Ads By Google

WhatsApp DP: ವಾಟ್ಸಾಪ್ ನಲ್ಲಿ ಬೇರೆಯವರುಗೆ DP ನೋಡುವವರಿಗೆ ಹೊಸ ರೂಲ್ಸ್, ಇನ್ಮುಂದೆ ಈ ಸೇವೆ ಲಭ್ಯವಿಲ್ಲ

WhatsApp DP Screenshot Not Allowed

Image Credit: Original Source

Ads By Google

WhatsApp DP Screenshot Not Allowed: ದೇಶದ ಜನಪ್ರಿಯ Chatting application ಆಗಿರುವ WhatsApp ಹೊಸ ಹೊಸ ಫೀಚರ್ ಗಳನ್ನೂ ಲಾಂಚ್ ಮಾಡುವ ಮೂಲಕ ಬಳಕೆದಾರರ ಗಮನ ಸಳೆಯುತ್ತಲೇ ಇರುತ್ತದೆ. WhatsApp ಬಳಕೆದಾರರು ಹೊಸ ಹೊಸ ಫೀಚರ್ ಗಳನ್ನೂ ಪಡೆಯುವ ಮೂಲಕ ಹೊಸ ರೀತಿಯ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ. ಆಗಾಗ WhatsApp ತನ್ನ ಬಳಕೆದಾರರಿಗೆ ಅತ್ಯಾಕರ್ಷಕ ಫೀಚರ್ ಅನ್ನು ಬಿಡುಗಡೆ ಮಾಡುತ್ತ ಇರುತ್ತದೆ.

ಇನ್ನು ಕಳೆದ ವರ್ಷದಲ್ಲಿ ಬಳಸುತ್ತಿರುವ ವಾಟ್ಸಪ್ ಗು ಈ ವರ್ಷದಲ್ಲಿ ಬಳಸುತ್ತಿರುವ ವಾಟ್ಸಾಪ್ ಗು ಬಹಳ ವ್ಯತ್ಯಾಸ ಇದೆ ಎನ್ನಬಹುದು. ಕಾರಣ ಸಾಕಷ್ಟು ನೂತನ ಫೀಚರ್ ಸೇರಿಕೊಂಡಿರುವುದರಿಂದ ವಾಟ್ಸಾಪ್ ಹೊಸ ರೀತಿಯಲ್ಲಿ ಬಳಕೆದಾರರಿಗೆ ಲಭ್ಯವಾಗತ್ತಿದೆ. ಸದ್ಯ ವಾಟ್ಸಾಪ್ ನಲ್ಲಿ ಬಹುನಿರೀಕ್ಷಿತ ಫೀಚರ್ ಒಂದು ಪರಿಚಯವಾಗಿದೆ. ಈ ನೂತನ ಫೀಚರ್ ವಾಟ್ಸಪ್ ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

Image Credit: Lifestyleasia

ವಾಟ್ಸಾಪ್ ನಲ್ಲಿ ಹೊಸ ಫೀಚರ್ ಬಿಡುಗಡೆ
ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಆಪ್ ಗಳನ್ನೂ ಬಳಸುವ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾವುದೇ ಅಪ್ಲಿಕೇಶನ್ ಬಳಸುವ ಮುನ್ನ ಅದರ ಸುರಕ್ಷೆತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಇನ್ನು ಅಪ್ಲಿಕೇಶನ್ ಗಳು ಹೆಚ್ಚು ಸುರಕ್ಷಿತವಾಗಿದೆ ಮಾತ್ರ ಬಳಕೆದಾರರು ಅದನ್ನು ಬಳಸಲು ಹಿಂಜರಿಯುವುದಿಲ್ಲ ಎನ್ನಬಹುದು. ಇದೀಗ ವಾಟ್ಸಾಪ್ ನಲ್ಲಿ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಇದೀಗ ಹೊಸ ಅಪ್ಡೇಟ್ ಪರಿಚಯವಾಗಿದೆರೆ. ಇನ್ನುಮುಂದೆ ವಾಟ್ಸಾಪ್ ನಲ್ಲಿ ಈ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಇನ್ನುಮುಂದೆ ಬೇರೆಯವರ ವಾಟ್ಸಾಪ್ DP ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ
ವಾಟ್ಸಾಪ್ ಬಳಸುವ ಪ್ರತಿಯೊಬ್ಬರೂ ಕೊಡ Profile Picture ಅನ್ನು Upload ಮಾಡುತ್ತಾರೆ. ಇನ್ನು ಕೆಲವರು ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು ಸ್ಕ್ರೀನ್ ಶಾಟ್ ತೆಗೆದುಕೊಳ್ಳುವ ಅಭ್ಯಾಸವನ್ನು ಇಟ್ಟುಕೊಳ್ಳುತ್ತಾರೆ. ಇನ್ನುಮುಂದೆ ವಾಟ್ಸಾಪ್ ನಲ್ಲಿ ಇಂತಹ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. WhatsApp DP Screenshot ಆಯ್ಕೆಯನ್ನು ಇನ್ನುಮುಂದೆ ನಿರ್ಬಂದಿಸಲಿದೆ.

Image Credit: Ladbible

ಹೌದು, ನೀವು ಹಾಕಿರುವ DP Photo ಇನ್ನುಮುಂವುದೇ ಮೂರನೇ ವ್ಯಕ್ತಿಯೇ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಾಗುವುದಿಲ್ಲ. ವಾಟ್ಸಾಪ್ ನಲ್ಲಿ Once ನಲ್ಲಿ ಕಳುಹಿಸಿದ ವಿಡಿಯೋ ಮತ್ತು ಫೋಟೋಗಳನ್ನು ಸ್ಕ್ರೀನ್ ಶಾಟ್ ತೆಗೆಯಲು ಹೇಗೆ ಅನುಮತಿ ಇಲ್ಲವೋ ಅದೇ ರೀತಿ ಇನ್ನುಮುಂದೆ ಪ್ರೊಫೈಲ್ ಫೋಟೋಗಳ ಸ್ಕ್ರೀನ್ ಶಾಟ್ ಅನ್ನು ತೆಗೆಯಲು ಕೂಡ ಸಾಧ್ಯವಾಗುವುದಿಲ್ಲ. ಬಳಕೆದಾರರ ಸುರಕ್ಷತೆಗಾಗಿ ವಾಟ್ಸಾಪ್ ಈ ಫೀಚರ್ ಅನ್ನು ಪರಿಚಯಿಸಲು ನಿರ್ಧರಿಸಿದೆ. ಈ ನೂತನ ಫೀಚರ್ ವಾಟ್ಸಾಪ್ ಬಿಟ್ಯಾ ಪರೀಕ್ಷಕರಿಗೆ ಲಭ್ಯವಾಗಲಿದ್ದು, ನಂತರ ದಿನಗಳಲ್ಲಿ ಎಲ್ಲರಿಗು ಕೂಡ ಅನ್ವಯವಾಗಲಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in