Ads By Google

WhatsApp Loan: ಇನ್ನುಮುಂದೆ ವಾಟ್ಸಾಪ್ ಪಡೆಯಬಹುದು ಸಾಲ, ಸಿಗಲಿದೆ 10 ಲಕ್ಷ ಸಾಲ.

Now through WhatsApp you can get a loan of up to ten lakh rupees in 24 hours
Ads By Google

WhatsApp Loan Latest: ಇದೀಗ ಸಾಲ ಪಡೆದುಕೊಳ್ಳುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ನಿಮಗೆ ಸಾಲ ಬೇಕಾದರೆ ನೀವು ಇನ್ನುಮುಂದೆ ಟೆನ್ಶನ್ ಆಗುವ ಅಗತ್ಯ ಇಲ್ಲ. ಇದೀಗ ನೀವು ವಾಟ್ಸಾಪ್ (WhatsApp) ಮೂಲಕ ಸಾಲ ಪಡೆಯಬಹುದು.

ಸಲ ಪಡೆಯುವವರಿಗೆ ಹೊಸ ಮಾಹಿತಿ
ಬ್ಯಾಂಕಿಂಗ್ ಅಲ್ಲದ ಪ್ರಮುಖ ಹಣಕಾಸು ಕಂಪನಿಗಳಲ್ಲಿ ಒಂದಾಗಿ ಮುಂದುವರಿದಿರುವ ಐಐಎಫ್‌ಎಲ್ ಫೈನಾನ್ಸ್ ಇತ್ತೀಚೆಗೆ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿದೆ. IIFL ಫೈನಾನ್ಸ್ ವಾಟ್ಸಾಪ್ ಮೂಲಕ ಸಾಲ ನೀಡುವುದಾಗಿ ಘೋಷಿಸಿದೆ.

Image Credit: marca

ವಾಟ್ಸಾಪ್ ಮೂಲಕ ಒಂದೇ ಬಾರಿ ರೂ. 10 ಲಕ್ಷದ ವರೆಗೆ ಸಾಲ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಸಾಲದ ಅರ್ಹತೆ ಕ್ಷಣಗಳಲ್ಲಿ ತಿಳಿಯುತ್ತದೆ. ತ್ವರಿತ ಅನುಮೋದನೆಯ ಲಾಭವಿದೆ ಎಂದು ಹೇಳಬಹುದು.

100ರಷ್ಟು ಡಿಜಿಟಲ್ ರೂಪದಲ್ಲಿ ಸಾಲ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿದೆ. ಅಂದರೆ ಎಲ್ಲಿಗೂ ಹೋಗುವ ಅಗತ್ಯವಿಲ್ಲ. ಸಾಲದ ಅರ್ಜಿಯ ಸಮಯದಿಂದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವ ವರೆಗೆ ಪ್ರಕ್ರಿಯೆಯು ಆನ್‌ ಲೈನ್‌ ನಲ್ಲಿ ನಡೆಯುತ್ತದೆ.

ವಾಟ್ಸಾಪ್ ಮೂಲಕ ಸಾಲ ಕೂಡ ಪಡೆಯಬಹುದು
ದೇಶದಲ್ಲಿ ಸುಮಾರು 450 ಮಿಲಿಯನ್ ಬಳಕೆದಾರರು ವಾಟ್ಸಾಪ್ ಬಳಸುತ್ತಿದ್ದಾರೆ. ವಾಟ್ಸಾಪ್ ಮೂಲಕ ಯಾವಾಗ ಬೇಕಾದರೂ ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಸೇವೆಗಳು ದಿನದ 24 ಗಂಟೆಯೂ ಲಭ್ಯವಿದೆ.

Image Credit: gearrice

ಆದ್ದರಿಂದ ನೀವು ಯಾವಾಗ ಬೇಕಾದರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಈ ವಾಟ್ಸಾಪ್ ಸಾಲ ಸೌಲಭ್ಯವು ಕೇವಲ ವ್ಯಾಪಾರ ಸಾಲಗಳಿಗೆ ಮಾತ್ರ ಲಭ್ಯವಿದೆ.

ನೀವು ವಾಟ್ಸಪ್ ಮೂಲಕ ಸಾಲ ಪಡೆಯಲು ಬಯಸಿದರೆ, 9019702184 ಈ ನಂಬರ್ ಸೇವ್ ಮಾಡಿಕೊಂಡು ವಾಟ್ಸಾಪ್‌ನಲ್ಲಿ ಹಾಯ್ ಎಂದು ಸಂದೇಶ ಕಳುಹಿಸಿ. ಚಾಟ್ ಬೋಟ್ ಅಗತ್ಯವಿರುವ ಎಲ್ಲಾ ವಿವರಗಳನ್ನು ಕೇಳುತ್ತದೆ. ನೀವು ಆ ಮಾಹಿತಿಯನ್ನು ಒದಗಿಸಬೇಕು. ನೀವು ಸಾಲಕ್ಕೆ ಅರ್ಹರಾಗಿದ್ದರೆ. ನೀವು ಸುಲಭವಾಗಿ ಸಾಲ ಪಡೆಯಬಹುದು

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in