WhatsApp Channel: ಇನ್ನುಮುಂದೆ ಎಲ್ಲಾ ಚಾನೆಲ್ ಗಳು ನಿಮ್ಮ ವಾಟ್ಸಾಪ್ ನಲ್ಲಿ, ವಾಟ್ಸಾಪ್ ಬಳಸುವವರಿಗೆ ಬಿಗ್ ಅಪ್ಡೇಟ್.

ವಾಟ್ಸಾಪ್ ಬಳಸುವವರಿಗೆ ಇನ್ನೊಂದು ಹೊಸ ಸೇವೆ ಬಿಡುಗಡೆ.

WhatsApp Channel New Update: ದೇಶದಲ್ಲಿ ಅತಿ ಹೆಚ್ಚು ಬಳಸುವ ಅಪ್ಲಿಕೇಶನ್ ಎಂದರೆ ಅದು WhatsApp ಎನ್ನಬಹುದು. ಏಕೆಂದರೆ ದಿನದ ಆರಂಭದಲ್ಲಿಯೇ ಎಲ್ಲರು WhatsApp ನೋಡುವ ಮೂಲಕ ತಮ್ಮ ದಿನವನ್ನು ಆರಂಭಿಸುತ್ತಾರೆ.

WhatsApp ನಲ್ಲಿ ಗುಡ್ ಮಾರ್ನಿಂಗ್ ಸಂದೇಶದಿಂದ ಪ್ರತಿನಿತ್ಯ ಕೋಟ್ಯಾಂತರ ಮಂದಿ Chatting, Vedio Message, Vedio Call ,Voice Call ಸೇರಿದಂತೆ ಇನ್ನಿತರ ಫೀಚರ್ ಅನ್ನು ಬಳಸಿಕೊಳ್ಳುತ್ತಾರೆ. ಪ್ರತಿನಿತ್ಯ ವಾಟ್ಸಾಪ್ ತನ್ನ ಬಳಕೆದಾರಿಗಾಗಿ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸುವ ಮೂಲಕ ಬಳಕೆದಾರರನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದೆ.

Now you can create channel with group on WhatsApp
Image Credit: digitaltrends

WhatsApp ನಲ್ಲಿ ಹೊಸ Update
ವಾಟ್ಸಾಪ್ ಈಗಾಗಲೇ ತನ್ನ ಬಳಕೆದಾರರಿಗಾಗಿ ಸಾಕಷ್ಟು ಫೀಚರ್ ಗಳನ್ನೂ ಪರಿಚಯಿಸಿದೆ. Meta ಮಾಲೀಕತ್ವದ ವಾಟ್ಸಪ್ ಚಾಟಿಂಗ್ ಸಿಸ್ಟಮ್ ಅಲ್ಲಿ ಕೂಡ ಸಂಪೂರ್ಣ ಬದಲಾವಣೆಯನ್ನು ತಂದಿದೆ. WhatsApp Screen Sharing, Video sharing, Multi device ಸೇರಿದಂತೆ ಇನ್ನಿತರ ಸಾಕಷ್ಟು ಅಪ್ಡೇಟ್ ಗಳು ವಾಟ್ಸಾಪ್ ಬಳಕೆದಾರರಿಗೆ ದೊರೆಯುತ್ತಿದೆ. ಇತ್ತೀಚೆಗಷ್ಟೇ WhatsApp Multi Account Feature ಅನ್ನು ಬಿಡುಗಡೆ ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ನೂತನ ಫೀಚರ್ ಬಿಡುಗಡೆಗೆ WhatsApp ಸಿದ್ಧತೆ ನಡೆಸುತ್ತಿದೆ.

WhatsApp ಬಳಕೆದಾರರಿಗಾಗಿ ಬಂದಿದೆ WhatsApp Channel Feature
ವಾಟ್ಸಾಪ್ ನ ಹೊಸ WhatsApp Channel Feature ಒಂದು ಮಾರ್ಗದ ಪ್ರಸಾರ ಸಾಧನವಾಗಿದೆ. ಈ ನೂತನ ಫೀಚರ್ ‘ನವೀಕರಣಗಳು’ ಎನ್ನುವ ಹೊಸ ಟ್ಯಾಬ್ ನಲ್ಲಿ ಲಭ್ಯವಿರುತ್ತದೆ. ಇನ್ನು ಕೆಲವೇ ದಿನಗಳ್ಲಲಿ ಜಾಗತಿಕವಾಗಿ WhatsApp Channel Feature ಲಭ್ಯವಾಗಲಿದೆ. ನಿಮ್ಮ ದೇಶವನ್ನು ಆಧರಿಸಿ ಸ್ವಯಂಚಾಲಿತವಾಗಿ ಫಿಲ್ಟರ್ ಮಾಡಲಾದ ಚಾನಲ್ ಗಳನ್ನೂ ಅನುಸರಿಸಲು ನೀವು ಹುಡುಕಬಹುದು ಅಥವಾ ಹೆಸರು ಅಥವಾ ವರ್ಗದ ಮೂಲಕ ಚಾನೆಲ್ ಗಳನ್ನೂ ಹುಡುಕಬಹುದು.

A new channel creation feature has been implemented in WhatsApp
Image Credit: perfil

ಈ ರೀತಿಯಾಗಿ WhatsApp Channel Feature ಬಳಸಿಕೊಳ್ಳಿ
ನಿಮ್ಮ ಅನುಸರಣೆಯ ಸಂಖ್ಯೆಯ ಆಧಾರದ ಮೇಲೆ ಹೆಚ್ಚು ಸಕ್ರಿಯ ಮತ್ತು ಜನಪ್ರಿಯವಾಗಿರುವ ಚಾನೆಲ್ ಗಳನ್ನೂ ವೀಕ್ಷಿಸಬಹುದಾಗಿದೆ. ನೀವು ವಾಟ್ಸಾಪ್ ಚಾನೆಲ್ ನಲ್ಲಿ ಅನುಸರಿಸಾಲು ಜನಪ್ರಿಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ಆಯ್ಕೆ ವಾಟ್ಸಾಪ್ ನಲ್ಲಿ ಲಭ್ಯವಿರುತ್ತದೆ.

Join Nadunudi News WhatsApp Group

WhasApp ನ ಇತ್ತೀಚಿನ ಫೀಚರ್ ಅನ್ನು ನವೀಕರಿಸುವ ಮೂಲಕ ಬಳಕೆದಾರರು WhatsApp Channel Feature ಅನ್ನು ಪಡೆಯಬಹುದಾಗಿದೆ. ಯಾವುದೇ ಚಾನೆಲ್ ಅನ್ನು ಅನುಸರಿಸಲು ನೀವು + ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಇನ್ನು ನೀವು ಚಾನೆಲ್ ಅನ್ನು ಅನುಸರಿಸುವುದರಿಂದ ನಿಮ್ಮ ಮೊಬೈಲ್ ಸಂಖ್ಯೆ ಎಲ್ಲಿಯೂ ಬಹಿರಂಗವಾಗುವುದಿಲ್ಲ.

Join Nadunudi News WhatsApp Group