WhatsApp Group Expire Feature: ಇದೀಗ ಬಳಕೆದಾರರು ಹೆಚ್ಚು ಬಳಸುವ ವಾಟ್ಸಾಪ್ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಗಳನ್ನೂ ಪರಿಚಯಿಸುತ್ತಲೇ ಇದೆ. ತನ್ನ ಬಳಕೆದಾರರಿಗೆ ವಾಟ್ಸಾಪ್ ಹೊಸ ಹೊಸ ಮಾಹಿತಿಗಳನ್ನು ತಳಿಸುತ್ತಿದೆ.
ಇನ್ನು ಮುಂದೆ ಬರಲಿದೆ ವಾಟ್ಸಾಪ್ ಗ್ರೂಪ್ ಗಳಿಗೆ ಎಕ್ಸ್ ಪೈರಿ ಡೇಟ್
ಈ ವರ್ಷ ವಾಟ್ಸಾಪ್ ನಲ್ಲಿ ಹೊಸ ಹೊಸ ಫೀಚರ್ಸ್ ಗಳು ಈಗಾಗಲೇ ಬಿಡುಗಡೆಯಾಗಿದೆ. ವಾಟ್ಸಾಪ್ ನಲ್ಲಿ ಈ ವರ್ಷ ಹೊಸ ವೈಶಿಷ್ಟ್ಯತೆಗಳನ್ನು ಸೇರಿಸಲಾಗುತ್ತದೆ. ಕಂಪನಿಯು ಶೀಘ್ರದಲ್ಲಿಯೇ ಹೊಸ ವೈಶಿಷ್ಟ್ಯತೆಗಳನ್ನು ಹೊರತರಲಿದೆ.
ಕೆಲವು ವೈಶಿಷ್ಟ್ಯತೆಗಳು ಮೊದಲು IOS ಬೀಟಾ ಆವೃತ್ತಿಯಲ್ಲಿ ಬಂದರೆ ಇನ್ನು ಕೆಲವು android ಆವೃತ್ತಿಯಲ್ಲಿ ಮೊದಲು ಪರಿಚಯಿಸಲ್ಪಡುತ್ತದೆ. ವಾಟ್ಸಾಪ್ ಐಓಎಸ್ ಬೀಟಾಗಾಗಿ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯ ವಾಟ್ಸಾಪ್ ಗ್ರೂಪ್ ಗಳಿಗೆ ಎಕ್ಸ್ ಪೈರಿ ಡೇಟ್ ಹೊಂದಿಸಲು ಅನುವು ಮಾಡಿಕೊಡುತ್ತದೆ.
ವಾಟ್ಸಾಪ್ ಬಳಕೆದಾರರಿಗೆ ಹೊಸ ಸುದ್ದಿ
ಈ ವೈಶಿಷ್ಟ್ಯದ ಪ್ರಕಾರ ಬಳಕೆದಾರರು ಒಂದು ದಿನ, ಒಂದು ವಾರ ಅಥವಾ ಕಸ್ಟಮ್ ದಿನಾಂಕದಂತಹ ವಿವಿಧ ಎಕ್ಸ್ ಪೈರಿ ಡೇಟ್ ಆಯ್ಕೆಗಳನ್ನು ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು ತಮ್ಮ ಗ್ರೂಪ್ ನ ಎಕ್ಸ್ ಪೈರಿ ಡೇಟ್ ಅನ್ನು ಬದಲಾಯಿಸುವುದು ಕೂಡಾ ಸಾಧ್ಯವಾಗುತ್ತದೆ.
ಮುಂದಿನ ದಿನದಲ್ಲಿ ವಾಟ್ಸಾಪ್ ನಲ್ಲಿ ಕಾಲಾನಂತರದಲ್ಲಿ ಗುಂಪುಗಳನ್ನು ನಿರ್ವಹಿಸಲು ಬಳಕೆದಾರರಿಗೆ ಈ ವೈಶಿಷ್ಟ್ಯ ಸಹಾಯವಾಗಲಿದೆ.
ಸ್ಪೇಸ್ ಉಳಿಯಲು ಒಂದು ಉತ್ತಮ ಸ್ಟೋರೇಜ್ ಟೂಲ್ ನಂತೆಯೂ ಕೆಲಸ ಮಾಡಲಿದೆ. ವಾಟ್ಸಾಪ್ ಗ್ರೂಪ್ ಗಳಿಗೆ ಎಕ್ಸ್ ಪೈರಿ ಡೇಟ್ ಅನ್ನು ಆಯ್ಕೆ ಮಾಡುವ ಸಾಮರ್ಥ್ಯವು ಪ್ರಸ್ತುತ ಅಭಿವೃದ್ದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.