WhatsApp Loan: ಈಗ ವಾಟ್ಸಾಪ್ ಮೂಲಕ ಪಡೆಯಬಹುದು 10 ಲಕ್ಷ ರೂಪಾಯಿ ಸಾಲ, ಚಾಟ್ ಮಾಡಿ ಸಾಲ ಪಡೆಯಿರಿ.

ಈಗ ವಾಟ್ಸಾಪ್ ನಲ್ಲಿ ಚಾಟ್ ಮಾಡುವುದರ ಮೂಲಕ 10 ಲಕ್ಷ ರೂಪಾಯಿಯ ತನಕ ಸಾಲವನ್ನ ಪಡೆಯಬಹುದಾಗಿದೆ.

WhatsApp Loan process: ಇದೀಗ ಸಾಲ ಪಡೆದುಕೊಳ್ಳುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ನಿಮಗೆ ಸಾಲ ಬೇಕಾದರೆ ನೀವು ಇನ್ನುಮುಂದೆ ಟೆನ್ಶನ್ ಆಗುವ ಅಗತ್ಯ ಇಲ್ಲ. ಇದೀಗ ನೀವು ವಾಟ್ಸಾಪ್ (WhatsApp) ಮೂಲಕ ಸಾಲ ಪಡೆಯಬಹುದು. ವಾಟ್ಸಾಪ್ ಮೂಲಕ ಸಾಲ ಪಡೆಯುವುದು ಹೇಗೆ.

WhatsApp Loan Process
Image Credit: pymnts

ಸಾಲ ಪಡೆಯುವವರಿಗೆ ಹೊಸ ಮಾಹಿತಿ
ಬ್ಯಾಂಕಿಂಗ್ ಅಲ್ಲದ ಪ್ರಮುಖ ಹಣಕಾಸು ಕಂಪನಿಗಳಲ್ಲಿ ಒಂದಾಗಿ ಮುಂದುವರಿದಿರುವ ಐಐಎಫ್‌ಎಲ್ ಫೈನಾನ್ಸ್ ಇತ್ತೀಚೆಗೆ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. IIFL ಫೈನಾನ್ಸ್ ವಾಟ್ಸಾಪ್ ಮೂಲಕ ಸಾಲ ನೀಡುವುದಾಗಿ ಘೋಷಿಸಿದೆ.ವಾಟ್ಸಾಪ್ ಮೂಲಕ ಒಂದೇ ಬಾರಿ ರೂ. 10 ಲಕ್ಷದ ವರೆಗೆ ಸಾಲ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಸಾಲದ ಅರ್ಹತೆ ಕ್ಷಣಗಳಲ್ಲಿ ತಿಳಿಯುತ್ತದೆ. ತ್ವರಿತ ಅನುಮೋದನೆಯ ಲಾಭವಿದೆ ಎಂದು ಹೇಳಬಹುದು. 100ರಷ್ಟು ಡಿಜಿಟಲ್ ರೂಪದಲ್ಲಿ ಸಾಲ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಸಾಲದ ಅರ್ಜಿಯ ಸಮಯದಿಂದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವ ವರೆಗೆ ಪ್ರಕ್ರಿಯೆಯು ಆನ್‌ ಲೈನ್‌ ನಲ್ಲಿ ನಡೆಯುತ್ತದೆ.

ವಾಟ್ಸಾಪ್ ಮೂಲಕ ಸಾಲ ಕೂಡ ಪಡೆಯಬಹುದು
ದೇಶದಲ್ಲಿ ಸುಮಾರು 450 ಮಿಲಿಯನ್ ಬಳಕೆದಾರರು ವಾಟ್ಸಾಪ್ ಬಳಸುತ್ತಿದ್ದಾರೆ. ವಾಟ್ಸಾಪ್ ಮೂಲಕ ಯಾವಾಗ ಬೇಕಾದರೂ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಸೇವೆಗಳು ದಿನದ 24 ಗಂಟೆಯೂ ಲಭ್ಯವಿದೆ. ಆದ್ದರಿಂದ ನೀವು ಯಾವಾಗ ಬೇಕಾದರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಈ ವಾಟ್ಸಾಪ್ ಸಾಲ ಸೌಲಭ್ಯವು ಕೇವಲ ವ್ಯಾಪಾರ ಸಾಲಗಳಿಗೆ ಮಾತ್ರ ಲಭ್ಯವಿದೆ.

Now you can get a loan of up to 10 lakh rupees by chatting on WhatsApp.Now you can get a loan of up to 10 lakh rupees by chatting on WhatsApp.
Image Credit: financialexpress

ನೀವು ವಾಟ್ಸಪ್ ಮೂಲಕ ಸಾಲ ಪಡೆಯಲು ಬಯಸಿದರೆ, 9019702184 ಈ ನಂಬರ್ ಸೇವ್ ಮಾಡಿಕೊಂಡು ವಾಟ್ಸಾಪ್‌ನಲ್ಲಿ ಹಾಯ್ ಎಂದು ಸಂದೇಶ ಕಳುಹಿಸಿ. ಚಾಟ್ ಬೋಟ್ ಅಗತ್ಯವಿರುವ ಎಲ್ಲಾ ವಿವರಗಳನ್ನು ಕೇಳುತ್ತದೆ. ನೀವು ಆ ಮಾಹಿತಿಯನ್ನು ಒದಗಿಸಬೇಕು. ನೀವು ಸಾಲಕ್ಕೆ ಅರ್ಹರಾಗಿದ್ದರೆ. ನೀವು ಸುಲಭವಾಗಿ ಸಾಲ ಪಡೆಯಬಹುದು

Join Nadunudi News WhatsApp Group

Join Nadunudi News WhatsApp Group