WhatsApp: ಒಂದು ವಾಟ್ಸಾಪ್ ಖಾತೆಯನ್ನು ಎಷ್ಟು ಸಾಧನಗಳಲ್ಲಿ ಬಳಸಬಹುದು, ಹೊಸ ಅಪ್ಡೇಟ್ ಬಿಡುಗಡೆ.
ಒಂದು ವಾಟ್ಸಾಪ್ ಖಾತೆಯಲ್ಲಿ ಈಗ ಹಲವು ಡಿವೈಸ್ ಗಳಲ್ಲಿ ಬಳಸಬಹುದಾಗಿದೆ.
WhatsApp Multi Account: ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಇತ್ತೀಚಿಗೆ ಹತ್ತು ಹಲವು ಫೀಚರ್ ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ವಿವಿಧ ಫೀಚರ್ ಅನ್ನು ಬಿಡುಗಡೆಗೊಳಿಸುತ್ತಿದೆ. ಈಗಾಗಲೇ ವಾಟ್ಸಾಪ್ ತನ್ನ ಚಾಟಿಂಗ್ ಸಿಸ್ಟಮ್ ನಲ್ಲಿ ಅನೇಕ ಬದಲಾವಣೆಯನ್ನು ತಂದಿದೆ. ಚಾಟಿಂಗ್ ಸಿಟಿಎಮ್ ನಲ್ಲಿ ಅನೇಕ ಫೀಚರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ.
ವಾಟ್ಸಾಪ್ ನಲ್ಲಿ ಮಲ್ಟಿ ಅಕೌಂಟ್ ಫೀಚರ್
ವಾಟ್ಸಪ್ ಬಳಕೆದಾರರಿಗಾಗಿ ಇದೀಗ ಮಲ್ಟಿ ಅಕೌಂಟ್ ನ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ವಾಟ್ಸಾಪ್ ಬಳಕೆದಾರರು ಒಂದೇ ಮೊಬೈಲ್ ನಲ್ಲಿ ವಿವಿಧ ಅಕೌಂಟ್ ಗಳನ್ನೂ ತೆರೆಯಬಹುದಾಗಿದೆ.
ಈ ಹಿಂದೆ ಮೊಬೈಲ್ ನಲ್ಲಿ ಎರಡು ಸಿಮ್ ಗಳು ಇದ್ದರು ಕೂಡ ಒಂದೇ ನಂಬರ್ ನಿಂದ ವಾಟ್ಸಾಪ್ ಖಾತೆ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಒಂದು ಮೊಬೈಲ್ ನಲ್ಲಿ ಹೆಚ್ಚಿನ ವಾಟ್ಸಾಪ್ ಖಾತೆಯನ್ನು ತೆರೆಯಲು ವಾಟ್ಸಾಪ್ ಅವಕಾಶ ಕಲ್ಪಿಸಿಕೊಡಲಿದೆ.
ನಾಲ್ಕು ಮೊಬೈಲ್ ನಲ್ಲಿ ಒಂದೇ ವಾಟ್ಸಾಪ್ ಅಕೌಂಟ್
ಇದೀಗ ವಾಟ್ಸಾಪ್ ಬಳಕೆದಾರರಿಗೆ ನಾಲ್ಕು ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಒಂದೇ ವಾಟ್ಸಾಪ್ ಅನ್ನು ಬಳಸುವ ಹೊಸ ಫೀಚರ್ ಬಿಡುಗಡೆಯಾಗುವ ಬಗ್ಗೆ ಈಗಾಗಲೇ ವರದಿಯಾಗಿದೆ. ವಾಟ್ಸಾಪ್ ಬಳಕೆದಾರರು ತಮ್ಮ ಪ್ರಸ್ತುತ ವಾಟ್ಸಾಪ್ ಖಾತೆಯನ್ನು ಮತ್ತೊಂದು ಮೊಬೈಲ್ ಸಾಧನಕ್ಕೆ ಲಿಂಕ್ ಮಾಡಿ ಸಕ್ರಿಯವಾಗಿರಿಸಿಕೊಳ್ಳಬಹುದು.
ಒಂದು ವಾಟ್ಸಾಪ್ ಖಾತೆಯನ್ನು ಎಷ್ಟು ಸಾಧನಗಳಲ್ಲಿ ಬಳಸಬಹುದು
ಸದ್ಯದಲ್ಲೇ ವಾಟ್ಸಾಪ್ ಬಳಕೆದಾರರು ತಮ್ಮ ವಾಟ್ಸಾಪ್ ಖಾತೆಯನ್ನು ಎರಡು ಫೋನ್ ಗಳು ಸೇರಿದಂತೆ ನಾಲ್ಕು ಸಾಧನಗಳಲ್ಲಿ ಲಿಂಕ್ ಮಾಡಲು ಹೊಸ ವೈಶಿಷ್ಟ್ಯವನ್ನು ನೀಡಲಾಗಿದೆ.
ಇದರಿಂದಾಗಿ ಒಂದೇ ಬಾರಿ ಎರಡು ಫೋನ್ ಗಳು, ಡೆಸ್ಕ್ ಟಾಪ್ ಹಾಗೂ ಟ್ಯಾಬ್ಲೆಟ್ ಗಳಲ್ಲಿ ಸಂಪರ್ಕದಲ್ಲಿರಲು ಸುಲಭವಾಗುತ್ತದೆ. ಆದರೆ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ನಾಲ್ಕಕ್ಕಿಂತ ಹೆಚ್ಚಿನ ಸಾಧನಗಳಲ್ಲಿ ಒಂದೇ ಖಾತೆಯ ವಾಟ್ಸಾಪ್ ತೆರೆದಿಡಲು ಸಾಧ್ಯವಾಗುವುದಿಲ್ಲ. ನಾಲ್ಕಕ್ಕಿಂತ ಹೆಚ್ಚಿನ ಸಾಧನಗಳಲ್ಲಿ ಒಂದೇ ಖಾತೆ ತೆರಯಲು ಅಸಾಧ್ಯವಾಗುತ್ತದೆ.