Group Voice Call: ವಾಟ್ಸಾಪ್ ನಲ್ಲಿ ಗ್ರೂಪ್ ಕಾಲ್ ಮಾಡುವವರಿಗೆ ಇನ್ನೊಂದು ಹೊಸ ಸೇವೆ, ಬಿಗ್ ಅಪ್ಡೇಟ್ ಜಾರಿಗೆ ತಂದ ವಾಟ್ಸಾಪ್.

ವಾಟ್ಸಾಪ್ ನಲ್ಲಿ ಗ್ರೂಪ್ ಕಾಲ್ ಮಾಡುವವರಿಗೆ ಹೊಸ ಸೇವೆ.

WhatsApp Group Voice Call Feature: ಮೆಟಾ ಮಾಲೀಕತ್ವದ WhatsApp ಅನ್ನು ಹೊಸದಾಗಿ ಮಾಡಲು ಕಂಪನಿ ಯೋಜನೆ ಹೂಡಿದೆ. ಈಗಾಗಲೇ ವಾಟ್ಸಾಪ್ ಹತ್ತು ಹಲವು ಹೊಸ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರು ಹೊಸ ಹೊಸ ಫೀಚರ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ವಾಟ್ಸಾಪ್ ನ ಸೆಟ್ಟಿಂಗ್ಸ್ ನಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಯನ್ನು ತರಲಾಗಿದೆ.

ವಾಟ್ಸಾಪ್ ನ Chatting List ನಲ್ಲಿ ಹೊಸ ಮಾದರಿಯನ್ನು ತರಲು ವಾಟ್ಸಪ್ ನಿರ್ಧರಿಸಿದೆ. ಈಗಾಗಲೇ IOS ಬಳಕೆದಾರರು ವಾಟ್ಸಾಪ್ ಸೆಟ್ಟಿಂಗ್ ನಲ್ಲಿ ಅನೇಕ ಫೀಚರ್ ಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಎಲ್ಲ ಬಳಕೆದಾರರಿಗೂ ಹೊಸ ಹೊಸ ಫೀಚರ್ ಗಳು ಸಿಗಲಿದೆ. ಇನ್ನು ಇತ್ತೀಚೆಗಷ್ಟೇ ವಾಟ್ಸಾಪ್ Group Call ಫೀಚರ್ ಅನ್ನು ಬಳಕೆದಾರಿಗೆ ನೀಡಿತ್ತು. ಇದೀಗ ಈ ಫೀಚರ್ ನಲ್ಲಿ ಬಿಗ್ ಅಪ್ಡೇಟ್ ಲಭಿಸಿದೆ.

WhatsApp Group Voice Call feature
Image Credit: Hindustantimes

WhatsApp Group Voice Call feature
ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಕೂಡ Voice Call ಬಳಸುತ್ತಾರೆ. ಇದಕೆ ನೆಟ್ ರಿಚಾರ್ಜ್ ಇದ್ದರೆ ಸಾಕಾಗುತ್ತದೆ. ಸಾಕಷ್ಟು ಜನರು ವಾಯ್ಸ್ ಕಾಲ್ ಮೂಲಕವೇ ತಮ್ಮ ಸಂಭಾಷಣೆಯನ್ನು ಮಾಡುತ್ತಾರೆ. ಇದೀಗ ವಾಟ್ಸಾಪ್ ಬಳಕೆದಾರರಿಗೆ ವಾಯ್ಸ್ ಕಾಲ್ ನಲ್ಲಿ ಹೆಚ್ಚಿನ ಸೌಲಭ್ಯವನ್ನು ನೀಡಲು ಮುಂದಾಗಿದೆ. ನಿಮ್ಮ ಖಾತೆಯಲ್ಲಿ ಈ ವಾಟ್ಸಾಪ್ ಗ್ರೂಪ್ ವಾಯ್ಸ್ ಫೀಚರ್ ಅನ್ನು ಸಕ್ರಿಯಗೊಳಿಸುವ ಮೂಲಕ ಫೀಚರ್ ನ ಲಾಭವನ್ನು ಪಡೆಯಬಹುದು.

