WhatsApp Login : ಈಗ WhatsApp ಓಪನ್ ಮಾಡಲು ಮೊಬೈಲ್ ನಂಬರ್ ಅಗತ್ಯ ಇಲ್ಲ, WhatsApp ನಿಂದ ಹೊಸ ಸೇವೆ ಆರಂಭ.
ಈಗ ಮೊಬೈಲ್ ನಂಬರ್ ಇಲ್ಲದೆ ವಾಟ್ಸಾಪ್ ಲಾಗಿನ್ ಆಗಬಹುದು.
WhatsApp Login With Email Account: ಮಿಲಿಯನ್ ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ WhatsApp ಚಾಟಿಂಗ್ ಗೆ ಬೆಸ್ಟ್ ಅಪ್ಲಿಕೇಶನ್ ಎನ್ನಬಹುದು. ಸದ್ಯ WhatsApp ನಲ್ಲಿ ಈಗಾಗಲೇ ಹಲವು ಫೀಚರ್ ಬಿಡುಗಡೆಗೊಂಡಿದೆ. ಇತ್ತೀಚೆಗಷ್ಟೇ WhatsApp Channel ಆರಂಭಗೊಂಡಿದ್ದು ವಾಟ್ಸಪ್ ಮತ್ತೊಂದು ಹೆಜ್ಜೆ ಮುಂದೆ ಸಾಗಿದೆ.
ದೇಶದ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಆಗಿರುವ WhatsApp ಇತ್ತೀಚಿಗೆ ವಿಭಿನ್ನ ಫೀಚರ್ ನ ಮೂಲಕ ಗ್ರಾಹಕರಿಗೆ ತಲುಪುತ್ತಿದೆ. ಸದ್ಯ ವಾಟ್ಸಾಪ್ ನಲಿ ಚಾನೆಲ್ ಫೀಚರ್ ವೈರಲ್ ಆಗುತ್ತಿದಂತೆ ಮೆಟಾ ಇದೀಗ ಮತ್ತೊಂದು ಆಕರ್ಷಕ ಫೀಚರ್ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ವಾಟ್ಸಾಪ್ ನ ಈ ನೂತನ ಫೀಚರ್ ನಿಮಗೆ ಸೈನ್ ಇನ್ ಆಯ್ಕೆಗೆ ಹೆಚ್ಚಿನ ಸಹಾಯ ಮಾಡಲಿದೆ.
ಇನ್ನುಮುಂದೆ ಫೋನ್ ನಂಬರ್ ಇಲ್ಲದೆಯೂ ವಾಟ್ಸಾಪ್ ಲಾಗಿನ್ ಮಾಡಬಹುದು
ಸಾಮಾನ್ಯವಾಗಿ ಯಾರೊಬ್ಬರೂ WhatsApp ಖಾತೆಯನ್ನು ತೆರೆಯಬೇಕಿದ್ದರೆ, ಮೊದಲು Mobile Number ಅನ್ನು ಹಾಕಿ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬಂದ ತಕ್ಷಣ Login ಮಾಡಲು ಅನುಮತಿ ದೊರೆಯುತ್ತಿತ್ತು.
ಈ OTP ಮೂಲಕ ಲಾಗಿನ್ ಆಗುವ ಪ್ರಕ್ರಿಯೆ ಬಳಕೆದಾರರಿಗೆ ಸ್ವಲ್ಪ ಸಮಸ್ಯೆಯನ್ನು ಉಂಟುಮಾಡಬಹುದು. ಏಕೆಂದರೆ ಕೆಲವೊಮ್ಮೆ ನೆಟ್ವರ್ಕ್ ಇರದ ಸಮಯದಲ್ಲಿ ಈ OTP ಸರಿಯಾದ ಸಮಯಕ್ಕೆ ಬಳಕೆದಾರರಿಗೆ ತಲುಪುದಿಲ್ಲ. ಈ ವಿಷಯವನ್ನು ಗಮನದ್ಲಲಿಟ್ಟುಕೊಂಡು ಸದ್ಯ ಮೆಟಾ ತನ್ನ ಬಳಕೆದಾರರಿಗೆ ಫೋನ್ ನಂಬರ್ ಹಾಕದೆ WhatsApp Login ಮಾಡಲು ಹೊಸ ಫೀಚರ್ ಅನ್ನು ಪರಿಚಯಿಸಿದೆ. ನೂತನ ಫೀಚರ್ ನ ಮೂಲಕ ಸುಲಭವಾಗಿ ವಾಟ್ಸಾಪ್ ಲಾಗಿನ್ ಆಗಬಹುದಾಗಿದೆ.
ಇಮೈಲ್ ಮೂಲಕ ಸುಲಭವಾಗಿ ವಾಟ್ಸಾಪ್ ಗೆ ಲಾಗಿನ್ ಆಗಿ
ಸದ್ಯ ಮೆಟಾ ವಾಟ್ಸ್ಯಾಪ್ ಗೆ ಲಾಗಿನ್ ಆಗಲು ಪರ್ಯಾಯ ಮಾರ್ಗವನ್ನು ಕಂಡುಹಿಡಿದಿದೆ. Android ಮತ್ತು iOS ಗಾಗಿ WhatsApp ನ ಬೀಟಾ ಆವೃತ್ತಿಯಲ್ಲಿ ‘ಇಮೇಲ್ ಪರಿಶೀಲನೆ’ ವೈಶಿಷ್ಟ್ಯವನ್ನು ‘ಖಾತೆ ವಿಭಾಗ’ ಅಡಿಯಲ್ಲಿ ಹೊಸ ಅಳವಡಿಸಿದೆ.
ಇದರಿಂದಾಗಿ ಬಳಕೆದಾರರು ತಮ್ಮ ವಾಟ್ಸ್ಯಾಪ್ ಖಾತೆಯನ್ನು ಇಮೈಲ್ ನ ಮೂಲಕ ಸುಲಭವಾಗಿ ಸಂಯೋಜಿಸಬಹುದು. WhatsApp Setting ವಿಭಾಗದಲ್ಲಿ ನೀವು ಇಮೈಲ್ ಪರಿಶೀಲನೆ ಆಯ್ಕೆಯನ್ನು ಕಾಣಬಹುದು. ಪ್ರಸ್ತುತ ಬೀಟಾ ಆವೃತ್ತಿ ಬಳಕೆದಾರರಿಗೆ ಲಭ್ಯವಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಬಳಕೆದಾರರಿಗೂ ಲಭ್ಯವಾಗಲಿದೆ.