Deleted Message: ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಈಗ ಸುಲಭವಾಗಿ ಓದಬಹುದು, ಬಂತು ಹೊಸ ಅಪ್ಡೇಟ್.
ವಾಟ್ಸಾಪ್ ನಲ್ಲಿ ಇನ್ನುಮುಂದೆ ಡಿಲೀಟ್ ಆದ ಮೆಸೇಜ್ ಅನ್ನು ಸುಲಭವಾಗಿ ಓದಬಹುದು
WhatsApp Deleted Message Recovery Process: ಸದ್ಯ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ಬಳಸುವ ಸಾಮಾನ್ಯ ಅಪ್ಲಿಕೇಶನ್ ಅಂದರೆ ಅದು WhatsApp. ಈ ವಾಟ್ಸಾಪ್ ಬಗ್ಗೆ ಯಾರಿಗೆ ತಾನೇ ತಿಳಿದಿರುವುದಿಲ್ಲ. ಸದ್ಯದ ಡಿಜಿಟಲ್ ದುನಿಯಾದಲ್ಲಿ ವಾಟ್ಸಾಪ್ ಬಳಸದವರಿಲ್ಲ ಎಂದರೆ ತಪ್ಪಗಲಾರದು.
ಎಲ್ಲರು ಕೂಡ ವಾಟ್ಸಾಪ್ ಅನ್ನು ಬಳಸುತ್ತಾರೆ. ಚಾಟಿಂಗ್(Chatting), ಕಾಲ್, ವಿಡಿಯೋ ಶೇರ್, ಆಡಿಯೋ ಶೇರ್ ಹೀಗೆ ಎಲ್ಲವನ್ನು ಕೂಡ ವಾಟ್ಸಾಪ್ ನ ಮೂಲಕ ಮಾಡುತ್ತಾ ತಮ್ಮ ಪ್ರೀತಿ ಪಾತ್ರರಾದವರ ಜೊತೆ ನಿತ್ಯ ಹತ್ತಿರದಲ್ಲಿರುತ್ತಾರೆ.
ವಾಟ್ಸಾಪ್ ನಲ್ಲಿ ಬಹುನಿರೀಕ್ಷಿತ ಫೀಚರ್ ಅನಾವರಣ
ದೂರದಲ್ಲಿರುವವರನ್ನು ಕೂಡ ವಾಟ್ಸಾಪ್ ಹತ್ತಿರವಾಗಿಸಿ ಬಿಡುತ್ತದೆ. ಇನ್ನು ಇಡೀ ವಿಶ್ವದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಎನ್ನುವ ಹೆಗ್ಗಳಿಕೆಯನ್ನು WhatsApp ಪಡೆದುಕೊಂಡಿದೆ. ಇನ್ನು ಮೆಟಾ ಮಾಲೀಕತ್ವದ ವಾಟ್ಸಾಪ್ ನಲ್ಲಿ ಈಗಾಗಲೇ ಹತ್ತು ಹಲವು ವಿಭಿನ್ನ ವಾಟ್ಸಾಪ್ ಫೀಚರ್ ಗಳು ಲಭ್ಯವಾಗಿದೆ.
ಈಗಾಗಲೇ ಸಾಕಷ್ಟು ಬಳಕೆದಾರರು ವಾಟ್ಸಾಪ್ ನ ಎಲ್ಲ ಫೀಚರ್ ಅನ್ನು ಬಳಸಿಕೊಳ್ಳುತ್ತಿದ್ದರೆ. ಇದೀಗ ವಾಟ್ಸಾಪ್ ನಲ್ಲಿ ನೀವು ಬಯಸುತ್ತಿರುವ ಒಂದು ಫೀಚರ್ ಲಭ್ಯವಾಗಿದೆ. ಅದು ಯಾವುದು ಎಂದು ಯೋಚಿಸುತ್ತಿದ್ದೀರಾ..? ಈ ಫೀಚರ್ ನ ಬಗ್ಗೆ ಇಲ್ಲಿದೆ ವಿವರ.
ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಈಗ ಸುಲಭವಾಗಿ ಓದಬಹುದು
ಇನ್ನು WhatsApp Chatting ಮಾಡುವ ಸಮಯದಲ್ಲಿ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ವೇಳೆ ಆಫ್ಲೈನ್ ನಲ್ಲಿ ಇದ್ದ ಸಮಯದಲ್ಲಿ ಯಾರಾದರೂ ಕಳುಹಿಸಿದ ಸಂದೇಶವನ್ನು Delete ಮಾಡಿದರೆ ಅದನ್ನು ನಮಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಆದರೆ ಇದೀಗ WhatsApp Deleted Message ಅನ್ನು ತಿಳಿಯಲು ಒಂದು ಹೊಸ ಫೀಚರ್ ಪರಿಚಯವಾಗಿದೆ. ನೀವು ವಾಟ್ಸಾಪ್ ನಲ್ಲಿ ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳುವ ಮೂಲಕ Delete ಆಗಿರುವ ಸಂದೇಶವನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
Delete ಆಗಿರುವ ಸಂದೇಶವನ್ನು ತಿಳಿಯಲು ಏನು ಮಾಡಬೇಕು..?
*ಡಿಲೀಟ್ ಆಗಿರುವ ಸಂದೇಶವನ್ನು ನೀವು ಸುಲಭವಾಗಿ Notification History ಮೂಲಕ ತಿಳಿದುಕೊಳಬಹುದು.
*ನೀವು WhatsApp Setting ನಲ್ಲಿ Notification History ಆಯ್ಕೆಯನ್ನು On ಮಾಡುವ ಮೂಲಕ ವೆಲ್ತ್ ಆಗಿರುವ ಸಂದೇಶವನ್ನು ತಿಳಿದುಕೊಳ್ಳಬಹುದು.
*Notification History ಆಯ್ಕೆಯನ್ನು On ಮಾಡಿದಾಗ ಕಳೆದ 24 ಗಂಟೆಗಳ ಹಿಂದಿನ ಸಂದೇಶದ ನೋಟಿಫಿಕೇಶನ್ ಅನ್ನು ನೀವು ಕಾಣುತ್ತೀರಿ.
*ನೋಟಿಫಿಕೇಶನ್ ಅನ್ನು ಚೆಕ್ ಮಾಡಿಕೊಳ್ಳುವ ಮೂಲಕ ಯಾರಾದರೂ ಡಿಲೀಟ್ ಮಾಡಿದ ಮೆಸೇಜ್ ಅನ್ನು ತಿಳಿದುಕೊಳಬಹುದು.
*ಆದರೆ ಇದರಿಂದ ನೀವು ಡಿಲೀಟ್ ಆಗಿರುವ ಫೋಟೋ, ವಿಡಿಯೋ, ಆಡಿಯೋವನ್ನು ಪಡೆಯಲು ಸಾಧ್ಯವಾಗುವುದಿಲ್ಲ.