WhatsApp Kannada: ವಾಟ್ಸಾಪ್ ಬಳಸುವವರಿಗೆ ಗುಡ್ ನ್ಯೂಸ್, ಈಗ ಕನ್ನಡದಲ್ಲಿ ಬಳಸಬಹುದು ವಾಟ್ಸಾಪ್.
ಈಗ ವಾಟ್ಸಾಪ್ ಅನ್ನು ಜನರು ಕನ್ನಡದಲ್ಲಿ ಕೂಡ ಬಳಸಬಹುದಾಗಿದೆ. ವಾಟ್ಸಾಪ್ ನಲ್ಲಿ ಹೊಸ ಅಪ್ಡೇಟ್ ಬಿಡುಗಡೆ.
WhatsApp Kannada Version: ವಾಟ್ಸಾಪ್ (WhatsApp) ಇತ್ತೀಚಿಗೆ ಹೊಸ ಹೊಸ ಫೀಚರ್ ಗಳ ಮೂಲಕ ಜನರನ್ನು ಆಕರ್ಷಿಸುತ್ತಿದೆ. ವಾಟ್ಸಾಪ್ ಇತ್ತೀಚಿಗೆ ಹತ್ತು ಹಲವು ಫೀಚರ್ ಗಳನ್ನೂ ಪರಿಚಯಿಸಿದೆ.
ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಚಾಟಿಂಗ್ ಸಿಸ್ಟಮ್ ನಲ್ಲಿ ಸಂಪೂರ್ಣ ಬದಲಾವಣೆ ಆಗಲಿದೆ. ಇದೀಗ ವಾಟ್ಸಾಪ್ ಚಾಟಿಂಗ್ ಸಿಸ್ಟಮ್ (Chatting System) ನಲ್ಲಿ ಹೊಸ ಫೀಚರ್ ಅನ್ನು ತಂದಿದೆ. ಈ ಹೊಸ ಫೀಚರ್ ನ ವೈಶಿಷ್ಟ್ಯವನ್ನು ತಿಳಿಯೋಣ.
ವಾಟ್ಸಾಪ್ ಚಾಟಿಂಗ್ ನಲ್ಲಿ ಹೊಸ ಫೀಚರ್
ಮೆಟಾ ಮಾಲೀಕತ್ವದ ವಾಟ್ಸಾಪ್ ಇದೀಗ ಹೊಸ ಫೀಚರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇದೀಗ ದಿನೇ ದಿನೇ ಹೊಸ ಅಪ್ಡೇಟ್ ಗಳನ್ನೂ ಹೊಂದಿದೆ. ಭಾರತದಲ್ಲಿ ಅದೆಷ್ಟೋ ಮಿಲಿಯನ್ ಗಳಷ್ಟು ಜನರು ವಾಟ್ಸಾಪ್ ಅನ್ನು ಬಳಸುತ್ತಾರೆ. ಇದೀಗ ವಾಟ್ಸಾಪ್ ಹೊಸ ಅಪ್ಡೇಟ್ ಅನ್ನು ಪರಿಚಯಿಸಲಾಗಿದೆ.
ವಾಟ್ಸಾಪ್ ನಲ್ಲಿ ಕನ್ನಡ ಭಾಷೆ
ಇನ್ನುಮುಂದೆ ವಾಟ್ಸಾಪ್ ನಲ್ಲಿ ಕನ್ನಡ ಭಾಷೆಯನ್ನು ಬಳಸಿಕೊಳ್ಳಬಹುದು. ವಾಟ್ಸಾಪ್ ನಲ್ಲಿ ಕನ್ನಡ ಬಳಸುವುದು ಹೇಗೆ ಎನ್ನುವ ಬಗ್ಗೆ ತಿಳಿಯೋಣ.
ವಾಟ್ಸಾಪ್ ನಲ್ಲಿ ಮೆನು ಬಟನ್ ಟೈಪ್ ಮಾಡಿ, ಸೆಟ್ಟಿಂಗ್ ನಲ್ಲಿ ಚಾಟ್ ಗೆ ಹೋಗಿ, ಅಪ್ಲಿಕೇಶನ್ ಭಾಷೆಯನ್ನು ಆಯ್ಕೆ ಮಾಡಬೇಕು. ನಂತರ ಅಲ್ಲಿ ಕಾಣಿಸಿಕೊಳ್ಳುವ ಪಾಪ್ ಅಪ್ ನ ಕೆಳಗಡೆ ಕನ್ನಡ ಆಯ್ಕೆಯ ಭಾಷೆಯನ್ನು ಆರಿಸಬೇಕು.
ಹೀಗೆ ಆಯ್ಕೆ ಮಾಡುದರಿಂದ ವಾಟ್ಸಾಪ್ ಅನ್ನು ಕನ್ನಡದಲ್ಲಿ ಬಳಸಬಹುದು. ವಾಟ್ಸಾಪ್ ಫೋನ್ ನ ಭಾಷೆಯನ್ನು ಅನುಸರಿಸುತ್ತದೆ. ನಿಮ್ಮ ವಾಟ್ಸಾಪ್ ಕನ್ನಡದಲ್ಲಿ ಆಯ್ಕೆಯಾಗಿದ್ದರೆ, ವಾಟ್ಸಾಪ್ ಸ್ವಯಂಚಾಲಿತವಾಗಿ ಕನ್ನಡದಲ್ಲಿರುತ್ತದೆ. ವಾಟ್ಸಾಪ್ ನಲ್ಲಿ ಕನ್ನಡ ಆಯ್ಕೆ ಸಿಗುವುದರಿಂದ ಬಳಕೆದಾರರು ಇದರಿಂದ ಸಾಕಷ್ಟು ಲಾಭವನ್ನು ಪಡೆಯಬಹುದು.