Whatsapp Data Hack: ವಾಟ್ಸಾಪ್ ಬಳಕೆದಾದರಿಗೆ ಎಚ್ಚರಿಕೆಯ ಸಂದೇಶ, ನಿಮ್ಮ ದಾಟಗಳು ಭಾರೀ ಮೊತ್ತಕ್ಕೆ ಸೇಲ್.
Whatsapp Data Hack:ಸಾಮಾನ್ಯವಾಗಿ ಎಲ್ಲರೂ ವಾಟ್ಸಾಪ್ (whatsapp) ನೋಡದರ ಮೂಲಕ ತಮ್ಮ ದಿನವನ್ನು ಆರಂಭಿಸುತ್ತೀರಿ. ಹಿಗಿರುವಾಗ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನಲ್ಲಿ ಹೊಸ ರೀತಿಯ ಅಪ್ಡೇಟ್ (Update) ಗಳು ಬಂದಿರುದರಿಂದ ವಾಟ್ಸಾಪ್ ಅನ್ನು ಹೆಚ್ಚಾಗಿ ಬಳಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಬಾರಿ ದೊಡ್ಡ ಮಟ್ಟದಲ್ಲಿ ಡೇಟಾ ಸೋರಿಕೆ (Data Leak) ಪ್ರಕರಣ ಬೆಳಕಿಗೆ ಬಂದಿದೆ. ಎಲ್ಲ ಡೇಟಾ ಗಳು ಲೀಕ್ ಆಗುತ್ತಿವೆ. ಈಗಾಗಲೇ ವಿಶ್ವದಾದ್ಯಂತ 50 ಕೋಟಿ ವಾಟ್ಸಾಪ್ ಬಳಕೆದಾರರ ಡೇಟಾ ಲೀಕ್ ಆಗಿದೆ. ಸೋರಿಕೆಯಾಗಿದ್ದ ವಾಟ್ಸಾಪ್ ಬಳಕೆದಾರರ ಡೇಟಾ ವನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಸೈಬರ್ ನ್ಯೂಸ್ ಮಾಹಿತಿ ನೀಡಿದೆ.
50 ಕೋಟಿ ವಾಟ್ಸಾಪ್ ಬಳಕೆದಾರರ ದೂರವಾಣಿ ಸಂಖ್ಯೆಯನ್ನು ಜನಪ್ರಿಯ ಹ್ಯಾಕಿಂಗ್ (Hacking) ವೇದಿಕೆ ಒಂದು ಮಾರಾಟಕ್ಕಿಟ್ಟಿದೆ. 84 ದೇಶಗಳ ವಾಟ್ಸಾಪ್ ಬಳಕೆದಾರರ ಖಾಸಗಿ ಮಾಹಿತಿ ಯನ್ನು ಒಳಗೊಂಡಿದೆ.
ಭಾರತವು ಸೇರಿದಂತೆ ಈಜಿಫ್ಟ್ (Ijipt), ಬ್ರಿಟನ್ (Briten), ರಷ್ಯಾ (Rashya), ಇಟಲಿ (Itali), ಫ್ರಾನ್ಸ್ (Prance) ಸೇರಿದಂತೆ ಲಕ್ಷಾಂತರ ವಾಟ್ಸಾಪ್ ಬಳಕೆದಾರರ ದೂರವಾಣಿ ಸಂಖ್ಯೆ ಇದರಲ್ಲಿದೆ ಎನ್ನಲಾಗಿದೆ.
ಹೆಚ್ಚು ಮಾಹಿತಿ ಸೋರಿಕೆಯಾಗಿರುವ ದೇಶ
ಬೇರೆ 84 ದೇಶಗಳಿಗೆ ಹೋಲಿಸಿದರೆ ಈಜಿಪ್ಟ್ (Ijipt)ನಲ್ಲಿ ಅತಿ ಹೆಚ್ಚು ಬಳಕೆದಾರರ ಮಾಹಿತಿ ಸೋರಿಕೆಯಾಗಿರುದು ಕಂಡಿಬಂದಿದೆ. 4.5 ಕೋಟಿ ಜನರ ಮಾಹಿತಿ ಇದರಲ್ಲಿ ಇದೆ.
ಇಟಲಿಯಲ್ಲಿ 3.5 ಕೋಟಿ ಹಾಗು ಅಮೇರಿಕಾದಲ್ಲಿ 3.2 ಕೋಟಿ ಜನರ ಮಾಹಿತಿ ಸೋರಿಕೆಯಾಗಿದೆ. ಭಾರತದಲ್ಲಿ 60 ಲಕ್ಷ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಲಾಗಿದೆ.
ವಾಟ್ಸಾಪ್ ಬಳಕೆದಾರ ಮಾಹಿತಿಯನ್ನು ಮಾರಾಟಕ್ಕಿಟ್ಟಿರುವ ವ್ಯಕ್ತಿ ವಿವಿಧ ದೇಶಗಳ ಬಳಕೆದಾರ ಡೇಟಾ ಗಳ ಬೆಲೆಯನ್ನು ನಿಗಧಿಪಡಿಸಿದ್ದಾನೆ. ಅಮೇರಿಕಾದ ಬಳಕೆದಾರರ ಡಾಟಗಾಗಿ 5 .61 ಲಕ್ಷ ರೂ. ಬ್ರಿಟನ್ ಬಳಕೆದಾರರ ಡಾಟಗಾಗಿ 1 .61 ಲಕ್ಷ ರೂ. ಹಾಗೂ ಜರ್ಮನಿಯ ಬಳಕೆದಾರರ ಡಾಟಗಾಗಿ 2 .04 ಲಕ್ಷ ರೂ. ನಿಗದಿಪಡಿಸಿದ್ದಾನೆ. ಹ್ಯಾಕರ್ ಈ ಡಾಟಾವನ್ನು ಹೇಗೆ ಪಡೆದಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.
ಇದರ ಮೊದಲು ಕೂಡ ಡೇಟಾ ಸೋರಿಕೆಯಿಂದಾಗಿ ಮೆಟಾ ಮಾಲೀಕತ್ವವದ ಪ್ಲಾಟಫಾರ್ಮ್ ಗಳಿಗೆ ಹೊಡೆತ ಬಿದ್ದಿದೆ. ಕಳೆದ ವರ್ಷ, ಭಾರತದ 60 ಲಕ್ಷ ಧಾಖಲೆಗಳು ಸೇರಿದಂತೆ 50 ಕೋಟಿ ಫೇಸ್ಬುಕ್ ಬಳಕೆದಾರ ಡೇಟಾ ಸೋರಿಕೆಯಾಗಿದೆ ಎಂದು ಆರೋಪಿಸಲಾಗಿತ್ತು. ಸೋರಿಕೆಯಾದ ಡೇಟಾಗಳಲ್ಲಿ ಫೋನ್ ನಂಬರ್ (Phone Number) ಹಾಗೂ ಇತರ ವಿವರಗಳನ್ನು ಒಳಗೊಂಡಿದೆ ಎನ್ನಲಾಗಿತ್ತು.
Whatsapp And Users ???? After 500M User Data In Risk ???? ???? ???? #WhatsApp #whatsapphack #risk pic.twitter.com/il8kv8EjEA
— Manish (@jai_shree_ram_5) November 28, 2022