WhatsApp: ಈಗ ವಾಟ್ಸಾಪ್ ನಲ್ಲಿ ಚಾಟ್ ಓಪನ್ ಮಾಡದೆ ಮೆಸೇಜ್ ಓದಬಹುದು, ಚಾಟ್ ಓದಲು ಹೊಸ ಉಪಾಯ.

ವಾಟ್ಸಾಪ್ ನಲ್ಲಿ ಹೊಸ ಫೀಚರ್, ವಾಟ್ಸಾಪ್ ಓಪನ್ ಮಾಡದೆ ಮೆಸೇಜ್ ಓದುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

WhatsApp Chat Read: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಇದೀಗ ಹೊಸ ಹೊಸ ಫೀಚರ್ ಗಳ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಿದೆ. ವಾಟ್ಸಾಪ್  ಅನ್ನು ಭಾರತದಲ್ಲಿ ಮಿಲಿಯನ್ ನಷ್ಟು ಜನರು ಬಳಸುತ್ತಿದ್ದಾರೆ. ಈಗಂತೂ ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಫೀಚರ್ ಗಳು ಬಿಡುಗಡೆಗೊಳ್ಳುತ್ತಿದೆ.

ವಾಟ್ಸಾಪ್ ಬಳಕೆದಾರರು ಅನೇಕ ಫೀಚರ್ ಗಳ ಲಾಭವನ್ನು ಪಡೆಯಬಹುದಾಗಿದೆ. ಇನ್ನು ವಾಟ್ಸಾಪ್ ನಲ್ಲಿ ವಿವಿಧ ರೀತಿಯ ಸೌಲಭ್ಯಗಳು ಲಭ್ಯವಾಗಲಿದೆ. ಕೆಲವು ಪ್ರತಿಷ್ಠಿತ ಬ್ಯಾಂಕ್ ಗಳು ವಾಟ್ಸಾಪ್ ನ ಮೂಲಕ ಕೂಡ ವ್ಯವಹಾರಗಳನ್ನು ನಡೆಸುತ್ತದೆ. ಇದೀಗ ವಾಟ್ಸಾಪ್ ಹೊಸ ಫೀಚರ್ ಅನ್ನು ಹೊರ ತಂದಿದೆ.

How to read a message in WhatsApp without opening it
Image Credit: cxtoday

ವಾಟ್ಸಾಪ್ ನಲ್ಲಿ ಹೊಸ ಫೀಚರ್
ಇದೀಗ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಒಂದು ಬಿಡುಗಡೆ ಆಗಿದ್ದು ವಾಟ್ಸಾಪ್ ನಲ್ಲಿ ಚಾಟ್ ಓಪನ್ ಮಾಡದೆ ಮೆಸೇಜ್ ಓದಬಹುದು, ಇದು ಹೇಗೆ ಎಂಬುವುದನ್ನು ತಿಳಿದುಕೊಳ್ಳೋಣ. ವಾಟ್ಸಾಪ್ ನಲ್ಲಿ ಅಪ್ ತೆರೆಯದೆ ಚಾಟ್ ಅನ್ನು ಓದಬಹುದು. ಇದಕ್ಕೆ ಕೆಲವೊಂದು ಟ್ರಿಕ್ ಗಳಿವೆ. ಇದಕ್ಕಾಗಿ ನೀವು ಥರ್ಡ್ ಪಾರ್ಟಿ ಅಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗಿಲ್ಲ.

ಸಾಮಾನ್ಯವಾಗಿ ನೋಟಿಫಿಕೇಶನ್ ನಲ್ಲಿ ಈ ಮೆಸೇಜ್ ಓದಬಹುದು. ಆದರೆ ಇಲ್ಲಿ ಉದ್ದವಾದ ಮೆಸೇಜ್ ಅನ್ನು ಓದಲು ಸಾಧ್ಯವಿಲ್ಲ. ಬದಲಾಗಿ ನೀವು ಫೋನ್ ನಲ್ಲಿ ಕೆಲವೊಂದು ಸೆಟ್ಟಿಂಗ್ ಗಳನ್ನೂ ಬದಲಾವಣೆ ಮಾಡಿಕೊಳ್ಳುವ ಮೂಲಕ ವಾಟ್ಸಾಪ್ ಚಾಟ್ ಅನ್ನು ತೆರೆಯದೆ ಓದಬಹುದು. ಇದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

How to read a message in WhatsApp without opening it
Image Credit: livemint

ವಾಟ್ಸಾಪ್ ನಲ್ಲಿ ಓಪನ್ ಮಾಡದೆ ಮೆಸೇಜ್ ಓದುವುದು ಹೇಗೆ
* ನೀವು ಸಮರ್ಥ ಫೋನ್ ನಲ್ಲಿ ಮೇನ್ ಸ್ಕ್ರೀನ್ ನಲ್ಲಿರುವ ಹೋಮ್ ಪೇಜ್ ಅನ್ನು ಲಾಂಗ್ ಪ್ರೆಸ್ ಮಾಡಿ.

Join Nadunudi News WhatsApp Group

* ಈಗ ಅಲ್ಲಿ ಕಾಣಿಸುವ Widgets ಆಯ್ಕೆ ಮೇಲೆ ಕ್ಲಿಕ್ ಮಾಡಿ.

* ನಂತರ ಮೇನ್ ಸ್ಕ್ರೀನ್ ನಲ್ಲಿ ಎಲ್ಲ widgets ಕಾಣಿಸುತ್ತದೆ. ಇದರಲ್ಲಿ ವಾಟ್ಸಾಪ್ ಆಯ್ಕೆ ಮಾಡಿ.

* ವಾಟ್ಸಾಪ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಮೇನ್ ಸ್ಕ್ರೀನ್ ನಲ್ಲಿ ಕಾಣಿಸುತ್ತದೆ.

* ನಂತರ ಡನ್ ಆಯ್ಕೆಯನ್ನು ಒತ್ತಿರಿ. ಈ ಸಂದರ್ಭ ಬೇಕಾದಲ್ಲಿ ಫುಲ್ ಸ್ಕ್ರೀನ್ ವರೆಗೂ ಸೆಲೆಕ್ಟ್ ಮಾಡಬಹುದು.

* ಈ ಸೆಟ್ಟಿಂಗ್ ನಂತರ ಸ್ಕ್ರಾಲ್ ಮಾಡುವ ಮೂಲಕ ವಾಟ್ಸ್​ಆ್ಯಪ್ ತೆರೆಯದೆ ಮೆಸೇಜ್ ಓದಬಹುದು.

* ಯಾವುದೇ ಕಾರಣಕ್ಕೂ ಮೆಸೇಜ್ ಮೇಲೆ ಕ್ಲಿಕ್ ಮಾಡಬೇಡಿ, ಮಾಡಿದರೆ ವಾಟ್ಸ್​ಆ್ಯಪ್ ಓಪನ್ ಆಗಿ ನೇರವಾಗಿ ಚಾಟ್​ಗೆ ಪ್ರವೇಶಿಸುತ್ತದೆ.

Join Nadunudi News WhatsApp Group