WhatsApp: ನಿಮ್ಮ ವಾಟ್ಸಾಪ್ ಮೆಸೇಜ್ ಬೇರೆಯವರು ಕೂಡ ಓದುತ್ತಿರಬಹುದು, ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.
ನಿಮ್ಮ ವಾಟ್ಸಪ್ಪ್ ಮೆಸೇಜ್ ಅನ್ನು ಯಾರಾದರೂ ರಹಸ್ಯವಾಗಿ ಓದುತಿದ್ದರೆ ಅದನ್ನು ನಿಮ್ಮ ವಾಟ್ಸಪ್ಪ್ ಮೂಲಕವೇ ತಿಳಿದುಕೊಳ್ಳಬಹುದು.
WhatsApp New Update: ಅತಿ ಹೆಚ್ಚು ಬಳಕೆದಾರರನ್ನು ಪಡೆದಿರುವ ವಾಟ್ಸಾಪ್(WhatsaApp) ಹೊಸ ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚಿಗೆ ವಾಟ್ಸಾಪ್ ತನ್ನ ಬಳಕೆದಾರರಿಗೆ ಸಾಕಷ್ಟು ಫೀಚರ್ ಗಳನ್ನೂ ಬಿಡುಗಡೆ ಮಾಡಿದೆ. ವಾಟ್ಸಾಪ್ ಬಳಕೆದಾರರು ಹೊಸ ಫೀಚರ್ ನ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಇತ್ತೀಚಿನ ದಿನದಲ್ಲಿ ಸೈಬರ್ ಕ್ರೈಮ್ ಗಳು(Cyber Crime) ನಡೆಯುವುದು ಸಹಜವಾಗಿದೆ. ವಂಚಕರು ಇನ್ನೊಬ್ಬರು ಬಳಕೆ ಮಾಡುವ ವಾಟ್ಸಾಪ್ ಅನ್ನು ಸಹ ಹ್ಯಾಕ್ ಮಾಡುತ್ತಾರೆ.
ವಾಟ್ಸಾಪ್ ಬಳಕೆದಾರರಿಗೆ ಹೊಸ ಮಾಹಿತಿ
ಹ್ಯಾಕ್ ಆದ ವಾಟ್ಸಾಪ್ ಕೆಲವೊಮ್ಮೆ ದುರುಪಯೋಗ ಕೂಡ ಆಗಬಹುದು. ಹೀಗಾಗಿ ಬಳಕೆದಾರರ ವಾಟ್ಸಾಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ ಎನ್ನುವುದನ್ನು ತಿಳಿಯುವುದು ಮುಖ್ಯವಾಗಿದೆ. ವಾಟ್ಸಾಪ್ ಬಳಕೆದಾರರಿಗೆ ಕೆಲವು ಫೀಚರ್ಸ್ ಗಳು ಇದ್ದರು ಸಹ ವಾಟ್ಸಾಪ್ ಹ್ಯಾಕ್ ಆಗುವ ಸಾಧ್ಯತೆಗಳು ಇರುತ್ತದೆ. ಅನೇಕ ಬಾರಿ ಬಳಕೆದಾರರಿಗೆ ಗೊತ್ತಿಲ್ಲದೇ ಅವರ ವಾಟ್ಸಾಪ್ ಚಾಟ್ ಅನ್ನು ಬೇರೆಯವರು ಜಾಲಾಡುವ ಸಾಧ್ಯತೆಗಳಿವೆ.
ವಾಟ್ಸಾಪ್ ಹ್ಯಾಕ್ ಆದರೆ ಅದನ್ನು ತಿಳಿಯುವುದು ಹೇಗೆ
ಬಳಕೆದಾರರ ವಾಟ್ಸಾಪ್ ಚಾಟ್ ಅನ್ನು ಯಾರಾದರೂ ರಹಸ್ಯವಾಗಿ ಓದುತ್ತಿದ್ದಾರೆಯೇ ಅಥವಾ ವೈಖಿಸುತ್ತಿದ್ದಾರೆಯೇ ಎನ್ನುವುದನ್ನು ತಿಳಿಯಲು ಯಾವುದೇ ಥರ್ಡ್ ಪಾರ್ಟಿ ಅಪ್ ಅಗತ್ಯವಿಲ್ಲ. ಬದಲಿಗೆ ಬಳಕೆದಾರರು ಅವರ ವಾಟ್ಸಾಪ್ ನಲ್ಲಿಯೇ ಈ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಮೊದಲು ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆರೆಯಿರಿ. ನಂತರ ಬಲ ಭಾಗದಲ್ಲಿ ಕಾಣಿಸುವ ಮೂರೂ ಡಾಟ್ ಸೆಲೆಕ್ಟ್ ಮಾಡಿ. ಬಳಿಕ ಅಲ್ಲಿ ಕಾಣಿಸುವ ವಾಟ್ಸಾಪ್ ವೆಬ್ ಲಿಂಕ್ ಡಿವೈಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೀವು ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ ನಲ್ಲಿ ವಾಟ್ಸಾಪ್ ತೆರೆಯದಿದ್ದರು ಲಿಂಕ್ ಆಗಿದೆ ಎನ್ನುವುದನ್ನು ತೋರಿಸುತ್ತಿದ್ದಾರೆ ನಿಮ್ಮ ವಾಟ್ಸಾಪ್ ಚಾಟ್ ಅನ್ನು ಬೇರೆಯವರು ಓದುತ್ತಿದ್ದಾರೆ ಎಂದರ್ಥ.