ಈ ಹಿಂದೆ ವಾಟ್ಸಾಪ್ ಗ್ರೂಪ್ ವಾಯ್ಸ್ ಫೀಚರ್ 32 ಸಂಖ್ಯೆಗೆ ಸೀಮಿತವಾಗಿದೆ. 32 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆ ಹೊಂದಿರುವ ಗ್ರೂಪ್ ಗಳಿಗೆ ಮಾತ್ರ ಈ ಫೀಚರ್ ಲಭ್ಯವಾಗುತ್ತದೆ. ಆದರೆ WhatsApp ಇತ್ತೀಚಿಗೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಬಳಕೆದಾರರು 31 Group ಭಾಗವಹಿಸುವವರನ್ನು ಕರೆಗೆ ಸೇರಲು ಆಹ್ವಾನಿಸಲು ಸಾದ್ಯವಾಗುತ್ತದೆ. ಇದೀಗ 31 ಭಾಗವಹಿಸುವವರೊಂದಿಗೆ ಗುಂಪು ಸಂಭಾಷಣೆಯನ್ನು ಪ್ರಾರಂಭಿಸುವ ಸಾಮರ್ಥ್ಯದೊಂದಿಗೆ ವಾಟ್ಸಾಪ್ ಗಮನಾರ್ಹವಾಗಲಿದೆ.

Whatsapp New Feature
Image Credit: Alphr

ಈ ರೀತಿಯಾಗಿ ವಾಟ್ಸಾಪ್ ಗ್ರೂಪ್ ಕಾಲ್ ಫೀಚರ್ ಅನ್ನು ಬಳಸಿಕೊಳ್ಳಿ
ಗ್ರೂಪ್ ಚಾಟ್ ನಲ್ಲಿ ವೇವ್ಫಾರ್ಮ್ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಮೀಸಲಾದ ಇಂಟರ್ಫೇಸ್ ನೊಂದಿಗೆ ಧ್ವನಿ ಚಾಟ್ ಅನ್ನು ಪ್ರಾರಂಭಿಸಬಹುದು. ಗುಂಪಿನಲ್ಲಿರುವ ಯಾರಾದರೂ ತಕ್ಷಣ ಸೇರಲು ಮತ್ತು ಮಾತನಾಡಲು ಪ್ರಾರಂಭಿಸಲು ಸಾಧ್ಯವಾಗುತ್ತದೆ.

Join Nadunudi News WhatsApp Group

ಚಾಟ್ ಪ್ರಾರಂಭಿಸಿದ ನಂತರ ಯಾರು ಸೇರದಿದ್ದರೆ ಅದು 60 ನಿಮಿಷಗಳ ನಂತರ ಸ್ವಯಂಚಾಲಿತವಾಗಿ ಕೊನೆಗೊಳ್ಳುತ್ತದೆ. ಆದರೆ ನಿಮ್ಮ ಇಚ್ಛೆಗೆ ಅನುಗುಣವಾಗಿ ವಾಯ್ಸ್ ಚಾಟ್ ಮಾಡಬಹುದು. ಇನ್ನು ಗುಂಪಿನಲ್ಲಿರುವ ಸದ್ಯಸರಿಗೆ ಸೂಚನೆ ನೀಡಲಾಗುತ್ತದೆ ಮತ್ತು ಬಯಸಿದವರು ವಾಯ್ಸ್ ಚಾಟ್ ಮಾಡಿಕೊಳ್ಳಬಹುದು. ವಾಟ್ಸಾಪ್ ಗ್ರೂಪ್ ವಾಯ್ಸ್ ಫೀಚರ್ ಕೂಡ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಆಗಿದೆ.

Join Nadunudi News WhatsApp Group