WhatsApp Hack: ವಾಟ್ಸಾಪ್ ಬಳಸುವವರಿಗೆ ದೊಡ್ಡ ಎಚ್ಚರಿಕೆ, ತಕ್ಷಣ ಈ ಕೆಲಸ ಮಾಡದಿದ್ದರೆ ನಿಮ್ಮ ವಾಟ್ಸಾಪ್ ಹ್ಯಾಕ್.
ಈ ಕೆಲಸ ಮಾಡದಿದ್ದರೆ ನಿಮ್ಮ ವಾಟ್ಸಾಪ್ ಖಾತೆ ಹ್ಯಾಕ್ ಆಗಲಿದೆ.
WhatsApp Hack Latest Update: ಮೆಟಾ ಮಾಲೀಕತ್ವದ WhatsApp ಇತ್ತೀಚಿಗೆ ಹೊಸ ಹೊಸ ಫೀಚರ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ದಿನೇ ದಿನೇ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಬಿಡುಗಡೆಗೊಳ್ಳುತ್ತಿದೆ.
ಇನ್ನು WhatsApp ನಲ್ಲಿ ಹೆಚ್ಚು ಹೆಚ್ಚು ಫೀಚರ್ ಬಿಡುಗಡೆಯಾಗುತ್ತ ವಂಚನೆಗಳು ಕೂಡ ತೆಲೆಯೆತ್ತಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ಯಾವುದೇ ಸಣ್ಣ ವೈಯಕ್ತಿಕ ಮಾಹಿತಿ ಇದ್ದರು ಕೂಡ ಜನರನ್ನು ಸುಲಭವಾಗಿ ವಂಚಿಸಬಹುದಾಗಿದೆ.
WhatsApp ನಲ್ಲಿ ನಡೆಯುತ್ತಿದೆ ಹೊಸ ರೀತಿಯ ವಂಚನೆ
ಈಗಾಗಲೇ ಜನರನ್ನು ಮೋಸಮಾಡುವ ದೃಷ್ಟಿಯಿಂದ ಆನ್ಲೈನ್ ನಲ್ಲಿ ವಂಚಕರು ಪಿಂಕ್ ವಾಟ್ಸಾಪ್ ಲಿಂಕ್ ಅನ್ನು ಬಳಸುತ್ತಿದ್ದಾರೆ. ಪಿಂಕ್ ವಾಟ್ಸಾಪ್ ಲಿಂಕ್ ಮೂಲಕ ಜನರನ್ನು ಸುಲಭವಾಗಿ ವಂಚಿಸಿದ್ದರು. ಇದೀಗ ವಂಚಕರು ಲಿಂಕ್ ನ ಮೂಲಕ ವಂಚನೆ ಮಾಡುವ ಬದಲಾಗಿ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ ಎನ್ನಬಹುದು. ಬಳಕೆದಾರರಿಗೆ ಯಾವುದೇ ಸುಳಿವಿಲ್ಲದೆ ಹ್ಯಾಕರ್ ಗಳು ಈ ವಿಧಾನದ ಮೂಲಕ ವಂಚನೆ ಆರಂಭಿಸಿದ್ದಾರೆ. ಇದೀಗ ವಾಟ್ಸಾಪ್ ನ ಮೂಲಕ ವಂಚನೆಗಳು ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ವಾಟ್ಸಾಪ್ ಬಳಸುವವರಿಗೆ ದೊಡ್ಡ ಎಚ್ಚರಿಕೆ
ಸದ್ಯ ಹ್ಯಾಕರ್ ಗಳು WhatsApp ನ ಮೂಲಕ ಹೊಸ ವಿಧಾನದಲ್ಲಿ ಜನರನ್ನು ಮೋಸ ಮಾಡಲು ಮುಂದಾಗಿದ್ದಾರೆ. ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಚಾಟಿಂಗ್, ವಿಡಿಯೋ ಕಾಲ್, ವಿಡಿಯೋ ಮೆಸ್ಸೇಜ್, ಫೋಟೋ ಶೇರಿಂಗ್ ಹೀಗೆ ಅನೇಕ ಫೀಚರ್ ಲಾಭವಿರುವ ಕರಣ ಹ್ಯಾಕರ್ ಗಳು ಇದನ್ನೇ ದಾಳವನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಸದ್ಯ ಹ್ಯಾಕರ್ ಗಳು GIF ಮೂಲಕ ಮೊಬೈಲ್ ಅನ್ನು ಹ್ಯಾಕ್ ಮಾಡಲು ಮುಂದಾಗಿದ್ದಾರೆ. ಇನ್ನುಮುಂದೆ GIF ಸಂದೇಶಗಳು ಬಂದರೆ ಎಚ್ಚರದಿಂದಿರಿ.
ತಕ್ಷಣ ಈ ಕೆಲಸ ಮಾಡದಿದ್ದರೆ ಹ್ಯಾಕ್ ಆಗಲಿದೆ ನಿಮ್ಮ ವಾಟ್ಸಾಪ್
WhatsApp ನಲ್ಲಿ ಹಲವಾರು ಸೆಟ್ಟಿಂಗ್ ಗಳು ಆನ್ ಇರುವ ಕಾರಣ ಹ್ಯಾಕರ್ ಗಳು ಸುಲಭವಾಗಿ ವಾಟ್ಸಾಪ್ ಅಕೌಂಟ್ ಅನ್ನು ಹ್ಯಾಕ್ ಮಾಡುತ್ತಾರೆ. ಸದ್ಯ ಹ್ಯಾಕರ್ ಗಳು GIFShell ವಿಧಾನದ ಮೂಲಕ ಹ್ಯಾಕ್ ಮಾಡಲು ಪ್ರಾರಂಭಿಸಿದ್ದಾರೆ. “WhatsApp Media Auto Download” ಎಲ್ಲ ಮೊಬೈಲ್ ನಲ್ಲಿಯೂ ಇರುತ್ತದೆ.
ನೀವು ಈ ಸೆಟ್ಟಿಂಗ್ ಅನ್ನು ಆಫ್ ಮಾಡುವುದು ಅಗತ್ಯವಾಗಿದೆ. ಈ ಸೆಟ್ಟಿಂಗ್ ಆನ್ ಇದ್ದರೆ ಅಪರಿಚಿತ ಮೂಲಗಳಿಂದ ಬರುವ ಎಲ್ಲ ಸಂದೇಶಗಳು ಸ್ವಯಂ ಚಾಲಿತವಾಗಿ ಡೌನ್ಲೋಡ್ ಆಗುತ್ತವೆ. ಹ್ಯಾಕರ್ಸ್ ಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ನೀವು ಇಂದೇ ನಿಮ್ಮ ಮೊಬೈಲ್ ನಲ್ಲಿ WhatsApp Media Auto Download ಸೆಟ್ಟಿಂಗ್ ಅನ್ನು ಆಫ್ ಮಾಡುವ ಮೂಲಕ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.