಟ್ಸಾಪ್ ಕಲ್ಪಿಸಿಕೊಟ್ಟಿದೆ. ಇವೆಲ್ಲದರ ನಡುವೆ ಇದೀಗ ವಾಟ್ಸಾಪ್ ಹೊಸ ಫೀಚರ್ ನ ಮೂಲಕ ಎಲ್ಲರ ಗಮನ ಸೆಳೆಯಲಿದೆ. ಈ ಹಿಂದೆ ವಾಟ್ಸಾಪ್ ಸ್ಕ್ರೀನ್ ಶೇರ್ ಫೀಚರ್ ಹಾಗೂ ಹೆಚ್ ಡಿ ಫೋಟೋ ಶೇರ್ ಫೀಚರ್ ಅನ್ನು ಪರಿಚಯಿಸಿ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಇದೀಗ ಫೋಟೋ ಕ್ಯಾಪ್ಷನ್ ನಲ್ಲಿ ಹೊಸ ಅಪ್ಡೇಟ್ ಮಾಡಲು ವಾಟ್ಸಾಪ್ ನಿರ್ಧರಿಸಿದೆ.
ಫೋಟೋ ಕ್ಯಾಪ್ಷನ್ ಎಡಿಟ್ ಫೀಚರ್
ವಾಟ್ಸಾಪ್ ಬಳಕೆದಾರರಿಗೆ ಫೋಟೋಗಳು, ವಿಡಿಯೋಗಳು, GIF ಗಳು ದಾಖಲೆಗಳ ಶೀರ್ಷಿಕೆಯನ್ನು ಎಡಿಟ್ ಮಾಡಲು ಹೊಸ ಫೀಚರ್ ಅನ್ನು ಪರಿಚಯಿಸಿದೆ. ಈ ಹಿಂದೆ ಚಾಟ್ ಅನ್ನು ಎಡಿಟ್ ಮಾಡಿ ರೀಸೆಂಡ್ ಮಾಡಲು ಕೂಡ ಹೊಸ ಫೀಚರ್ ಬಿಡುಗಡೆ ಮಾಡಿತ್ತು. ಆದರೆ ಈ ಫೀಚರ್ ನಲ್ಲಿ ಫೋಟೋಗಳು, ವಿಡಿಯೋಗಳು, GIF ಸೇರಿದಂತೆ ದಾಖಲೆಗಳನ್ನು ಎಡಿಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಪ್ರಸ್ತುತ ಅನಾವರಣಗೊಳ್ಳಲಿರುವ ಈ ಅಪ್ಡೇಟ್ ಶೀರ್ಷಿಕೆಯೊಂದಿಗೆ ಕಳುಹಿಸಿದ ಮೀಡಿಯಾ ಮೆಸೇಜ್ ಅನ್ನು ಎಡಿಟ್ ಮಾಡಲು ಅನುವು ಮಾಡಿಕೊಡುತ್ತದೆ. ಇನ್ನು ಈ ಹೊಸ ಫೋಟೋ ಕ್ಯಾಪ್ಷನ್ ಎಡಿಟ್ ಫೀಚರ್ ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಸದ್ಯದಲ್ಲೇ ಎಲ್ಲ ಬಳಕೆದಾರರಿಗೂ ಸಿಗಲಿದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ. ವಾಟ್ಸಾಪ್ ಬಳಕೆದಾರರು ಇನ್ನು ಕೆಲವೇ ದಿನಗಳಲ್ಲಿ ಈ ಫೋಟೋ ಕ್ಯಾಪ್ಷನ್ ಎಡಿಟ್ ಫೀಚರ್ ಅನ್ನು ಪಡೆಯಬಹುದಾಗಿದೆ.