Admin Approval: ವಾಟ್ಸಾಪ್ ಅಡ್ಮಿನ್ ಗಳಿಗೆ ಗುಡ್ ನ್ಯೂಸ್, ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸಾಪ್.
Whatsapp Group Admin New Feature: ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಇತ್ತೀಚಿಗೆ ಹೊಸ ಹೊಸ ಫೀಚರ್ಸ್ ಗಳನ್ನೂ ಪರಿಚಯಿಸುತ್ತಲೇ ಇದೆ. ಇದೀಗ ಮತ್ತೊಂದು ಹೊಸ ಫೀಚರ್ಸ್ ಅನ್ನು ವಾಟ್ಸಾಪ್ ಬಳಕೆದಾರರಿಗೆ ಪರಿಚಯ ಆಗಲಿದೆ.
ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಪಡೆದುಕೊಂಡಿದೆ. ಇತ್ತೀಚಿಗಂತೂ ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ ಗಳನ್ನೂ ಪರಿಚಯ ಮಾಡಿಕೊಟ್ಟಿದೆ.
ವಾಟ್ಸಾಪ್ ಬಳಕೆದಾರರಿಗೆ ಹೊಸ ಸುದ್ದಿ
ವಾಟ್ಸಾಪ್ ಇದೀಗ ತನ್ನ ಬಳಕೆದಾರರಿಗೆ ಹೊಸ ಫೀಚರ್ ಒಂದನ್ನು ಹೊರ ತರಲು ಪ್ಲ್ಯಾನ್ ಮಾಡಿದೆ. ಈ ಫೀಚರ್ ವಾಟ್ಸಾಪ್ ಗ್ರೂಪ್ ಮತ್ತು ಅಡ್ಮಿನ್ ಗಳಿಗಾಗಿ ಪರಿಚಯಿಸುತ್ತಿರುವ ಫೀಚರ್ ಆಗಿದೆ.
ವಾಟ್ಸಾಪ್ ಗ್ರೂಪ್ ಗೆ ಇದುವರೆಗೂ ಯಾರು ಬೇಕಾದರೂ ಸಹ ಜಾಯಿನ್ ಆಗಬಹುದಿತ್ತು. ಆದರೆ ಇನ್ನು ಮುಂದೆ ವಾಟ್ಸಾಪ್ ತನ್ನ ಹೊಸ ನಿಯಮಗಳನ್ನು ಹೊರ ತಂದಿದೆ. ಇದು ಅಡ್ಮಿನ್ಗಳಿಗೂ ಅನ್ವಯಿಸಲಿದ್ದು ಇನ್ನು ಮುಂದೆ ಯಾವುದೇ ವಾಟ್ಸಾಪ್ ಗ್ರೂಪ್ ಗೆ ಸೇರಬೇಕಾದರು ಅಡ್ಮಿನ್ಗಳ ಅನುಮತಿಬೇಕು.
ಅಪೂರ್ವ್ ನ್ಯೂ ಪಾರ್ಟಿಸಿಪೆಂಟ್ಸ್ ವಾಟ್ಸಾಪ್ ನ ಹೊಸ ಫೀಚರ್
ವಾಟ್ಸಾಪ್ ಇದೀಗ ಅಪೂರ್ವ್ ನ್ಯೂ ಪಾರ್ಟಿಸಿಪೆಂಟ್ಸ್ ಎಂಬ ಹೊಸ ಫೀಚರ್ ಒಂದನ್ನು ಪರಿಚಯಿಸಿದೆ. ಈ ಫೀಚರ್ ಮೂಲಕ ಇನ್ನು ಮುಂದೆ ಯಾರೇ ಆಗಲಿ ವಾಟ್ಸಾಪ್ ಗ್ರೋಪ್ ಗೆ ಸೇರಬೇಕಾದರು ಅಡ್ಮಿನ್ಗಳ ಪರ್ಮಿಶನ್ ಬೇಕು.
ಯಾರೇ ಆಗಲಿ ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್ಗೆ ಸೇರಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಅವರನ್ನು Add ಮಾಡ್ಬೇಕಾ ಅಥವಾ ರಿಜೆಕ್ಟ್ ಮಾಡುವ ಆಯ್ಕೆ ಅಡ್ಮಿನ್ಗೆ ಸಿಗಲಿದೆ.
ಇದುವರೆಗೆ ಯಾರು ಬೇಕಾದರೂ ವಾಟ್ಸಾಪ್ ಗ್ರೂಪ್ ಗೆ ಸೇರಬೇಕಾಗುವ ಅನುಮತಿ ಇದ್ದಿತ್ತು. ಕೇವಲ ಒಂದು ಲಿಂಕ್ ಕಳಿಸಿದರೆ ಸಾಕು ಅದಕ್ಕೆ ಕ್ಲಿಕ್ ಕೊಡುವ ಮೂಲಕ ವಾಟ್ಸಾಪ್ ಗ್ರೂಪ್ ಗೆ ಸೇರಬಹುದಿತ್ತು. ಆದರೆ ಇನ್ನು ಮುಂದೆ ಈ ರೀತಿಯಾಗಲು ಸಾಧ್ಯವಿಲ್ಲ. ಇದಕ್ಕಾಗಿಯೇ ವಾಟ್ಸಾಪ್ ಈ ಫೀಚರ್ ಅನ್ನು ಪರಿಚಯಿಸುತ್ತಿದ್ದು, ಇನ್ನುಮುಂದೆ ಬಳಕೆದಾರರಿಗೆ ಇಷ್ಟ ಬಂದ ಹಾಗೆ ಗ್ರೂಪ್ ಸೇರಲಾಗುವುದಿಲ್ಲ.